UCC Acts: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ..! ನರೇಂದ್ರ ಮೋದಿ ಸರ್ಕಾರದ ಮಹತ್ವದ ಹೆಜ್ಜೆ

Uniform Civil Code Eshtablishment: ದೇಶದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸಂವಿಧಾನದಲ್ಲಿ ಅನೇಕ ಬದಲಾವಣೆಯನ್ನು ಮಾಡಲು ಮುಂದಾಗಿದ್ದಾರೆ ಎಂದು ಹೇಳಬಹುದು. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ ಕಾರಣ ಕೇಂದ್ರ ಸರ್ಕಾರ ಈಗಾಗಲೇ ಹಲವು ಬದಲಾವಣೆಯನ್ನು ದೇಶದಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ ಈಗ ಕೇಂದ್ರ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ಸಾಧನದಲ್ಲಿ ಏಕರೂಪ ನಾಗರೀಕ ಸಂಹಿತೆ ಬಗ್ಗೆ ಚರ್ಚೆ ನಡೆಸಲಾಗಿದೆ ಮತ್ತು ಸದನದಲ್ಲಿ ಬೆಂಬಲ ದೊರೆತ ಕಾರಣ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಬಹುದು. ಹಾಗಾದರೆ ಏನಿದು ಏಕರೂಪ ನಾಗರೀಕ ಸಂಹಿತೆ ಮತ್ತು ಏಕರೂಪ ನಾಗರೀಕ ಸಂಹಿತೆ ಜಾರಿಗೆ ಬಂದರೆ ಯಾವ ನಿಯಮದಲ್ಲಿ ಮತ್ತು ಕಾನೂನುನಲ್ಲಿ ಬದಲಾವಣೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಏನಿದು ಏಕರೂಪ ನಾಗರೀಕ ಸಂಹಿತೆ
ಈಗಾಗಲೇ ದೇಶದ ಹಲವು ರಾಜಕೀಯ ಪಕ್ಷಗಳು ದೇಶದಲ್ಲಿ ವಕ್ಫ್ ಮಸೂದೆಗೆ ಬೆಂಬಲ ನೀಡಿದ ಬೆನ್ನಲ್ಲೇ ಈಗ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಮುಂದಾಗಿದೆ. ಇನ್ನು ಏಕರೂಪ ನಾಗರೀಕ ಸಂಹಿತೆ ಪ್ರಕಾರ, ವಿವಾಹ, ವಿಚ್ಛೇಧನ, ಆಸ್ತಿ ಮತ್ತು ಕೆಲವು ವಯಕ್ತಿಕ ವಿಚಾರಗಳು ಎಲ್ಲಾ ಧರ್ಮದ ಜನರಿಗೂ ಒಂದೇ ಆಗಿರಲಿದೆ ಮತ್ತು ಒಂದೇ ಕಾನೂನು ಆಗಿರಲಿದೆ. ದೇಶದಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಈಗಾಗಲೇ ಏಕರೂಪ ನಾಗರೀಕ ಸಂಹಿತೆ ಜಾರಿಯಲ್ಲಿ ಇದೆ ಮತ್ತು ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತಂಡ ಮೊದಲ ರಾಜ್ಯ ಉತ್ತರಾಖಂಡ ಆಗಿದೆ.

23 ನೇ ಕಾನೂನು ಆಯೋಗದ ನೇತೃತ್ವದಲ್ಲಿ ನ್ಯಾಯನುರ್ತಿಗಳಾದ ದಿನೇಶ್ ಮಹೇಶ್ವರಿ (Dinesh Maheshwari) ಏಕರೂಪ ನಾಗರೀಕ ಸಂಹಿತೆ ಬಗ್ಗೆ ಅಧಿಕಾರ ಜೊತೆ ಸಮಾಲೋಚನೆ ನಡೆದಿದ್ದರೆ ಎಂದು ತಿಳಿದುಬಂದಿದೆ. ಕಾನೂನಿನ ಮೂಲಕ ಎಲ್ಲಾ ಧರ್ಮಗಳ ನಡುವೆ ಸಮಾನತೆ ಕಾಪಾಡುವುದು ಈ ಏಕರೂಪ ನಾಗರೀಕ ಸಂಹಿತೆಯ ಪ್ರಮುಖದ ಉದ್ದೇಶ ಆಗಿದೆ. ಇನ್ನು ಕೆಲವು ಪಕ್ಷದವರು ಏಕರೂಪ ನಾಗರೀಕ ಸಂಹಿತೆ ಜಾರಿಗೆ ಬಂದರೆ ಕೆಲವರ ಧಾರ್ಮಿಕತೆಗೆ ಆಡ್ಡಿ ಮಾಡಿದಂತೆ ಆಗುತ್ತದೆ ಎಂದು ಟಿಕೆ ಮಾಡುತ್ತಿದ್ದಾರೆ. ಕೆಲವರು ಏಕರೂಪ ನಾಗರೀಕ ಸಂಹಿತೆ ಬಗ್ಗೆ ಟಿಕೆ ಮಾಡುತ್ತಿರುವುದು ಕೇಂದ್ರದ ಮುಂದಿನ ಹೆಜ್ಜೆಗೆ ಸವಾಲು ಹಾಕಿದಂತೆ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಬಂದರೆ, ಆಸ್ತಿ ವಿಚಾರ ಆಗಿರಬಹುದು, ವಿವಾಹದ ಕಾನೂನು ಮತ್ತು ವಿಚ್ಛೇಧನ ನಿಯಮ ಮತ್ತು ಕೆಲವು ವಯಕ್ತಿಕ ವಿಚಾರಗಳು ಒಂದೇ ಕಾನೂನಿನ ಅಡಿಯಲ್ಲಿ ಬರಲಿದ್ದು ಎಲ್ಲಾ ಧರ್ಮದವರಿಗೂ ಈ ಕಾನೂನು ಒಂದೇ ಆಗಿರಲಿದೆ. ಕೇಂದ್ರ ಸರ್ಕಾರ ಈ ಏಕರೂಪ ನಾಗರೀಕ ಸಂಹಿತೆ BJP ಯ ಮುಂದಿನ ಚುನಾವಣೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಅನ್ನುವುದು ಹಲವು ಜನರ ಅಭಿಪ್ರಾಯ ಕೂಡ ಆಗಿದೆ.

Leave a Comment