Post Office Monthly Income Scheme 2025: ಪೋಸ್ಟ್ ಆಫೀಸ್ ನಲ್ಲಿ ನಮಗೆ ಹೂಡಿಕೆ ಮಾಡಲು ಹಲವು ಆಯ್ಕೆಗಳು ಇದೆ ಎಂದು ಹೇಳಬಹುದು. ಹೌದು. ಪೋಸ್ಟ್ ಆಫೀಸ್ ಈಗಾಗಲೇ ಹೂಡಿಕೆ ಮಾಡುವ ಜನರಿಗಾಗಿ ಹಲವು ಯೋಜನೆಯನ್ನು ಪರಿಚಯ ಮಾಡಿದೆ. ಇದರ ನಡುವೆ ಈಗ ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಯೋಜನೆ ಜಾರಿಗೆ ಬಂದಿದೆ ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಮ್ಮ ಖಾತೆಗೆ ಪ್ರತಿ ತಿಂಗಳು 9250 ರೂಪಾಯಿ ಜಮಾ ಆಗಲಿದೆ. ಮಾಸಿಕವಾಗಿ ಆದಾಯ ಗಳಿಸಿಕೊಳ್ಳಬೇಕು ಅಂದರೆ ನಿಮಗೆ ಈ ಯೋಜನೆ ಬೆಸ್ಟ್ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಪೋಸ್ಟ್ ಆಫೀಸ್ ನಲ್ಲಿ ಮಾಸಿಕವಾಗಿ 9250 ರೂಪಾಯಿ ಸಿಗುವ ಈ ಯೋಜನೆ ಯಾವುದು ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿ
ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಪ್ರಮುಖವಾದ ಯೋಜನೆಯಲ್ಲಿ ಮಾಸಿಕ ಆದಾಯ ಯೋಜನೆ ಕೂಡ ಒಂದು ಎಂದು ಹೇಳಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಾಸಿಕವಾಗಿ ನಾವು ಆದಾಯ ಗಳಿಸಿಕೊಳ್ಳಬಹುದು. ಮಾಸಿಕವಾಗಿ 9250 ರೂಪಾಯಿ ಆದ್ಫಾಯ ಗಳಿಸಿಕೊಳ್ಳಬೇಕು ಅಂದರೆ ನಾವು ಮಾಸಿಕವಾಗಿ ಬಹುದೊಡ್ಡ ಮೊತ್ತದ ಹಣವನ್ನು ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ ಸುರಕ್ಷತೆ ಇರುತ್ತದೆ.
ಪೋಸ್ಟ್ ಆಫೀಸ್ ಯೋಜನೆಯಲ್ಲಿ ಸಿಗಲಿದೆ 9250 ರೂಪಾಯಿ
ಹೌದು, ಪೋಸ್ಟ್ ಆಫೀಸ್ ನ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 7.5 ರಷ್ಟು ಬಡ್ಡಿ ನೀಡಲಾಗುತ್ತದೆ. ಇನ್ನು ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಮಸೀಕಾವಾಗಿ 18500 ರೂಪಾಯಿ ಕೂಡ ಪಡೆದುಕೊಳ್ಳಬಹುದು, ಆದರೆ ಖಾತೆಯಲ್ಲಿ ಜಂಟಿಯಾಗಿ ತೆರೆಯಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರು ಈ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಬಹುದು.
ಮಾಸಿಕ ಆದಾಯ ಪಡೆಯಲು ಎಷ್ಟು ಹೂಡಿಕೆ ಮಾಡಬೇಕು
ಮಾಸಿಕವಾಗಿ 9250 ರೂಪಾಯಿ ಪಡೆದುಕೊಳ್ಳಲು ನೀವು ಪೋಸ್ಟ್ ಆಫೀಸ್ ನಲ್ಲಿ ಗರಿಷ್ಠವಾಗಿ 15 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ 9250 ರೂಪಾಯಿ ಆದಾಯ ಗಳಿಸಿಕೊಳ್ಳಲು ಜಂಟಿಯಾಗಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಪೋಸ್ಟ್ ಆಫೀಸ್ ನ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆಯನ್ನು ನೀವು 5 ವರ್ಷಗಳ ಕಾಲ ಮಾಡಬೇಕಾಗುತ್ತದೆ. ನೀವು ಹೂಡಿಕೆ ಮಾಡಿದ ಹಣದ ಆಧಾರದ ಮೇಲೆ ನಿಮ್ಮ ಆದಾಯ ನಿಗದಿ ಮಾಡಲಾಗುತ್ತದೆ. ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಜಂಟಿಯಾಗಿ 15 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ ನೀವು ಮಾಸಿಕವಾಗಿ 9250 ರೂಪಾಯಿ ಆದಾಯ ಪಡೆಯಬಹುದು.
ಪೋಸ್ಟ್ ಆಫೀಸ್ ನಿಮ್ಮ ಹಣಕ್ಕೆ ಇರಲಿದೆ ಸುರಕ್ಷತೆ
ಪೋಸ್ಟ್ ಆಫೀಸ್ ನ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣಕ್ಕೆ ಸುರಕ್ಷತೆ ಇರಲಿದೆ ಎಂದು ಹೇಳಬಹುದು. ಪೋಸ್ಟ್ ಆಫೀಸ್ ಸರ್ಕಾರೀ ಸ್ವಾಮ್ಯದಲ್ಲಿ ಇದ್ದು ನಾವು ಎಷ್ಟೇ ಹಣವನ್ನು ಹೂಡಿಕೆ ಮಾಡಿದರು ನಮ್ಮ ಹಣಕ್ಕೆ ಯಾವುದೇ ಅಪಾಯ ಇರುವುದಿಲ್ಲ. ಅದೇ ರೀತಿಯಲ್ಲಿ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಮ್ಮ ಹಣಕ್ಕೆ ನಿಖರವಾದ ಬಡ್ಡಿ ಕೂಡ ನೀಡಲಾಗುತ್ತದೆ.