GST On UPI Payments: ದೇಶದಲ್ಲಿ ಡಿಜಿಟಲ್ ಪಾವತಿ (Digital Payments) ಬಹಳ ಮುಂದುವರೆದಿದೆ ಎಂದು ಹೇಳಬಹುದು. ಹೌದು, 10 ಮತ್ತು 20 ರೂಪಾಯಿಯಿಂದ ಎಲ್ಲಾ ವಹಿವಾಟುಗಳನ್ನು ಜನರು UPI ಮೂಲಕ ಮಾಡುತ್ತಿದ್ದಾರೆ. ಇದರ UPI ನಲ್ಲಿ ಕೆಲವು ಬದಲಾವಣೆ ಕೂಡ ಮಾಡಲಾಗಿದೆ, ಕಳೆದ ವರ್ಷ UPI ಮಿತಿಯನ್ನು ಹೆಚ್ಚಳ ಮಾಡುವುದರ ಮೂಲಕ UPI ವಹಿವಾಟು ಮಾಡುವವರಿಗೆ NPCI ಗುಡ್ ನ್ಯೂಸ್ ನೀಡಿತ್ತು. ಇದರ ನಡುವೆ ದೇಶದಲ್ಲಿ UPI ಬಳಸುವವರ ಸಂಖ್ಯೆ ಹೇಗೆ ಹೆಚ್ಚಾಗಿದೆಯೋ ಅದೇ ರೀತಿಯಲ್ಲಿ ಜನರಿಗೆ ಮೋಸ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಸದ್ಯ UPI ಪೇಮೆಂಟ್ ಗಳಿಗೆ ಸಂಬಂಧಪಟ್ಟಂತೆ ಇನ್ನೊಂದು ಸುದ್ದಿ ಕೆಲವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
2000 ರೂಪಾಯಿಗಿಂತ ಅಧಿಕ ವಹಿವಾಟು ಮಾಡಿದರೆ GST
ಕೆಲವು ಸಾಮಾಜಿಕ ಜಾಲತಾಣದಲ್ಲಿ UPI ನಲ್ಲಿ 2000 ರೂಪಾಯಿಗಿಂತ ಅಧಿಕ ಹಣಕಾಸಿ ವಹಿವಾಟು ಮಾಡಿದರೆ GST ಶುಲ್ಕ ಪಾವತಿ ಮಾಡಬೇಕು ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಇನ್ನು ಈ ಸುದ್ದಿಯನ್ನು ಕೇಳಿದ UPI ಬಳಕೆದಾರರು ಬೇಸರವನ್ನು ಕೂಡ ಹೊರಹಾಕುತ್ತಿದ್ದಾರೆ. UPI ನಲ್ಲಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟುಗಳನ್ನು ಕೆಲವರು ಮಾಡುತ್ತಾರೆ, ಆದರೆ ಈಗ ಕೇಂದ್ರ ಸರ್ಕಾರ UPI ಪೇಮೆಂಟ್ ಮೇಲೆ GST ವಿದಿಸುತ್ತಿರುವುದು ಸರಿಯಲ್ಲ ಎಂದು ಸಾಕಷ್ಟು ಜನರು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.
ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆ ಕೊಟ್ಟ ಕೊಟ್ಟ ಕೇಂದ್ರ ಸರ್ಕಾರ
2000 ರೂಪಾಯಿಗಿಂತ ಅಧಿಕ ಹಣಕಾಸು ವಹಿವಾಟನ್ನು UPI ಮೂಲಕ ಮಾಡಿದರೆ ಅವರು GST ಮಾಡಬೇಕು ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದಂತೆ ಕೇಂದ್ರ ಸರ್ಕಾರ ಈ ಸುದ್ದಿಗೆ ಸ್ಫಷ್ಟನೇ ನೀಡಿದೆ. ಕೇಂದ್ರ ಸರ್ಕಾರ UPI ಪಾವತಿಗಳ ಮೇಲೆ ಯಾವುದೇ GST ವಿಧಿಸಿಲ್ಲ ಮತ್ತು ಇದೊಂದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆ ನೀಡಿದೆ.
ಕೆಲವು ಸಾಮಾಜಿಕ ಜಾಲತಾಣದಲ್ಲಿ UPI ಪಾವತಿಗಳ ಮೇಲೆ ಕೇಂದ್ರ ಸರ್ಕಾರ GST ವಿಧಿಸಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ ಮತ್ತು ಯಾರು ಕೂಡ ಆ ಸುದ್ದಿಗೆ ಕಿವಿಗೊಡಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯಲ್ಲಿ ತಿಳಿಸಿದೆ. ಸಾರ್ವಜನಿಕರು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ. UPI ಮೇಲೆ GST ವಿಧಿಸುವ ಬಗ್ಗೆ ನಾವು ಯಾವುದೇ ತೀರ್ಮಾನ ಕೈಗೊಂಡಿಲ್ಲ ಮತ್ತು ಈ ಕುರಿತಂತೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ ಮತ್ತು ಯಾರು ಕೂಡ ಈ ಸುದ್ದಿಯನ್ನು ನಂಬಬೇಡಿ ಎಂದು ಕೇಂದ್ರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. UPI ಮೂಲಕ 5 ಲಕ್ಷದ ತನಕ ಉಚಿತವಾಗಿ ವಹಿವಾಟು ಮಾಡಬಹುದು ಮತ್ತು 5 ಲಕ್ಷದ ತನಕದ ವಹಿವಾಟಿಗೂ ಕೂಡ ಯಾವುದೇ GST ಇಲ್ಲಾ ಎಂದು ಕೇಂದ್ರ ತಿಳಿಸಿದೆ.