Ration Card: BPL ಮತ್ತು APL ಕಾರ್ಡ್ ಇದ್ದವರಿಗೆ ಮತ್ತೊಂದು ಗುಡ್ ನ್ಯೂಸ್, ಜೂನ್ 30 ಕೊನೆಯ ದಿನಾಂಕ

BPL And APL Ration Card Corrections Karnataka: BPL ಮತ್ತು APL ರೇಷನ್ ಕಾರ್ಡ್ ಇದ್ದವರಿಗೆ ಈಗ ರಾಜ್ಯ ಸರ್ಕಾರ ಇನ್ನೊಂದು ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹೌದು, ಸಾಕಷ್ಟು ಸಮಯಗಳಿಂದ BPL ಮತ್ತು APL ರೇಷನ್ ಕಾರ್ಡುಗಳನ್ನು ತಿದ್ದುಪಡಿ ಮಾಡಲಾಗದೆ ಸಾಕಷ್ಟು ಜನರು ಕಷ್ಟಪಡುತ್ತಿದ್ದರು. ಆದರೆ ಈಗ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ BPL ಮತ್ತು APL ರೇಷನ್ ಕಾರ್ಡ್ ಇದ್ದವರಿಗೆ ಕೆಲವು ತಿಂಗಳುಗಳಿಂದ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ಕಪ್ಲಾಪಿಸಿಕೊಟ್ಟಿದೆ. ಹೌದು, BPL ಮತ್ತು APL ರೇಷನ್ ಕಾರ್ಡ್ ಇದ್ದವರು ಈಗ ತಮ್ಮ ಕಾರ್ಡ್ ಅಪ್ಡೇಟ್ ಅಥವಾ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ BPL ಮತ್ತು APL ರೇಷನ್ ಕಾರ್ಡ್ ಇದ್ದವರು ಏನೇನು ತಿದ್ದುಪಡಿ ಮಾಡಿಕ್ಕೊಳ್ಳಬಹುದು ಮತ್ತು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

BPL ಮತ್ತು APL ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ
ಹೌದು, ರಾಜ್ಯ ಆಹಾರ ಮತ್ತು ಬಗರಿಕ ಇಲಾಖೆ ಈಗ BPL ಮತ್ತು APL ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕವನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ಮಾರ್ಚ್ 31 ರ ವರೆಗೆ BPL ಮತ್ತು APL ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿತ್ತು, ಆದರೆ ಈಗ ಆ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಹೌದು, BPL ಮತ್ತು APL ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕವನ್ನು ಈಗ ಜೂನ್ 30 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ BPL ಮತ್ತು APL ರೇಷನ್ ಕಾರ್ಡುಗಳನ್ನು ಜನರು ತಿದ್ದುಪಡಿ ಮಾಡಿಕೊಳ್ಳಬಹುದು.

ಕಾರ್ಡಿನಲ್ಲಿ ಏನೇನು ತಿದ್ದುಪಡಿ ಮಾಡಬಹುದು
BPL ಮತ್ತು APL ರೇಷನ್ ಕಾರ್ಡಿನಲ್ಲಿ ಜನರು ಏನೇನು ತಿದ್ದುಪಡಿ ಮಾಡಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
* ಹೊಸ ಸದಸ್ಯರನ್ನು ಸೇರ್ಪಡೆ ಮಾಡಬಹುದು
* ರೇಷನ್ ಕಾರ್ಡಿನಲ್ಲಿ ಇರುವ ಹಳೆಯ ಫೋಟೋ ತಗೆದುಹಾಕಿ ಹೊಸ ಫೋಟೋ ಹಾಕಿಸಬಹುದು
* ರೇಷನ್ ಕಾರ್ಡಿನಲ್ಲಿ ಬೇಡದ ಸದಸ್ಯರ ಹೆಸರು ಡಿಲೀಟ್ ಮಾಡಬಹುದು
* ಸದಸ್ಯರ ಹೆಸರು ತಿದ್ದುಪಡಿ ಮಾಡಬಹುದು
* ನ್ಯಾಯಬೆಲೆ ಅಂಗಡಿಯ ವಿಳಾಸ ಕೂಡ ಬದಲಾವಣೆ ಮಾಡಬಹುದು
* ಕುಟುಂಬ ಸದಸ್ಯರ ಫೋಟೋ ಬದಲಾವಣೆ ಮಾಡಬಹುದು
* ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಬಹುದು

BPL ಮತ್ತು APL ರೇಷನ್ ಕಾರ್ಡುಗಳನ್ನು ಜನರು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒಂದ್ ಕೇಂದ್ರದಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು. ಅದೇ ರೀತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಸಮಯದಲ್ಲಿ ಕೆಲವು ದಾಖಲೆಗಳನ್ನು ಕೂಡ ಕಡ್ಡಾಯವಾಗಿ ನೀಡಬೇಕು ಮತ್ತು ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ.

* ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯ
* ವಿವಾಹ ಪ್ರಮಾಣಪತ್ರ
* ಪೋಷಕರ ಪಡಿತರ ಚೀಟಿ ನೀಡುವುದು ಅತೀ ಅಗತ್ಯ
* ಪಡಿತರ ಕಾರ್ಡಿಗೆ ಮಗುವಿನ ಹೆಸರು ಸೇರಿಸಲು ಮಗುವಿನ ಜನನ ಪ್ರಮಾಣಪತ್ರ ನೀಡುವುದು ಕಡ್ಡಾಯ
* ಸದಸ್ಯರ ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ
* 6 ವರ್ಷದ ಒಳಗಿನ ಮಕ್ಕಳಾಗಿದ್ದರೆ ಜನನ ಪ್ರಮಾಣಪತ್ರ ಕಡ್ಡಾಯ

Leave a Comment