FD In Post Office: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 5 ಲಕ್ಷ ಇಟ್ಟರೆ ಸಿಗಲಿದೆ 10 ಲಕ್ಷ ಬಡ್ಡಿ, ಒಟ್ಟು 15 ಲಕ್ಷ ಖಾತೆಗೆ

Post office 15 Year FD Scheme Investment Plan: ಹೂಡಿಕೆ ಮಾಡಲು ಒಂದು ಉತ್ತಮವಾದ ವೇದಿಕೆ ಅಂದರೆ ಅದು ಪೋಸ್ಟ್ ಆಫೀಸ್ (Post Office) ಎಂದು ಹೇಳಬಹುದು. ಹೌದು, ಪೋಸ್ಟ್ ಆಫೀಸ್ ನಲ್ಲಿ ನಾವು ಹಣ ಹೂಡಿಕೆ ಮಾಡಿದರೆ ನಮ್ಮ ಹಣಕ್ಕೆ ಸುರಕ್ಷತೆ ಮಾತ್ರವಲ್ಲದೆ ನಮ್ಮ ಹಣಕ್ಕೆ ಉತ್ತಮವಾದ ಬಡ್ಡಿ ಕೂಡ ಸಿಗುತ್ತದೆ. ಇದರ ನಡುವೆ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗಾಗಿ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಪೋಸ್ಟ್ ಆಫೀಸ್ ನಲ್ಲಿ ಈಗಾಗಲೇ ಹಲವು ಹೂಡಿಕೆಯ ಯೋಜನೆಯ ಲಾಭವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಇನ್ನು ಸಾಕಷ್ಟು ಜನರಿಗೆ ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಕೆಲವು ಯೋಜನೆಗಳ ಬಗ್ಗೆ ಮಾಹಿತಿ ತಿಳಿದಿಲ್ಲ. ಇದರ ನಡುವೆ ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಯೋಜನೆ ಜಾರಿಯಲ್ಲಿ ಇದ್ದು ಈ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 10 ಲಕ್ಷ ರೂಪಾಯಿಯನ್ನು ಬಡ್ಡಿಯಾಗಿ ಪಡೆದುಕೊಳ್ಳಬಹುದು. ಹಾಗಾದರೆ ಪೋಸ್ಟ್ ಆಫೀಸ್ ನಲ್ಲಿ ಇರುವ ಹಣ ಡಬಲ್ ಮಾಡುವ ಈ ಯೋಜನೆ ಯಾವುದು ಮತ್ತು ಈ ಯೋಜನೆ ಲಾಭ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಹೂಡಿಕೆ ಮಾಡಿ (Post Office FD Scheme)
ಪೋಸ್ಟ್ ಆಫೀಸ್ ನಲ್ಲಿ ಹಣ ಗಳಿಸಲು ಇರುವ ಉತ್ತಮವಾದ ಆಯ್ಕೆಗಳು ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಕೂಡ ಒಂದು ಎಂದು ಹೇಳಬಹುದು. ಹೌದು, ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣ ಸುರಕ್ಷಿತ ಆಗಿರುವುದು ಮಾತ್ರವಲ್ಲದೆ ನಮ್ಮ ಹಣಕ್ಕೆ ಉತ್ತಮವಾದ ಬಡ್ಡಿ ಕೂಡ ಸಿಗುತ್ತದೆ ಎಂದು ಹೇಳಬಹುದು. ಇನ್ನು ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಹೂಡಿಕೆ ಮಾಡುವ ಸಮಯದಲ್ಲಿ ಕೆಲವು ನಿಯಮಗಳನ್ನು ಅನುಸರಿಸಿದರೆ ನಾವು FD ಯೋಜನೆಯಲ್ಲಿ ದೊಡ್ಡ ಮೊತ್ತದ ಬಡ್ಡಿ ಪಡೆದುಕೊಳ್ಳಬಹುದು.

5 ಲಕ್ಷಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ
ಪೋಸ್ಟ್ ಆಫೀಸ್ ನ FD ಯೋಜನೆಯಲ್ಲಿ ನಾವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 10 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು. ಇನ್ನು ಪೋಸ್ಟ್ ಆಫೀಸ್ FD ಯಲ್ಲಿ ಉತ್ತಮವಾದ ಬಡ್ಡಿ ಪಡೆದುಕೊಳ್ಳಬೇಕು ಅಂದರೆ ನಾವು ಪೋಸ್ಟ್ ಆಫೀಸ್ ನಲ್ಲಿ 1 ವರ್ಷದಿಂದ 5 ವರ್ಷದ FD ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. 5 ವರ್ಷಗಳ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಮೂರುಪಟ್ಟು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

ನೀವು 5 ವರ್ಷಗಳ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.5 % ಬಡ್ಡಿ ಪಡೆದುಕೊಳ್ಳಬಹುದು. ನಿಮ್ಮ ಐದು ವರ್ಷದ FD ಯೋಜನೆ ಮುಕ್ತಾಯದ ನಂತರ ನೀವು ಅದನ್ನು ಮತ್ತೆ ಎರಡು ಬಾರಿ 5 ವರ್ಷಗಳಿಗೆ ಅಂದರೆ ಒಟ್ಟಾಗಿ 15 ವರ್ಷಗಳಿಗೆ ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ನೀವು 5 ಲಕ್ಷ ರೂಪಾಯಿಯನ್ನು ಶೇಕಡಾ7.5 ರ ಬಡ್ಡಿ ದರದಲ್ಲಿ 5 ವರ್ಷಗಳ ಕಾಲ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ 2.2 ಲಕ್ಷ ರೂಪಾಯಿಯನ್ನು ಬಡ್ಡಿಯಾಗಿ ಪಡೆದುಕೊಳ್ಳಬಹುದು. ಐದು ವರ್ಷಗಳಿಂದ ಅಸಲು ಮತ್ತು ಬಡ್ಡಿ ಒಟ್ಟಾಗಿ ನೀವು ಹೂಡಿಕೆ ಮಾಡಿದ ಹಣ ಒಟ್ಟು 7.2 ಲಕ್ಷ ರೂಪಾಯಿ ಆಗುತ್ತದೆ.

ಹೀಗೆ 5 ವರ್ಷಗಳ ಅವಧಿ ಮುಕ್ತಾಯವಾದ ನಂತರ ಮತ್ತೆ ಅದನ್ನು 5 ವರ್ಷಗಳಿಗೆ ವಿಸ್ತರಣೆ ಮಾಡಬೇಕು. ಹೀಗೆ ಮತ್ತೆ 5 ವರ್ಷಗಳಿಗೆ ವಿಸ್ತರಣೆ ಮಾಡಿದರೆ ನಿಮಗೆ ಒಟ್ಟು 5.5 ಲಕ್ಷ ರೂಪಾಯಿ ಸಗುತ್ತದೆ. ಹೀಗೆ ಹತ್ತು ವಾರ್ಷದ ನಂತರ ನಿಮ್ಮ ಅಸಲು ಮತ್ತು ಬಡ್ಡಿ ಒಟ್ಟಾಗಿ ನಿಮ್ಮ ಒಟ್ಟು ಹೂಡಿಕೆ 10.5 ಲಕ್ಷ ರೂಪಾಯಿ ಆಗುತ್ತದೆ. ಹೀಗೆ 15 ವರ್ಷಗಳ ಕಾಲ ನೀವು ಹೂಡಿಕೆ ಮಾಡಿದರೆ ನಿಮ್ಮ ಒಟ್ಟು ಹೂಡಿಕೆಯ ಮೊತ್ತ ಮತ್ತು ಬಡ್ಡಿ ಒಟ್ಟಾಗಿ 15 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದು. ಇನ್ನು ಈ ಹಣದಲ್ಲಿ ನೀವು ಹೂಡಿಕೆ ಮಾಡಿದ ಮೊತ್ತ 5 ಲಕ್ಷ ರೂಪಾಯಿಯಾದರೆ ನಿಮಗೆ ಸಿಕ್ಕ ಒಟ್ಟು ಬಡ್ಡಿ ಮೊತ್ತ 10 ಲಕ್ಷ ರೂಪಾಯಿ ಆಗಿರುತ್ತದೆ.

Leave a Comment