PM Mudra Loan Details: ಸಾಕಷ್ಟು ಜನರಿಗೆ ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ಹೇಳಬಹುದು. ಹೌದು, ಸಾಕಷ್ಟು ಜನರು ಸ್ವಂತ ಬಿಸಿನೆಸ್ ಮಾಡಲು ಅಥವಾ ಬೇರೆಬೇರೆ ಕೆಲಸಗಳಿಗೆ ಬ್ಯಾಂಕುಗಳಿಂದ ಸಾಲ ಪಡೆಯಲು ಬಯಸುತ್ತಾರೆ, ಆದರೆ ಬಿಸಿನೆಸ್ ಲೋನ್ ಮತ್ತು ಪರ್ಸನಲ್ ಲೋನ್ ಬಡ್ಡಿದರ ಬಹಳ ಹೆಚ್ಚಾಗಿರುವ ಕಾರಣ ಸಾಲ ಪಡೆದು ನಂತರ ಕಟ್ಟಲು ಕಷ್ಟಪಡುತ್ತಾರೆ. ಇದರ ನಡುವೆ ಕೇಂದ್ರದ ನರೇಂದ್ರ ಮೋದಿ (Narendra Modi) ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯ ಅಡಿಯಲ್ಲಿ 20 ಲಕ್ಷ ರೂಪಾಯಿಯ ತನಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು. ಹಾಗಾದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಯಾವುದು ಮತ್ತು ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ವಂತ ಬಿಸಿನೆಸ್ ಮಾಡುವವರಿಗೆ ಸಿಗಲಿದೆ ಮುದ್ರಾ ಲೋನ್ (Mudra Loan)
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸ್ವಂತ ಬಿಸಿನೆಸ್ ಮಾಡುವವರಿಗಾಗಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಮುದ್ರಾ ಯೋಜನೆಯ ಅಡಿಯಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆದುಕೊಳ್ಳಬಹುದು. ನೀವು ಯಾವ ವ್ಯವಹಾರ ಮಾಡುತ್ತೀರಿ ಅದರ ಆಧಾರದ ಮೇಲೆ ನೀವು ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದು. ಮುದ್ರಾ ಯೋಜನೆಯ ಅಡಿಯಲ್ಲಿ ನಿಮಗೆ ಸ್ವಂತ ಬಿಸಿನೆಸ್ ಆರಂಭ ಮಾಡಲು ಸುಮಾರು 20 ಲಕ್ಷ ರೂಪಾಯಿಯ ತನಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.
ಮುದ್ರಾ ಯೋಜನೆಯ ಸಾಲದ ಮೊತ್ತ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ
ಕಳೆದ ಬಜೆಟ್ ನಲ್ಲಿ ಕೇಂದ್ರದ ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ಮುದ್ರಾ ಯೋಜನೆಯಲ್ಲಿ ನೀಡಲಾಗುತ್ತಿದ್ದ ಹತ್ತು ಲಕ್ಷ ರೂಪಾಯಿ ಸಾಲದ ಮೊತ್ತವನ್ನು 20 ಲಕ್ಷಕ್ಕೆ ಏರಿಕೆ ಮಾಡುವುದರ ಮೂಲಕ ದೇಶದ ಜನತೆಗೆ ಗುಡ್ ನ್ಯೂಸ್ ನೀಡಿದ್ದರು. ಇನ್ನು ಮುದ್ರಾ ಯೋಜನೆಯ ಅಡಿಯಲ್ಲಿ, ಶಿಶು, ತರುಣ್, ಕಿಶೋರ್ ಮತ್ತು ತರುಣ್ ಪ್ಲಸ್ ಅನ್ನುವ ವರ್ಗಗಳು ಇದೆ ಮತ್ತು ಆ ವರ್ಗಗಳ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಹಾಗಾದರೆ ಯಾವ ವರ್ಗಾಗ್ಗೆ ಎಷ್ಟು ಸಾಲ ನೀಡಲಾಗುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
* ಶಿಶು ಮುದ್ರಾ ಯೋಜನೆಯ ಅಡಿಯಲ್ಲಿ ನಿಮಗೆ ಸ್ವಂತ ಬಿಸಿನೆಸ್ ಆರಂಭ ಆರಂಭ ಮಾಡಲು ಅತೀ ಕಡಿಮೆ ಬಡ್ಡಿದರದಲ್ಲಿ ಸುಮಾರು 50 ಸಾವಿರ ರೂಪಾಯಿಯ ತನಕ ಸಾಲ ನೀಡಲಾಗುತ್ತದೆ,
* ಕಿಶೋರ್ ಯೋಜನೆಯ ಅಡಿಯಲ್ಲಿ ನಿಮಗೆ ಸ್ವಂತ ಬಿಸಿನೆಸ್ ಆರಾಂಭ ಮಾಡಲು 50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿಯ ತನಕ ಸಾಲ ನೀಡಲಾಗುತ್ತದೆ.
* ತರುಣ್ ಮುದ್ರಾ ಯೋಜನೆಯ ಅಡಿಯಲ್ಲಿ ಸ್ವಂತ ಬಿಸಿನೆಸ್ ಆರಂಭ ಮಾಡಲು 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಯ ತನಕ ಸಾಲ ನೀಡಲಾಗುತ್ತದೆ.
* ತರುಣ್ ಪ್ಲಸ್ ಯೋಜನೆಯ ಅಡಿಯಲ್ಲಿ ನಿಮಗೆ ಸ್ವಂತ ಬಿಸಿನೆಸ್ ಆರಂಭ ಮಾಡಲು 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಯ ತನಕ ಸಾಲ ನೀಡಲಾಗುತ್ತದೆ.
ನೀವು ಸಾಲ ಪಡೆಯಬೇಕು ಅಂದರೆ, ಮೊದಲು ನೀವು ಯಾವ ಬಿಸಿನೆಸ್ ಆರಂಭ ಮಾಡುತ್ತಿರೋ ಅದರ ಸಂಪೂರ್ಣ ಮಾಹಿತಿ ಮತ್ತು ದಾಖಲೆಯನ್ನು ಬ್ಯಾಂಕಿಗೆ ನೀಡಲಾಗುತ್ತದೆ. ನೀವು ಮಾಡುವ ಬಿಸಿನೆಸ್ ಯಾವ ವರ್ಗದಲ್ಲಿ ಬರುತ್ತದೆಯೋ ಅದರ ಅಡಿಯಲ್ಲಿ ನೀವು ಸಾಲ ಪಡೆದುಕೊಳ್ಳಬಹುದು. ಬಹುತೇಕ ಎಲ್ಲಾ ಸರ್ಕಾರೀ ಮತ್ತು ಕೆಜಿ ಬ್ಯಾಂಕುಗಳಲ್ಲಿ ನೀವು ಮುದ್ರಾ ಯೋಜನೆಯ ಸಾಲಕ್ಕೆ ಅರ್ಜಿ ಹಾಕಬಹುದಾಗಿದೆ.