Waqf Bill: ವಕ್ಫ್ ಮಸೂದೆ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ, ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್

Waqf Bill 2025: ವಕ್ಫ್ (Waqf) ವಿಷಯವಾಗಿ ದೇಶದಲ್ಲಿ ಈಗಾಗಲೇ ಸಾಕಷ್ಟು ಜನರು ತಮ್ಮ ಆಸ್ತಿಯನ್ನು ಮತ್ತು ಜಾಗವನ್ನು ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಕೂಡ ಸಾಕಷ್ಟು ರೈತರು ತಾವು ಉಳುಮೆ ಮಾಡುತ್ತಿರುವ ಭೂಮಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಬಹುದು. ದೇಶದಲ್ಲಿ ವಕ್ಫ್ ಮಸೂದೆ ಜಾರಿಗೆ ಬರಬೇಕು ಎಂದು ಸಾಕಷ್ಟು ಜನರು ಬೇಡಿಕೆಯಿಟ್ಟ ಕಾರಣ ಕೇಂದ್ರ ಸರ್ಕಾರ ದೇಶದಲ್ಲಿ ವಕ್ಫ್ ಮಸೂದೆ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಬಹುದು. ವಕ್ಫ್ ಮಸೂದೆ ಜಾರಿಗೆ ತರುವುದು ಸಾಕಷ್ಟು ಜನರ ಸಂತಸಕ್ಕೆ ಕಾರಣವಾಗಿದೆ, ಆದರೆ ಸಾಕಷ್ಟು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ವಕ್ಫ್ ವಿಷಯವಾಗಿ ಸಾಕಷ್ಟು ಸಮಸ್ಯೆ ನಡೆಯುತ್ತಿರುವ ಕಾರಣ ಸುಪ್ರೀಂ ಕೋರ್ಟ್ ಈಗ ಮಹತ್ವದ ಆದೇಶ ಹೊರಡಿಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ. ಹಾಗಾದರೆ ವಕ್ಫ್ ವಿಷಯವಾಗಿ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ವಕ್ಫ್ ವಿಷಯವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಹೌದು, ಈಗ ಸುಪ್ರೀಂ ಕೋರ್ಟ್ ವಕ್ಫ್ ಮಸೂದೆ ವಿಷಯವಾಗಿ ಕೇಂದ್ರ ಸರಕಾರಕ್ಕೆ ಮಹತ್ವದ ಆದೇಶ ಹೊರಡಿಸಿದೆ. ವಕ್ಫ್ ತಿದ್ದುಪಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ನೇಮಕಾತಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಈಗ ಕೇಂದ್ರ ಸರ್ಕಾರಕ್ಕೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಬಳಿ ವಕ್ಫ್ ತಿದ್ದುಪಡಿ ವಿಧಾಯವಾಗಿ ಉತ್ತರವನ್ನು ನೀಡಲು ಒಂದು ವಾರಗಳ ಸಮಯ ಕೇಳಿದ್ದು ಸುಪ್ರೀಂ ಕೋರ್ಟ್ ಅದಕ್ಕೆ ಒಪ್ಪಿಗೆ ನೀಡಿದೆ.

ಒಂದು ವಾರಗಳ ಸಮಯ ಕೇಳಿದ ಕೇಂದ್ರ ಸರ್ಕಾರ
ವಕ್ಫ್ ತಿದ್ದುಪಡಿ ಮಸೂದೆ 2025 ಕ್ಕೆ ಸಂಬಂದಿಸಿದ ವಿಷಯಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಈಗ ಸುಪ್ರೀಂ ಕೋರ್ಟ್ ಬಳಿ ಒಂದು ವಾರದ ಸಮಯ ಕೇಳಿದ್ದು ಸುಪ್ರೀಂ ಈಗ ಕೇಂದ್ರ ಸರ್ಕಾರಕ್ಕೆ ಒಂದು ವಾರಗಳ ಸಮಯ ನೀಡಿದೆ. ಇನ್ನು ಕೇಂದ್ರ ಸರ್ಕಾರ ಮಾಸುವದೇ ವಿಷಯವಾಗಿ ಉತ್ತರವನ್ನು ನೀಡುವ ತನಕ ಯಾವುದೇ ನೇಮಕಾತಿ ಮಾಡಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ ಮತ್ತು ಅಲ್ಲಿಯ ತನಕ ಯಾವುದೇ ನೇಮಕಾತಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಸಿಟಿಶರ್ ಜನರಲ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇನ್ನು ಮೇ 5 ರ ತನಕ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸಮಯ ನೀಡಿದೆ.

ನ್ಯಾಯಪೀಠ ನಿಗದಿತ ಸಮಯದ ಒಳಗೆ ಉತ್ತರ ನೀಡಬೇಕು ಕೇಂದ್ರ ಸರಕಾರಕ್ಕೆ ಆದೇಶ ಹೊರಡಿಸಿದೆ ಮತ್ತು ಅಲ್ಲೀತನ ವಕ್ಫ್ ಮಸೂದೆ 2025 ಕ್ಕೆ ಸಂಬಂಧಿಸಿದಂತೆ ಯಾವುದೇ ನೇಮಕಾತಿ ಮಾಡಿಕೊಳ್ಳುವಂತಿಲ್ಲ. ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು 14 ರ ಅಡಿಯಲ್ಲಿ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗೆ ಯಾವುದೇ ಮುಸ್ಲಿಮೇತರ ನೇಮಕಾತಿಯನ್ನು ಸದ್ಯಕ್ಕೆ ಮಾಡಲಾಗುವುದಿಲ್ಲ.

Leave a Comment