Virat Kohli: ಮಿತಿಮೀರಿದ ವಿರಾಟ್ ಕೊಹ್ಲಿ ವರ್ತನೆ, ಪಂಜಾಬ್ ಸ್ಪಿನ್ನರ್ ಗೆ ಕಿಂಗ್ ಕೊಹ್ಲಿ ಹೇಳಿದ್ದೇನು ಗೊತ್ತಾ

Virat Kohli And Harpreet Brar: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರ್ಪ್ರೀತ್ ಬ್ರಾರ್ ಮತ್ತು ವಿರಾಟ್ ಕೊಹ್ಲಿ ನಡುವೆ ಜಗಳದ ಸುದ್ದಿ ಬಹಳ ವೈರಲ್ ಆಗಿದೆ ಎಂದು ಹೇಳಬಹುದು. ಹೌದು, ಪಂಜಾಬ್ ನಡುವೆ ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಅವರು ಹರ್ಪ್ರೀತ್ ಬ್ರಾರ್ ಅವರಿಗೆ ಮಜುಗರ ಆಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ತೋರಿಸಲಾಗುತ್ತಿದೆ. ಆದರೆ ಅಲ್ಲಿ ಅಸಲಿಗೆ ನಡೆದಿದ್ದು ಏನು ಮತ್ತು ವಿರಾಟ್ ಕೊಹ್ಲಿ ಆ ರೀತಿಯಲ್ಲಿ ವರ್ತಿಸಿದ್ದು ಏಕೆ ಮತ್ತು ಇಬ್ಬರ ನಡುವೆ ಮಾತುಕತೆ ಏನು ಅನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ ವಿರಾಟ್ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಅವರ ಈ ರೀತಿಯಲ್ಲಿ ನಡೆದುಕೊಂಡಿದ್ದು ಏಕೆ ಮತ್ತು ಇಬ್ಬರ ನಡುವೆ ನಡೆದ ಮಾತುಕತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಭಾನುವಾರ ಮುಖಾಮುಖಿಯಾದ ಹರ್ಪ್ರೀತ್ ಬ್ರಾರ್ ಮತ್ತು ಕೊಹ್ಲಿ
ಹೌದು, ಭಾನುವಾರ RCB ಮತ್ತು ಪಂಜಾಬ್ ತಂಡ ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ RCB ತಂಡ ಪಂಜಾಬ್ ವಿರುದ್ಧ ಅಮೋಘವಾದ ಗೆಲುವು ಸಾಧಿಸಿದೆ. ಇನ್ನು ಪಂಜಾಬ್ ವಿರುದ್ಧ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ಸೆಲೆಬ್ರೇಶನ್ ಮಾಡಿದ್ದು ಕೆಲವರಿಗೆ ಬೇಸರ ತರಿಸಿದೆ ಎಂದು ಹೇಳಬಹುದು. ಹೌದು, ಹರ್ಪ್ರೀತ್ ಬ್ರಾರ್ ಅವರಿಗೆ ಚುಡಾಯಿಸುವ ರೀತಿಯಲ್ಲಿ ವಿರಾಟ್ ಕೊಹ್ಲಿ ಸೆಲೆಬ್ರೇಶನ್ ಮಾಡಿದ್ದೂ ಸಾಕಷ್ಟು ಜನರ ಬೇಸರಕ್ಕೆ ಕಾರಣವಾಗಿದೆ. ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಪಂಜಾಬ್ ತಂಡದ ಸ್ಪಿನ್ನರ್ ಆದ ಬ್ರಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು.

ನಾನು 20 ವರ್ಷದಿಂದ ಇಲ್ಲಿ ಇದ್ದೀನಿ ಅಂದ ಕೊಹ್ಲಿ
ಕೊಹ್ಲಿ ಮತ್ತು ಬ್ರಾರ್ ನಡುವೆ ಮಾತಿನ ಚಕಮಕಿ ನಡೆದ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ನಾನು ಕಳೆದ 20 ವರ್ಷದಿಂದ ಇಲ್ಲಿ ಇದ್ದೀನಿ ಮತ್ತು ನಿಮ್ಮ ಕೋಚ್ ಅವರಿಗೂ ನಾನು ಗೊತ್ತು ಎಂದು ಹೇಳಿದ್ದು ಮೈಕ್ ನಲ್ಲಿ ರೆಕಾರ್ಡ್ ಆಗಿದೆ. ಆದರೆ ವಿರಾಟ್ ಕೊಹ್ಲಿ ಅವರು ಸ್ಪಿನ್ನರ್ ಬ್ರಾರ್ ಅವರಿಗೆ ಏಕೆ ಈ ರೀತಿಯಲ್ಲಿ ಹೇಳಿದರು ಮತ್ತು ಇದಕ್ಕೆ ಕಾರಣ ಏನು ಅನ್ನುವುದು ಇನ್ನು ಕೂಡ ತಿಳಿದುಬಂದಿಲ್ಲ. ಕೆಲವು ಅಭಿಪ್ರಾಯದ ಪ್ರಕಾರ, ವಿರಾಟ್ ಕೊಹ್ಲಿ ಅವರು ಸುಮ್ಮನೆ ಈ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯವಿಲ್ಲ, ಆತ ಏನೋ ಮಾಡಿದ್ದಾನೆ ಮತ್ತು ಅದಕ್ಕಾಗಿ ವಿರಾಟ್ ಈ ರೀತಿ ನಡೆದುಕೊಂಡಿದ್ದಾರೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನು ಪಂದ್ಯ ಗೆದ್ದ ನಂತರ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಅವರ ಬಳಿ ಕೂಡ ಮಾತಿನ ಚಕಮಕಿ ನಡೆಸಿದ್ದಾರೆ. ಆದರೆ ಅವರ ನಡುವೆ ಏನೇನು ಮಾತಿನ ಚಕಮಕಿ ಆಗಿದೆ ಅನ್ನುವುದರ ಬಗ್ಗೆ ಮಾಹಿತಿ ತಿಲಿದಿಲ್ಲ. ಇನ್ನು ವಿರಾಟ್ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಅವರ ಬಳಿ ಈ ರೀತಿಯಲ್ಲಿ ಮಾತಿನ ಚಕಮಕಿ ಮಾಡಿದ್ದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕಳೆದ ಸೀಸನ್ ನಲ್ಲಿ ಸ್ಪಿನ್ನರ್ ಬ್ರಾರ್ ಅವರು ವಿರಾಟ್ ಕೊಹ್ಲಿ ಅವರ ಜೊತೆ ಫೋಟೋ ತಗೆಸಿಕೊಂಡಿದ್ದರು, ಆದರೆ ಈ ಬಾರಿ ವಿರಾಟ್ ಕೊಹ್ಲಿ ಅವರ ಜೊತೆ ಜಗಳ ಮಾಡಿಕೊಂಡಿರುವುದು ಬೇಸರಕ್ಕೆ ಕಾರಣವಾಗಿದೆ.

Leave a Comment