Kawasaki W175: ನೋಡಲು ಯಮಹಾ RX100 ನಂತೆ ಕಾಣುವ ಖಾವಾಸಾಕಿ ಬೈಕ್ ಬಿಡುಗಡೆ, 45 Km ಮೈಲೇಜ್

Kawasaki W175 Bike Price And Features: ಬೈಕ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈಗಿನ ಕಾಲದ ಯುವಕರು ಹೆಚ್ಚು ಹೆಚ್ಚು ಸ್ಪೋರ್ಟ್ಸ್ ಬೈಕ್ ಖರೀದಿ ಮಾಡುವುದನ್ನು ನಾವು ಕಾಣಬಹುದು. ಇದರ ನಡುವೆ ಸಾಕಷ್ಟು ಬೈಕ್ ತಯಾರಕ ಕಂಪನಿಗಳು ಹಲವು ಬಗೆಯ ಸ್ಪೋರ್ಟ್ಸ್ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇನ್ನು ಕೆಲವು ವರ್ಷಗಳ ಹಿಂದೆ ಯಮಹಾ ಕಂಪನಿಯ RX 100 ಬೈಕ್ ಯುವಕರ ಮೆಚ್ಚಿನ ಬೈಕ್ ಅನಿಸಿಕೊಂಡಿತ್ತು, ಆದರೆ ಈಗ ಯಮಹಾ RX 100 (Yamaha RX100) ಬೈಕಿಗೆ ಪೈಪೋಟಿ ಕೊಡಲು ಖಾವಾಸಾಕಿ ಕಂಪನಿ ಹೊಸ ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವುದರ ಮೂಲಕ ಯುವಕರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ.

WhatsApp Group Join Now
Telegram Group Join Now

ನೋಡಲು ಯಮಹಾ RX 100 ಬೈಕ್ ನಂತೆ ಇದೆ ಖಾವಾಸಾಕಿ ಬೈಕ್
ಯಮಹಾ RX 100 ಆನ್ ಹೋಲುವ ಖಾವಾಸಾಕಿ ಸ್ಪೋರ್ಟ್ಸ್ ಬೈಕ್ (Kawasaki Sports Bike) ಈಗ ಮಾರುಕಟ್ಟೆಗೆ ಲಾಂಚ್ ಆಗಿದ್ದು ಜನರು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಯುವಕರಿಗೆ ಬಹಳ ಇಷ್ಟವಾಗುವ ರೀತಿಯಲ್ಲಿ ಖಾವಾಸಾಕಿ ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲಾಗಿದೆ. ಹೌದು, ಖಾವಾಸಾಕಿ W175 (Kawasaki w175) ಬೈಕ್ ಈಗ ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಖಾವಾಸಾಕಿ W175 ಬೈಕ್ 177cc ಬೈಕ್ ಆಗಿದ್ದು ಯುವಕರ ನೆಚ್ಚಿನ ಬೈಕ್ ಅನಿಸಿಕೊಂಡಿದೆ.

ಖಾವಾಸಾಕಿ W175 ಬೆಲೆ ಮತ್ತು ವಿಶೇಷತೆ
ಖಾವಾಸಾಕಿ W175 ಬೈಕ್ ಕಡಿಮೆ ಬೆಲೆಯ ಬೈಕ್ ಆಗಿದ್ದು ಸ್ಪೋರ್ಟ್ಸ್ ಬೈಕ್ ಪ್ರಿಯರಿಗೆ ಇದು ಬೆಸ್ಟ್ ಬೈಕ್ ಎಂದು ಹೇಳಬಹುದು. ಮೊಬೈಲ್ ಚಾರ್ಜಿಂಗ್, ನೇವಿಗೇಷನ್ ಸಿಸ್ಟಮ್, ಡಿಜಿಟಲ್ ಮೀಟರ್, ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್, ಡಿಜಿಟಲ್ ಟ್ರಿಪ್, ಓಡೋಮೀಟರ್ ಸೇರಿದಂತೆ ಹಲವು ವಿಶೇಷತೆಯನ್ನು ನಾವು ಈ ಬೈಕಿನಲ್ಲಿ ಕಾಣಬಹುದು. ಇನ್ನು ಖಾವಾಸಾಕಿ W175 ಬೈಕ್ 4 ಸ್ಟ್ರೋಕ್ ಎಂಜಿನ್ ಹೊಂದಿದ್ದು 13.2nm ಟಾರ್ಕ್ ಉತ್ಪಾದನೆ ಮಾಡುತ್ತದೆ.

ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಖಾವಾಸಾಕಿ W175 ಬೈಕ್ ಸುಮಾರು 45 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಬೆಲೆ ಬಗ್ಗೆ ಮಾತನಾಡುವುದಾದರೆ, ಖಾವಾಸಾಕಿ W175 ಬೈಕ್ ಬೆಲೆ ಸುಮಾರು 1.35 ಲಕ್ಷ ರೂಪಾಯಿ ಆಗಿದ್ದು ಬಡಜನರು ಕೂಡ ಫೈನಾನ್ಸಿಯಲ್ ಪ್ಲ್ಯಾನ್ ನಲ್ಲಿ ಖಾವಾಸಾಕಿ W175 ಬೈಕ್ ಖರೀದಿ ಮಾಡಬಹುದು. ಕೇವಲ 10 ರೂಪಾಯಿ ತನಕ ಡೌನ್ ಪೇಮೆಂಟ್ ಮಾಡುವುದರ ಮೂಲಕ ಖಾವಾಸಾಕಿ W175 ಅನ್ನು ಖರೀದಿ ಮಾಡಬಹುದು.

Leave a Comment