About Vaibhav Suryavanshi: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಬಹಳ ವೈರಲ್ ಆಗುತ್ತಿದೆ ಎಂದು ಹೇಳಬಹುದು. 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ತಮ್ಮ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿರುವ ವೈಭವ್ ಸೂರ್ಯವಂಶಿ ತನ್ನ ಮೊದಲ ಪಂದ್ಯದಲ್ಲೇ ಉತ್ತವಾಗಿ ಬ್ಯಾಟಿಂಗ್ ಮಾಡುವುದರ ಮೂಲಕ ತನ್ನ ಮೊದಲ ಪಂದ್ಯದಲ್ಲೇ ಅಮೋಘವಾದ ಸಾಧನೆ ಮಾಡಿದ್ದಾರೆ ವೈಭವ್ ಸೂರ್ಯವಂಶಿ. ಇದರ ನಡುವೆ ಈ ವೈಭವ್ ಸೂರ್ಯವಂಶಿ ಯಾರು ಮತ್ತು ಇವರ ಹಿನ್ನಲೆ ಏನು ಅನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾದರೆ ವೈಭವ್ ಸೂರ್ಯವಂಶಿ ನಿಜಕ್ಕೂ ಮತ್ತು ಇವರ ಹಿನ್ನಲೆ ಏನು ಅನ್ನುವುದಾರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವೈಭವ್ ಸೂರ್ಯವಂಶಿ ನಿಜಕ್ಕೂ ಮತ್ತು ಹಿನ್ನಲೆ ಏನು…?
ರಾಜಸ್ತಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರ ಎಂದು ಹೆಗ್ಗಳಿಕೆ ಗಳಿಸಿಕೊಂಡಿರುವ ವೈಭವ್ ಸೂರ್ಯವಂಶಿ ಅವರು ರಾಜಸ್ತಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರ ಎಂದು ಹೇಳಬಹುದು. 2011 ನೇ ಇಸವಿಯಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ಅವರು ತನ್ನ 4 ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಆರಂಭ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದ ಮಗನಿಗೆ ಇರುವ ಕ್ರಿಕೆಟ್ ಆಸಕ್ತಿಯನ್ನು ಗಮನಿಸಿದ ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಅವರು ಮಗನಿಗಾಗಿ ಮನೆಯ ಹಿಂಭಾಗದಲ್ಲಿ ಚಿಕ್ಕ ಮೈದಾನವನ್ನೇ ಮಾಡಿಸಿದ್ದಾರೆ.
ಹಲವು ವರ್ಷಗಳಿಂದ ಸಮಸ್ಟಿಪ್ರುರದ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ವೈಭವ್ ಸೂರ್ಯವಂಶಿ ಅವರು ತನ್ನ 12 ನೇ ವಯಸ್ಸಿನಲ್ಲಿ ವಿನೂ ಮಂಕಡ್ ಟ್ರೋಫಿಯಲ್ಲಿ ಬಿಹಾರದ ಪರವಾಗಿ ಆಡಿ ಕೆಲವ ಐದು ಪಂದ್ಯದಲ್ಲಿ 400 ರನ್ ಗಳಿಸುವುದರ ಮೂಲಕ ವಿಶೇಷವಾದ ಸಾಧನೆ ಮಾಡಿದ್ದಾರೆ. ತನ್ನ 12ನೇ ವಯಸ್ಸಿಗೆ ಪ್ರಥಮದರ್ಜೆ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿ ಅವರು ಮುಂಬೈ ತಂಡದ ಪರವಾಗಿ ರಣಜಿ ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. 1986 ರ ನಂತರ ಭಾರತದ ಪ್ರಥಮದರ್ಜೆ ಕ್ರಿಕೆಟ್ ನಲ್ಲಿ ಆಡಿದ ಅತೀ ಚಿಕ್ಕ ವಯಸ್ಸಿನ ಆಟಗಾರ ಅನ್ನುವ ಹೆಗ್ಗಳಿಕೆಗೆ ಕೂಡ ವೈಭವ್ ಸೂರ್ಯವಂಶಿ ಅವರು ಸಾಕ್ಷಿಯಾಗಿದ್ದರು.
14 ವರ್ಷದ ಹುಡುಗನ ಈ ಸಾಧನೆಗೆ ಮೆಚ್ಚಿದ ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ಮಾಲೀಕರು ಬರೋಬ್ಬರಿ 1.1 ಕೋಟಿ ರೂಪಾಯಿಯನ್ನು ಕೊಟ್ಟು ವೈಭವ್ ಸೂರ್ಯವಂಶಿ ಅವರನ್ನು ಖರೀದಿ ಮಾಡಿದ್ದರು. ವೈಭವ್ ಸೂರ್ಯವಂಶಿ ಅವರು ಐಪಿಎಲ್ (IPL) ನಲ್ಲಿ ಕೋಟ್ಯಾಧಿಪತಿಯಾದ ಅತೀ ಕಿರಿಯ ಆಟಗಾರ ಅನ್ನುವ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು. ಎರಡು ವರ್ಷಗಳಿಂದ ಮಾಜಿ ರಣಜಿ ಆಟಗಾರ ಮನೀಶ್ ಓಝಾ ಅವರ ಬಳಿ ತರಬೇತಿ ಪಡೆದಿರುವ ವೈಭವ್ ಸೂರ್ಯವಂಶಿ ಅವರು ನನ್ನ ಈ ಸಾಧನೆಗೆ ಅವರೇ ಕಾರಣ ಎಂದು ಹೇಳಿದ್ದಾರೆ. ರಾಜಸ್ತಾನ್ ರಾಯಲ್ಸ್ ಮತ್ತು ಐಪಿಎಲ್ ಅಭಿಮಾನಿಗಳು ವೈಭವ್ ಸೂರ್ಯವಂಶಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿದ್ದಾರೆ ಎಂದು ತಮ್ಮ ಅಭಿಪ್ರಾಯ ಕೂಡ ಹೊರಹಾಕಿದ್ದಾರೆ.