Income Tax File: ಈ ವರ್ಷ ಆದಾಯ ತೆರಿಗೆ ಸಲ್ಲಿಸುವಾಗ ಈ 5 ತಪ್ಪು ಮಾಡಿದರೆ ನಿಮಗೆ ಬರಲಿದೆ ನೋಟೀಸ್, ಕೇಂದ್ರದ ಎಚ್ಚರಿಕೆ

Income Tax Filing 2025: 2025 ರ ಇನ್ಕಮ್ ಟ್ಯಾಕ್ಸ್ ಪಾವತಿ (Income Tax Payments) ಆರಂಭ ಆಗಲಿದ್ದು ಜೂಲೈ 31 ರೊಳಗಾಗಿ ಜನರು ಇನ್ಕಮ್ ಟ್ಯಾಕ್ಸ್ ಪಾವತಿ ಮಾಡಬೇಕಾಗಿದೆ. ಇನ್ನು 2025 ರ ವರ್ಷದಲ್ಲಿ ಆದಾಯ ತೆರಿಗೆ ನಿಯಮದಲ್ಲಿ ಹಲವು ಬದಲಾಣೆ ಮಾಡಲಾಗಿದೆ ಮತ್ತು ಬದಲಾದ ನಿಯಮದ ಅನ್ವಯ ಜನರು ಇನ್ಕಮ್ ಟ್ಯಾಕ್ಸ್ ಪಾವತಿ ಮಾಡಬೇಕು. ಇನ್ನು ಇನ್ಕಮ್ ಟ್ಯಾಕ್ಸ್ ಪಾವತಿ ಮಾಡುವ ಕೆಲವು ತಪ್ಪುಗಳನ್ನು ಮಾಡಿದರೆ ನೀವು ಭಾರತೀಯ ತೆರಿಗೆ ಇಲಾಖೆಯಿಂದ ನೋಟೀಸ್ ಪಡೆಯಬೇಕಾಗುತ್ತದೆ. ಹಾಗಾದರೆ 2025 ರ ವರ್ಷದಲ್ಲಿ ಇನ್ಕಮ್ ಟ್ಯಾಕ್ಸ್ ಪಾವತಿ ಮಾಡುವಾಗ ಯಾವ ತಪ್ಪು ಮಾಡಿದರೆ ನಿಮ್ಮ ಮನೆಗೆ ತೆರಿಗೆ ನೋಟೀಸ್ (Tax Notice) ಬರಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಇನ್ಕಮ್ ಟ್ಯಾಕ್ಸ್ ಸಲ್ಲಿಸಲು ಜೂಲೈ 31 ಲಾಸ್ಟ್ ಡೇಟ್
ಹೌದು, 2025 ರ ವರ್ಷದ ಇನ್ಕಮ್ ಟ್ಯಾಕ್ಸ್ ಸಲ್ಲಿಸಲು ಜೂಲೈ 31 ಕೊನೆಯ ದಿನಾಂಕ ಆಗಿದೆ ಮತ್ತು ಈ ದಿನಾಂಕದ ಒಳಗೆ ಇನ್ಕಮ್ ಟ್ಯಾಕ್ಸ್ ಸಲ್ಲಿಸದೆ ಇದ್ದರೆ ದಂಡ ಪಾವತಿ ಮಾಡಬೇಕು. ಇನ್ನು ಭಾರತೀಯ ತೆರಿಗೆ ಇಲಾಖೆ ಪ್ರಸ್ತುತ ವರ್ಷದಲ್ಲಿ 7 ಲಕ್ಷ ರೂಪಾಯಿಯ ತನಕ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ ಮತ್ತು ಆದಾಯ ತೆರಿಗೆ ಸಲ್ಲಿಸುವವರು ಇದರ ಲಾಭ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ತೆರಿಗೆ ನಿಯಮಗಳಲ್ಲಿ ಅನೇಕ ಹೊಸ ಬದಲಾವಣೆ ಜಾರಿಗೆ ತಂದಿರುವುದನ್ನು ನಾವು ಕಾಣಬಹುದು.

ತೆರಿಗೆ ಸಲ್ಲಿಸುವಾಗ ಈ 5 ಮಾಡಿದರೆ ಬರಲಿದೆ ನೋಟೀಸ್
ತೆರಿಗೆ ಸಲ್ಲಿಸುವಾಗ ಕೆಲವರು ತೆರಿಗೆ ಉಳಿಸುವ ಉದ್ದೇಶದಿಂದ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಆದರೆ ತೆರಿಗೆ ಉಳಿಸಲು ತಪ್ಪು ಮಾರ್ಗವನ್ನು ಕಂಡುಕೊಂಡರೆ ಅವರ ಮನೆಗೆ ತೆರಿಗೆ ನೋಟೀಸ್ ಬರುವುದು ಖಚಿತವಾಗಿದೆ. ಹಾಗಾದರೆ ಯಾವ 5 ತಪ್ಪು ಮಾಡಿದರೆ ಮನೆಗೆ ತೆರಿಗೆ ನೋಟೀಸ್ ಬರಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

* ಹಳೆಯ ಮತ್ತು ಹೊಸ ತೆರಿಗೆ ನಿಯಮಗಳು ವಿವಿಧ ರೀತಿಯ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಕಾರಣಳಿಂದ ಆದಾಯ ತೆರಿಗೆ ಸಲ್ಲಿಸುವ ಸಮಯದಲ್ಲಿ ಹೊಸ ಮತ್ತು ಹಳೆಯ ತೆರಿಗೆ ಪದ್ದತಿಯ ಬಗ್ಗೆ ತಿಳಿದುಕೊಂಡು ಆದಾಯ ತೆರಿಗೆ ಸಲ್ಲಿಸುವುದು ಉತ್ತಮ, ಇಲ್ಲಾದರೆ ತೆರಿಗೆ ನೋಟೀಸ್ ಪಡೆದುಕೊಳ್ಳಬೇಕಾಗುತ್ತದೆ.

* ಪ್ರತಿ ವರ್ಷ ತೆರಿಗೆ ಸಲ್ಲಿಸುವವರು ಸೆಕ್ಷನ್ 80C ಮತ್ತು 80D ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು, ಆದರೆ ತೆರಿಗೆ ವಿನಾಯಿತಿ ಪಡೆಯುವ ಸಮಯದಲ್ಲಿ ಯಾವ ಸೆಕ್ಷನ್ ಆಯ್ಕೆ ಮಾಡಿಕೊಳ್ಳುತ್ತೀರಿ ಅನ್ನುವುದು ಬಹಳ ಮುಖ್ಯ. ಸೆಕ್ಷನ್ ಆಯ್ಕೆ ಮಾಡುವ ಸಮಯದಲ್ಲಿ ತಪ್ಪು ಮಾಡಿದರೆ ನಿಮ್ಮ ಮನೆಗೆ ತೆರಿಗೆ ನೋಟೀಸ್ ಬರುವುದು ಖಚಿತ.

* ನಿಮ್ಮ ಹೆಸರು, ವಿಳಾಸ, ಪಾನ್ ಸಂಖ್ಯೆ, ಬ್ಯಾಂಕ್ ಖಾತೆ ಸೇರಿದಂತೆ ಕೆಲವು ಮಾಹಿತಿಯನ್ನು ನೀವು ತೆರಿಗೆ ಸಲ್ಲಿಸುವ ಸಮಯದಲ್ಲಿ ತಪ್ಪಾಗಿ ನೀಡಿದರೆ ನಿಮಗೆ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಈ ಕಾರಣಗಳಿಂದ ಆದಾಯ ತೆರಿಗೆ ಫಾರ್ಮ್ ಭರ್ತಿಮಾಡುವ ಸಮಯದಲ್ಲಿ ಎಚ್ಚರ ಅಗತ್ಯ.

* ನಿಮಗೆ ಸಂಬಳ, ಬಾಡಿಗೆ, ಬಡ್ಡಿ ಅಥವಾ ಇತರೆ ಯಾವುದೇ ಮೂಲದಿಂದ ಆದಾಯ ಬಂದರೂ ಕೂಡ ನೀವು ಆದಾಯ ತೆರಿಗೆ ಸಲ್ಲಿಸುವ ಸಮಯದಲ್ಲಿ ಅದನ್ನು ನೀಡುವುದು ಕಡ್ಡಾಯ, ಇಲ್ಲವಾದರೆ ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಳ್ಳಬೇಕಾಗುತ್ತದೆ.

* ಆದಾಯ ತೆರಿಗೆ ಸಲ್ಲಿಸುವ ಸಮಯದಲ್ಲಿ ಫಾರ್ಮ್ 26AS ಗೆ ನಿಮ್ಮ ಮಾಹಿತಿ ಹೊಂದಾಣಿಕೆ ಆಗುತ್ತದೆಯೇ ಅನ್ನುವುದನ್ನು ನೀವು ಕಡ್ಡಾಯವಾಗಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ನಿಮ್ಮ ಮಾಹಿತಿ ಫಾರ್ಮ್ 26AS ಗೆ ಹೊಂದಾಣಿಕೆಯಾಗುವುದು ಅತೀ ಆವ್ಹಯ್ಸ್ಕವಾಗಿದೆ. ಫಾರ್ಮ್ 26AS ನಿಮಗೆ ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ನಲ್ಲಿ ಸಿಗುತ್ತದೆ.

Leave a Comment