Love Marriage: ಮನೆಯವರ ಒಪ್ಪಿಗೆ ಇಲ್ಲದೆ ಮದುವೆಯಾಗುವ ಪ್ರೇಮಿಗಳಿಗೆ ಕೋರ್ಟ್ ಎಚ್ಚರಿಕೆ, ತೀರ್ಪು ಪ್ರಕಟ

High Court Rules Of Couples: ಈಗಿನ ಕಾಲದಲ್ಲಿ ಪ್ರೀತಿಮಾಡಿ ಮದುವೆ ಮಾಡಿಕೊಳ್ಳುವವರ ಸಂಖ್ಯೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಶಾಲಾ ಕಾಲೇಜು ದಿನಗಳಲ್ಲಿ ಹುಡುಗ ಹುಡುಗಿಯರು ಪ್ರೀತಿಯಲ್ಲಿ ಬೀಳಿತ್ತಿರುವುದನ್ನು ನಾವು ಕಾಣಬಹುದು. ಇದರ ನಡುವೆ ಕೆಲವು ಪ್ರೇಮಿಗಳು ಮನೆಯವರ ಒಪ್ಪಿಗೆ ಪಡೆದುಕೊಳ್ಳದೇ ಓಡಿಹೋಗಿ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ ಮತ್ತು ಇಂತಹ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಇದರ ಮದುವೆ ಹೈಕೋರ್ಟ್ ಈಗ ಪ್ರೀತಿಮಾಡಿ ಮದುವೆ ಮಾಡಿಕೊಳ್ಳುವ ಎಲ್ಲಾ ಪ್ರೇಮಿಗಳಿಗೆ ದೊಡ್ಡ ಎಚ್ಚರಿಕೆ ನೀಡಿದೆ. ಇನ್ನುಮುಂದೆ ಪ್ರೀತಿಮಾಡಿ ಮದುವೆ ಮಾಡಿಕೊಳ್ಳುವ ಈ ತಪ್ಪು ಮಾಡಿದರೆ ಅವರಿಗೆ ಪೋಲೀಸರ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

WhatsApp Group Join Now
Telegram Group Join Now

ಪ್ರೇಮಿಗಳಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್
ಹೌದು, ಇನ್ನುಮುಂದೆ ಯಾವುದೇ ಪ್ರೇಮಿಗಳು ಪೋಷಕರ ಒಪ್ಪಿಗೆ ಪಡೆದುಕೊಳ್ಳದೇ ಮದುವೆಯನ್ನು ಮಾಡಿಕೊಂಡರೆ ಅವರಿಗೆ ಯಾವುದೇ ಪೊಲೀಸ್ ರಕ್ಷಣೆ ನೀಡಲು ಸಾಧ್ಯವಿಲ್ಲ ಅಲಹಾಬಾದ್ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಹೌದು, ಸಾಕಷ್ಟು ಪ್ರೇಮಿಗಳು ಪೋಷಕರ ಒಪ್ಪಿಗೆ ಇಲ್ಲದೆ ಇದ್ದರೂ ಕೂಡ ಮದುವೆ ಮಾಡಿಕೊಂಡು ನಂತರ ನಮಗೆ ಮನೆಯವರಿಂದ ಜೀವ ಬೆದರಿಕೆ ಇದೆ ಎಂದು ಪೋಲೀಸರ ಮೊರೆ ಹೋಗುತ್ತಾರೆ. ಆದರೆ ಈಗ ಅಲಹಾಬಾದ್ ಹೈಕೋರ್ಟ್ ಎಚ್ಚರಿಕೆ ನೀಡಿದ್ದು ಇನ್ನುಮುಂದೆ ನಿಜವಾದ ಜೀವಬೆದರಿಕೆ ಇಲ್ಲದೆ ಇದ್ದಾರೆ ಅವರಿಗೆ ಪೊಲೀಸ್ ರಕ್ಷಣೆ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಹೈಕೋರ್ಟ್ ಈ ತೀರ್ಪು ನೀಡಲು ಕಾರಣ ಏನು…?
ಪ್ರೇಮಿಗಳಿಬ್ಬರು ನಮಗೆ ಜೀವ ಬೆದರಿಕೆ ಇದೆ ಮತ್ತು ನಮಗೆ ರಕ್ಷಣೆ ಬೇಕು ಎಂದು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಇನ್ನು ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್, ಯಾವುದೇ ಪ್ರೇಮಿಗಳು ಮನೆಯವರ ಇಚ್ಛೆಗೂ ವಿರುದ್ಧವಾಗಿ ಮದುವೆಯಾಗಿ ಅವರ ಸ್ವಾತಂತ್ರ್ಯಕ್ಕೆ ಬೇಡಿಕೆ ಅಥವಾ ಜೀವಬೆದರಿಕೆ ಇದ್ದರೆ ಮಾತ್ರ ಅವರಿಗೆ ರಕ್ಷಣೆ ನೀಡಲಾಗುತ್ತದೆ ಮತ್ತು ನಿಜವಾದ ಬೆದರಿಕೆ ಅಥವಾ ಅವರ ಸ್ವಾತಂತ್ರ್ಯಕ್ಕೆ ಯಾವುದೇ ದಕ್ಕೆ ಇಲ್ಲದೆ ಇದ್ದರೆ ಅವರಿಗೆ ಪೊಲೀಸ್ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಮದುವೆಯಾದ ಪ್ರೇಮಿಗಳು ನಮ್ಮ ಕುಟುಂಬದವರು ತಮ್ಮ ಸಂಸಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ಅವರಿಂದ ನಮಗೆ ಸಮಸ್ಯೆ ಆಗುತ್ತಿದೆ ಎಂದು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಇನ್ನು ಅರ್ಜಿ ವಿಚಾರಣೆ ಮಾಡಿ ಕೋರ್ಟ್, ದಂಪತಿಗಳಿಗೆ ನ್ಯಾಯಾಲಯ ರಕ್ಷಣೆ ನೀಡಬಹುದು, ಆದರೆ ಅವರಿಗೆ ಯಾವುದೇ ನಿಜವಾದ ಬೆದರಿಕೆ ಇಲ್ಲದೆ ಇದ್ದರೆ ಪೊಲೀಸ್ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಸದ್ಯ ಅಲಹಾಬಾದ್ ಹೈಕೋರ್ಟ್ ಈ ತೀರ್ಪು ನೀಡಿದ್ದು ಸಾಮಾನ್ಯವಾಗಿ ಎಲ್ಲಾ ಪ್ರೇಮಿಗಳಿಗೆ ಈ ನಿಯಮ ಅನ್ವಯ ಆಗಲಿದೆ ಎಂದು ಹೇಳಬಹುದು.

Leave a Comment