Shreyas Iyer: ಕೊಹ್ಲಿ ದೊಡ್ಡತನದ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, ಇದು ನಿಜವಾದ ಆಟಗಾರನ ಲಕ್ಷಣ

Shreyas Iyer About Virat KKohli: ಭಾನುವಾರ RCB ಮತ್ತು ಪಂಜಾಬ್ ಕಿಂಗ್ಸ್ (RCB And Punjab Kings) ನಡುವೆ ನಡೆದ IPL ಪಂದ್ಯದಲ್ಲಿ RCB ತಂಡ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಹಿಂದಿನ ಪಂದ್ಯದ ಸೇಡು ತೀರಿಸಿಕೊಂಡಿದೆ ಎಂದು ಹೇಳಬಹುದು. ಹಿಂದಿನ ಪಂದ್ಯದಲ್ಲಿ RCB ತಂಡ ಪಂಜಾಬ್ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿತ್ತು ಮತ್ತು ಇದು RCB ಅಭಿಮಾನಿಗಳ ಬೇಸರಕ್ಕೂ ಕೂಡ ಕಾರಣವಾಗಿತ್ತು. ಇದರ ನಡುವೆ ಭಾನುವಾರ RCB ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಭರ್ಜರಿ ಆಟದ ಮೂಲಕ RCB ಹಿಂದಿನ ಪಂದ್ಯದಲ್ಲಿ ಸೋತ ಸೇಡು ತೀರಿಸಿಕೊಂಡಿದೆ ಎಂದು ಹೇಳಬಹುದು. ಇನ್ನು RCB ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಅವರಿಗೆ ಕಿಚಾಯಿಸುವ ರೀತಿಯಲ್ಲಿ ವರ್ತನೆ ಮಾಡಿದ್ದರು.

WhatsApp Group Join Now
Telegram Group Join Now

ಶ್ರೇಯಸ್ ಅಯ್ಯರ್ ಗೆ ಬೇಸರ ಮಾಡಿದ್ರ ವಿರಾಟ್ ಕೊಹ್ಲಿ
ಹೌದು, ವಿರಾಟ್ ಕೊಹ್ಲಿ (Virat Kohli) ಅವರು ಪಂದ್ಯ ಗೆದ್ದ ಬಳಿಕ ಶ್ರೇಯಸ್ ಅಯ್ಯರ್ (Shreyas Iyer) ಅವರಿಗೆ ಬೇಸರ ಆಗುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು ಎಂದು ಸಾಕಷ್ಟು ಅಭಿಮಾನಿಗಳು ಬೇಸರ ಹೊರಹಾಕಿದರು. ವಿರಾಟ್ ಕೊಹ್ಲಿ ಮತ್ತು ಹರ್ಪ್ರೀತ್ ಬ್ರಾರ್ ಅವರ ನಡುವೆ ನಡುವೆ ಮಾತಿನ ಚಕಮಕಿ ನಡೆದಿತ್ತು ಮತ್ತು ಅವರಿಬ್ಬರ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ವಿರಾಟ್ ಕೊಹ್ಲಿ ಅವರು ನಾನು ಇಲ್ಲಿ 20 ವರ್ಷದಿಂದ ಇದ್ದೀನಿ ಮತ್ತು ನಿನ್ನೆ ಕೋಚ್ ಕೂಡ ನನಗೆ ಗೊತ್ತು ಎಂದು ಹೇಳಿ ಹರ್ಪ್ರೀತ್ ಬ್ರಾರ್ ಅವರನ್ನು ತರಾಟೆಗೆ ತಗೆದುಕೊಂಡಿದ್ದರು.

ಮಾಧ್ಯಮದ ಮುಂದೆ ಎಚ್ಚರಿಯ ಹೇಳಿಕೆ ನೀಡಿದ ನೀಡಿದ ಶ್ರೇಯಸ್ ಅಯ್ಯರ್
ಇನ್ನು ಪಂದ್ಯ ಸೋತ ಬಳಿಕ ಪಂದ್ಯದ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್ ಅವರು ಪಂದ್ಯದ ಸೋಲಿಗೆ ನಾವು ಮಾಡಿದ ಕೆಲವು ತಪ್ಪುಗಳು ಕಾರಣ ಎಂದು ಹೇಳಿದರು. ಪಂದ್ಯದ ಆರಂಭದಲ್ಲೇ ನಾವು ಬಿರುಸಿನ ಆಟಕ್ಕೆ ಮುಂದಾದೆವು ಮತ್ತು ಉತ್ತಮ ಆರಂಭ ಸಿಕ್ಕರೂ ಕೂಡ ವಿಕೆಟ್ ಕಳೆದುಕೊಂಡ ಕಾರಣ ನಾವು ಸೋಲು ಅನುಭವಿಸಬೇಕಾಯಿತು ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ ಶ್ರೇಯಸ್ ಅವರು

ವಿರಾಟ್ ಕೊಹ್ಲಿಯನ್ನು ಹೊಗಳಿದ ಶ್ರೇಯಸ್ ಅಯ್ಯರ್
ಪಂಜಾಬ್ ವಿರುದ್ದದ ಪಂದ್ಯದಲ್ಲಿ ಗೆದ್ದ ಬಾಳಿಕೆ ಶ್ರೇಯಸ್ ಆಯ್ಯರ್ ಬೇಸರ ಆಗುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದ ವಿರಾಟ್ ಕೊಹ್ಲಿಯನ್ನು ಕೂಡ ಶ್ರೇಯಸ್ ಅಯ್ಯರ್ ಅವರು ಹೊಗಳಿದ್ದಾರೆ. RCB ಪಂದ್ಯ ವಿನ್ ಆಗಲು ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ನೇರ ಕಾರಣ ಎಂದು ಹೇಳಿದ ಶ್ರೇಯಸ್ ಅವರು ನಮಗೆ ಮುಳುವಾಗಿದ್ದು ವಿರಾಟ್ ಕೊಹ್ಲಿ ಅವರ ಅಮೋಘವಾದ ಬ್ಯಾಟಿಂಗ್ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರು ಅದ್ಭುತವಾಗಿ ತಂಡವನ್ನು ಮುನ್ನೆಡಿಸಿಕೊಂಡು ಹೋಗಿದ್ದಾರೆ. ಅವರ ಬ್ಯಾಟಿಂಗ್ ದಾಳಿಗೆ ನಮ್ಮ ಬೌಲರ್ ಮಂಕಾದರು ಎಂದು ಹೇಳಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ ಶ್ರೇಯಸ್ ಅಯ್ಯರ್. ವಿರಾಟ್ ಕೊಹ್ಲಿ ಬೇಸರ ಆಗುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರೂ ಕೂಡ ಶ್ರೇಯಸ್ ಅಯ್ಯರ್ ಅವರು ಕೊಹ್ಲಿಯನ್ನು ಹೊಗಳಿದ್ದು ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.

Leave a Comment