Tax Saving Schemes: ಈ 5 ಯೋಜನೆಯಲ್ಲಿ ನಿಮ್ಮ ಹಣ ಇಟ್ಟರೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ, ಕೇಂದ್ರದ ಆದೇಶ

Income Tax Saving Schemes: ಇತ್ತೀಚಿನ ಕಾಲದಲ್ಲಿ ಜನರು ಹಣ ಉಳಿತಾಯ ಮಾಡುವುದು ಮಾತ್ರವಲ್ಲದೆ ತೆರಿಗೆ ಕೂಡ ಉಳಿತಾಯ ಮಾಡುವ ಯೋಜನೆಯನ್ನು ಹುಡುಕುತ್ತಿದ್ದಾರೆ ಎಂದು ಹೇಳಬಹುದು. ಹೌದು, ಕೆಲವು ಸರ್ಕಾರೀ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಾವು ಸಂಪೂರ್ಣ ತೆರಿಗೆ ಉಳಿಸಬಹುದಾಗಿದೆ. ದೇಶದಲ್ಲಿ ತೆರಿಗೆ ಮುಕ್ತವಾದ ಅನೇಕ ಯೋಜನೆಗಳು ಜಾರಿಯಲ್ಲಿ ಮತ್ತು ಈ ಯೋಜನೆಯಲ್ಲಿ ನಾವು ಹಣವನ್ನು ಇಟ್ಟರೆ ತೆರಿಗೆ ಕಟ್ಟುವ ಅಗತ್ಯ ಕೂಡ ಇರುವುದಿಲ್ಲ,. ಹಾಗಾದರೆ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಮತ್ತು ಆ ಯೋಜನೆಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಈ ಐದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು

* ಸಾರ್ವಜನಿಕ ಭವಿಷ್ಯ ನಿಧಿ (PPF ಸ್ಕೀಮ್)
ಹೌದು, ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ಪ್ರತಿ ವರ್ಷ 1.5 ಲಕ್ಷ ರೂಪಾಯಿಯ ತನಕ PPF ನಲ್ಲಿ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

* ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (Equity ked Saving Scheme)
ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ನಾವು ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ELSS ಒಂದು ಮ್ಯೂಚುಯಲ್ ಫಂಡ್ ಯೋಜನೆ ಆಗಿದೆ ಮತ್ತು ಈ ಯೋಜನೆಯಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ELSS ಯೋಜನೆಯಲ್ಲಿ ಕೂಡ ನಾವು ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

* ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme)
ಈಗಿನ ಕಾಲದಲ್ಲಿ ಹೆಚ್ಚು ಹೆಚ್ಚು ಜನರು NPS ನಲ್ಲಿ ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದಾರೆ. ಭವಿಷ್ಯದ ಉದ್ದೇಶದಿಂದ ಜನರು ಹೆಚ್ಚು ಹೆಚ್ಚು ಹಣವನ್ನು NPS ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. NPS ಯೋಜನೆಯಲ್ಲಿ ನಾವು ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಮತ್ತು ಸೆಕ್ಷನ್ 80CCD ಅಡಿಯಲ್ಲಿ 50 ಸಾವಿರ ರೂ ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

* ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Saving Scheme)
ಪೋಸ್ಟ್ ಆಫೀಸ್ ನಲ್ಲಿ ಹಿರಿಯ ನಾಗರಿಕರ ಉಳಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೂ ಕೂಡ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. 60 ವರ್ಷ ಮೇಲ್ಪಟ್ಟ ಜನರು ಪೋಸ್ಟ್ ಆಫೀಸ್ ನಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ ಮತ್ತು ಈ ಯೋಜನೆಯಲ್ಲಿ 30 ಲಕ್ಷ ರೂಪಾಯಿಯ ತನಕ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಪಡೆದುಕೊಳ್ಳುವ ಬಡ್ಡಿಗೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

* ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Saving Scheme)
ಜನರು ಹೆಚ್ಚುವರಿ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಬೇಕು ಅಂದರೆ ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ, ರಾಷ್ಟ್ರೀಯ ಉಳಿತಾಯ ಯೋಜನೆಯ ಅಡಿಯಲ್ಲಿ ನೀವು ಪಡೆದುಕೊಳ್ಳುವ ಬಡ್ಡಿಗೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

Leave a Comment