Shakti Scheme Smart Card Application Online: ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಯೋಜನೆಯಾದ ಶಕ್ತಿ ಯೋಜನೆಯ (Shakti Scheme) ಅಡಿಯಲ್ಲಿ ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೌದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವುದಾಗಿ ಘೋಷಣೆ ಮಾಡಿತ್ತು ಮತ್ತು ಘೋಷಣೆ ಮಾಡಿದಂತೆ ರಾಜ್ಯದಲ್ಲಿ ಮಹಿಳೆಯರು ಸರ್ಕಾರೀ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಶಕ್ತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಶಕ್ತಿಯಲ್ಲಿ ಬದಲಾವಣೆ ಮಾಡುವುದರ ಮೂಲಕ ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ,
ಉಚಿತವಾಗಿ ಪ್ರಯಾಣ ಮಾಡಲು ಆಧಾರ್ ಕಾರ್ಡ್ ಅಗತ್ಯ
ಮಹಿಳೆಯರು ಸರ್ಕಾರೀ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಆಧಾರ್ ಕಾರ್ಡ್ ಅತೀ ಅಗತ್ಯ ಅನ್ನುವುದು ಎಲ್ಲರಿಗೂ ತಿಳಿದೇ. ಆಧಾರ್ ಕಾರ್ಡ್ ಇಲ್ಲದೆ ಸರ್ಕಾರೀ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಸಾಧ್ಯವಿಲ್ಲ. ಆದರೆ ಈಗ ಸರ್ಕಾರ ಶಕ್ತಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ ಮತ್ತು ಮಾಡಿದ ಬದಲಾವಣೆಯ ಪ್ರಕಾರ ಇನ್ನುಮುಂದೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಅಗತ್ಯ ಇಲ್ಲ.
ಸ್ಮಾರ್ಟ್ ಇದ್ದರೆ ಸಾಕು ಉಚಿತವಾಗಿ ಪ್ರಯಾಣಿಸಬಹುದು
ಹೌದು, ಮಹಿಳೆಯರು ಆಧಾರ್ ಕಾರ್ಡ್ ತೋರಿಸುವ ಬದಲು ಸ್ಮಾರ್ಟ್ ಕಾರ್ಡ್ ತೋರಿಸುವುದರ ಮೂಲಕ ಸರ್ಕಾರೀ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಸರ್ಕಾರ ಈಗ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಕೆಲಸವನ್ನು ಆರಂಭ ಮಾಡಿದರೆ. ಮಹಿಳೆಯರು ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರದಲ್ಲಿ ಸ್ಮಾರ್ಟ್ ಮಾಡಿಸಿಕೊಳ್ಳುವುದರ ಮೂಲಕ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಈ ಹಿಂದೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿತ್ತು, ಆದರೆ ಈಗ ಸ್ಮಾರ್ಟ್ ಕಾರ್ಡ್ ಮೂಲಕ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.
ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ…?
ಮಹಿಳೆಯರು ಉಚಿತವಾಗಿ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬಹುದು. ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒಂದು ಕೇಂದ್ರದಲ್ಲಿ ಮಹಿಳೆಯರು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬಹುದು. ಸ್ಮಾರ್ಟ್ ಕಾರ್ಡಿಗೆ ಅರ್ಜಿ ಸಲ್ಲಿಸಿದ ಸಮಯದಲ್ಲಿ ನಿಮಗೆ ಒಂದು ರಸೀದಿಯನ್ನು ನೀಡಲಾಗುತ್ತದೆ ಮತ್ತು ಆ ರಸೀದಿಯೇ ನಿಮ್ಮ ಸ್ಮಾರ್ಟ್ ಕಾರ್ಡ್ ಆಗಿರುತ್ತದೆ. ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಎಲ್ಲಾ ಮಹಿಳೆಯರು ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಸರ್ಕಾರೀ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಸೇವಸಿಂಧು ವೆಬ್ಸೈಟ್ ಮೂಲಕ ಮಹಿಳೆಯರು ಆನ್ಲೈನ್ ನಲ್ಲಿಯೇ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಸ್ಮಾರ್ಟ್ ಕಾರ್ಡ್ ಒಂದು ರೀತಿಯಲ್ಲಿ ಪಾನ್ ಕಾರ್ಡ್ ರೀತಿಯಲ್ಲಿ ಇರಲಿದೆ ಮತ್ತು ಜೀವನಪರ್ಯಂತ ಮಹಿಳೆಯರು ಈ ಸ್ಮಾರ್ಟ್ ಕಾರ್ಡ್ ಹಲವು ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ. ಈ ಸ್ಮಾರ್ಟ್ ಕಾರ್ಡ್ ಅನ್ನು ಕೇವಲ ಕರ್ನಾಟಕ ಮಹಿಳೆಯರು ಮಾತ್ರ ಮಾಡಿಸಿಕೊಳ್ಳಬಹುದು ಮತ್ತು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವ ಸಮಯದಲ್ಲಿ ವಿವಿಧ ದಾಖಲೆಯನ್ನು ಕಡ್ಡಾಯವಾಗಿ ನಿಯೋಡಬೇಕು.