Delhi High Court: ಪತ್ನಿ ಬೇರೆಯವನ ಜೊತೆ ಸಂಬಂಧ ಇಟ್ಟುಕೊಳ್ಳುವುದು ಅಪರಾಧ ಅಲ್ಲ, ಕೋರ್ಟ್ ಮಹತ್ವದ ತೀರ್ಪು

Delhi High Court Judgement: ದೆಹಲಿ ಹೈಕೋರ್ಟ್ ನೀಡಿದ ಈ ಒಂದು ತೀರ್ಪು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ ಎಂದು ಹೇಳಬಹುದು. ಹೌದು, ದೆಹಲಿ ಹೈಕೋರ್ಟ್ ಪತ್ನಿ ವಿವಾಹದ ನಂತರ ಬೇರೆಯವನ ಜೊತೆ ಸಂಬಂಧ ಇಟ್ಟುಕೊಳ್ಳುವುದು ಅಪರಾಧ ಅಲ್ಲಾ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದ್ದು ಇದು ಎಲ್ಲಾ ಮದುವೆಯಾದ ಪುರುಷರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಂಸಾರದಲ್ಲಿ ಬಿರುಕು ಬಂದು ಗಂಡ ಹೆಂಡತಿ ವಿಚ್ಛೇಧನ ಪಡೆದುಕೊಳ್ಳುವ ಪ್ರಕರಣ ಸಾಕಷ್ಟು ಆಗುತ್ತಿದೆ. ಇದರ ನಡುವೆ ಸಾಕಷ್ಟು ಪುರುಷರು ತನ್ನ ಹೆಂಡತಿ ಬೇರೆಯವರನ್ನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪ ಮಾಡಿ ಪತ್ನಿಯಿಂದ ವಿಚ್ಛೇಧನ ಪಡೆದುಕೊಳ್ಳುತ್ತಿರುವುದನ್ನು ನಾವು ನೀವೆಲ್ಲ ನೋಡಬಹುದು.

WhatsApp Group Join Now
Telegram Group Join Now

ಬೇರೆಯವರ ಜೊತೆ ಸಂಬಂಧ ಇಟ್ಟುಕ್ಕೊಳ್ಳುವುದು ಅಪರಾಧವಲ್ಲ
ದೆಹಲಿ ಹೈಕೋರ್ಟ್ ಈಗ ಪತ್ನಿಯಾದವರು ಬೇರೆಯವರನ್ನ ಜೊತೆ ಅಥವಾ ತನ್ನ ಮಾಜಿ ಪ್ರಿಯತಮನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಅಪರಾಧ ಅಲ್ಲ ಎಂದು ತೀರ್ಪು ನೀಡಿದೆ. ಪತ್ನಿ ವಿವಾಹೇತರ ಸಂಬಂಧ ಇಟ್ಟುಕೊಂಡ ಕಾರಣ ಪತಿಯಾದವನು ನೊಂದು ಕೋರ್ಟ್ ಮೆಟ್ಟಿಲೇರಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕೋರ್ಟ್ ಮೊರೆ ಹೋಗಿರುವ ಪುರುಷ, ನನ್ನ ಪತ್ನಿ ಬೇರೆಯವನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಮತ್ತು ಅವರಿಬ್ಬರೂ ಹೋಟೆಲ್ ನಲ್ಲಿ ಇರುವುದನ್ನು ನಾನು ನೋಡಿದ್ದೇನೆ ಎಂದು ಕೋರ್ಟಿನಲ್ಲಿ ದೂರು ನೀಡಿದ್ದಾರೆ.

ಇನ್ನು ಪತಿ ನೀಡಿದ ಈ ದೂರು ವಿಚಾರಣೆ ಮಾಡಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶೆಯಾದ ನಿನಾ ಬನ್ಸಾಲ್ ಕೃಷ್ಣ ಅವರು, ಗಂಡನಾದವನು ಪತ್ನಿಯನ್ನು ಕೇವಲ ತನ್ನ ಆಸ್ತಿ ಎಂದು ಪರಿಗಣನೆ ಮಾಡುವುದು ತಪ್ಪು ಹೇಳಿದ್ದಾರೆ. ಇನ್ನು ಈ ತೀರ್ಪು ನೀಡುವ ಸಮಯದಲ್ಲಿ ಮಹಾಭಾರತದ ದ್ರೌಪದಿಯನ್ನು ಉದಾರಹಣೆಗೆ ತಗೆದುಕೊಂಡ ನ್ಯಾಯಾಧೀಶರು, ಧರ್ಮರಾಜನನ್ನು ಮದುವೆಯಾಗಲು ಮುಂದಾದ ದ್ರೌಪದಿ ನಂತರ ನಾಲ್ವರು ಪಾಂಡವರನ್ನು ಮದುವೆ ಮಾಡಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

ಮಹಿಳೆ ಆಸ್ತಿ ಎಂದು ಪರಿಗಣನೆ ಮಾಡುವುದು ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಅನ್ನುವುದಕ್ಕೆ ಮಹಾಭಾರತ ಉತ್ತಮವಾದ ಉದಾಹರಣೆ ಎಂದು ಹೇಳಿದರೆ ಕೋರ್ಟ್, ಮಹಿಳೆ ಯಾವ ಪುರುಷನ ಆಸ್ತಿ ಎಂದು ಅಲ್ಲ ಎಂದು ಹೇಳಿದೆ. ಇನ್ನು ದಂಡಸಂಹಿತೆ ಸೆಕ್ಷನ್ 497 ರ ಪ್ರಕಾರ, ಮದುವೆಯ ನಂತರ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಕಾನೂನು ಬಾಹಿರ ಅಲ್ಲಾ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇನ್ನು ಸುಪ್ರೀಂ ಕೋರ್ಟ್ ತೀರ್ಪನ್ನು ಗಣನೆಗೆ ತಗೆದುಕೊಂಡು ಮಹಿಳೆಯರ ಗಂಡ ನೀಡಿದ್ದ ದೂರು ವಜಾ ಮಾಡಲಾಗಿದೆ.

Leave a Comment