Income Tax Deductions: ದೇಶದಲ್ಲಿ ಆದಾಯ ತೆರಿಗೆ ಪಾವತಿಗಳಿಗೆ (Income Tax Payments) ಸಂಬಂಧಿಸಿದಂತೆ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಹೌದು, ಕೇಂದ್ರ ಸರ್ಕಾರ ಆದಾಯ ತೆರಿಗೆ ನಿಯಮದಲ್ಲಿ 2025 ರ ವರ್ಷದಲ್ಲಿ ಕೆಲವು ಬದಲಾವಣೆ ಮಾಡಿದೆ ಎಂದು ಹೇಳಬಹುದು. ಇನ್ನು ಬದಲಾದ ನಿಯಮಗಳ ಪ್ರಕಾರ, ಜನರು ಆದಾಯ ತೆರಿಗೆ ಸಲ್ಲಿಸುವ ಸಮಯದಲ್ಲಿ ಹಲವು ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು. ಇನ್ನು ಈ ವರ್ಷ ಆದಾಯ ತೆರಿಗೆ ಸಲ್ಲಿಸುವವರು ಈ 7 ರೀತಿಯ ಆದಾಯದ ಮೇಲೆ ಯಾವುದೇ ರೀತಿಯ ತೆರಿಗೆ ಕಟ್ಟುವ ಅಗತ್ಯ ಇಲ್ಲ. ಈ 7 ಆದಾಯದ ಮೇಲೆ ಕೇಂದ್ರ ಸರ್ಕಾರ ಈಗ ತೆರಿಗೆ ರಿಯಾಯಿತಿ ಘೋಷಣೆ ಮಾಡಿದ್ದು ಜನರು ಇದರ ಲಾಭ ಪಡೆದುಕೊಳ್ಳಬಹುದು. ಹಾಗಾದರೆ ಯಾವ 7 ಆದಾಯದ ಮೇಲೆ ತೆರಿಗೆ ರಿಯಾಯಿತಿ ಘೋಷಣೆ ಮಾಡಲಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆದಾಯ ತೆರಿಗೆ ನಿಯಮದಲ್ಲಿ ಬದಲಾವಣೆ
ಕೇಂದ್ರ ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ನಿಯಮದಲ್ಲಿ ಹಲವು ಬದಲಾವಣೆ ಮಾಡಿರುವುದನ್ನು ನಾವು ಕಾಣಬಹುದು ಮತ್ತು ಬದಲಾದ ನಿಯಮಗಳ ಪ್ರಕಾರ, ಜನರು ಪ್ರಸ್ತುತ ವರ್ಷದಲ್ಲಿ ಹೊಸ ರೀತಿಯಲ್ಲಿ ಆದಾಯ ತೆರಿಗೆ ಸಲ್ಲಿಸಲಿದ್ದಾರೆ. ಪ್ರಸ್ತುತ ವರ್ಷದಲ್ಲಿ ಜನರು 7 ಲಕ್ಷ ರೂಪಾಯಿಯ ತನಕ ಯಾವುದೇ ಆದಾಯ ತೆರಿಗೆ ಸಲ್ಲಿಸುವ ಅಗತ್ಯ ಇರುವುದಿಲ್ಲ ಮತ್ತು ಮುಂದಿನ ವರ್ಷ 12 ಲಕ್ಷ ರೂಪಾಯಿಯ ತನಕ ಆದಾಯ ತೆರಿಗೆ ಸಲ್ಲಿಸುವ ಅಗತ್ಯ ಇರುವುದಿಲ್ಲ. ಅದೇ ರೀತಿಯಲ್ಲಿ ಈ ವರ್ಷದಲ್ಲಿ ಕೆಲವು ರೀತಿಯ ಆದಾಯಗಳ ಮೇಲೆ ಆದಾಯ ತೆರಿಗೆ ವಿನಾಯಿತಿ ಕೂಡ ಜನರು ಪಡೆದುಕೊಳ್ಳಬಹುದು.
ಈ 7 ಆದಾಯಗಳಿಗೆ ಯಾವುದೇ ರೀತಿಯ ತೆರಿಗೆ ಕಟ್ಟುವ ಅಗತ್ಯ ಇಲ್ಲ
* ಹೊಸ ತೆರಿಗೆ ಪದ್ದತಿಯ ಪ್ರಕಾರ ರೂಪಾಯಿ 75,000 ತನಕ ಪ್ರಮಾಣಿತ ಕಡಿತವನ್ನು ಜನರು ಪಡೆದುಕೊಳ್ಳಬಹುದು. ನಿಮ್ಮ ಒಟ್ಟು ಆದಾಯದಿಂದ 75,000 ರೂಪಾಯಿಯನ್ನು ಆದಾಯ ತೆರಿಗೆ ಸಲ್ಲಿಸುವ ಸಮಯದಲ್ಲಿ ಪ್ರಮಾಣಿತ ಕಡಿತ ಎಂದು ಪರಿಗಣನೆ ಮಾಡಬಹುದು.
* ನೀವು ಕೆಲಸದಿಂದ ನಿವೃತ್ತಿ ಪಡೆದುಕೊಂಡಿದ್ದು ಮತ್ತು ಈಗ ಉಳಿದ ರಜೆಗಳಿಗೆ ಗ್ರಾಚ್ಯುಟಿ ಹಣ ಪಡೆದುಕೊಳ್ಳುತ್ತಿದ್ದರೆ ನೀವು ಆ ಹಣಕ್ಕೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಆದರೆ ನೀವು ಹೊಸ ಅಥವಾ ಹಳೆಯ ಯಾವ ತೆರಿಗೆ ಪದ್ಧತಿ ಬಳಸುತ್ತಿದ್ದೀರಿ ಅನ್ನುವುದು ಬಹಳ ಮುಖ್ಯ.
* NPS ಕೂಡ ತೆರಿಗೆ ವಿನಾಯಿತಿ ಅಡಿಯಲ್ಲಿ ಬರುತ್ತದೆ
ನೀವು ಕೆಲಸ ಮಾಡುತ್ತಿರುವ ಕಂಪನಿ ನಿಮಗೆ NPS ಅಡಿಯಲ್ಲಿ ಶೇಕಡಾ 14 ರಷ್ಟು ಹಣ ನೀಡುತ್ತಿದ್ದರೆ, ನೀವು ಆ ಹಣಕ್ಕೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.
* ನೀವು ಯಾವುದೇ ರೀತಿಯಲ್ಲಿ ಕುಟುಂಬ ಪಿಂಚಣಿ ಪಡೆಯುತ್ತಿದ್ದರೆ ಮತ್ತು ಆ ಪಿಂಚಣಿ ಹಣ 25000 ರೂಪಾಯಿ ಆಗಿದ್ದರೆ ನೀವು ಆ ಹಣಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಪಡೆದುಕೊಳ್ಳಬಹುದು.
* ನೀವು ಒಂದು ವರ್ಷದಲ್ಲಿ 50 ಸಾವಿರ ರೂಪಾಯಿಯ ತನಕ ಯಾವುದಾದರೂ ಉಡುಗೊರೆ ಪಡೆದುಕೊಂಡಿದ್ದರೆ, ನೀವು ಪಡೆದುಕೊಂಡ ಉಡುಗೊರೆ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ ಮತ್ತು ಅದಕ್ಕೆ ನೀವು ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ.
* HSR, LTA ಸೇರಿದಂತೆ ವಿವಿಧ ರೀತಿಯ ಭತ್ಯೆಗಳ ಮೇಲೆ ಹೊಸ ಆದಾಯ ತೆರಿಗೆ ನಿಯಮದ ಅಡಿಯಲ್ಲಿ ತೆರಿಗೆ ಸಲ್ಲಿಸುವವರು ದೊಡ್ಡ ಮೊತ್ತ ರೀತಿಯಿತಿ ಪಡೆದುಕೊಳ್ಳಬಹುದು.