Cash Limits: ಮನೆಯಲ್ಲಿ ಹಣ ಇಟ್ಟುಕೊಳ್ಳುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ಹೊಸ ರೂಲ್ಸ್, ಬರಲಿದೆ ನೋಟೀಸ್

Cash Limits At Home: ಆದಾಯ ತೆರಿಗೆ ಇಲಾಖೆ ಈಗಾಗಲೆ ಆದಾಯ ತೆರಿಗೆ (Income Tax) ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತಂದಿದೆ ಎಂದು ಹೇಳಬಹುದು. ಹೌದು, ದೇಶದ ಪ್ರತಿಯೊಬ್ಬ ನಾಗರಿಕರು ಆದಾಯ ತೆರಿಗೆ ನಿಯಮ ಪಾಲನೆ ಮಾಡುವುದು ಕಡ್ಡಾಯ. ಇದರ ನಡುವೆ ಹಣಕಾಸು ವಹಿವಾಟುಗಳಿಗೆ ಸಂಬಂಧಪಟ್ಟಂತೆ ಕೆಲವು ಹೊಸ ಆದಾಯ ತೆರಿಗೆ ನಿಯಮ ದೇಶದಲ್ಲಿ ಜಾರಿಯಲ್ಲಿದ್ದು ಇದು ನಿಯಮ ಪಾಲನೆ ಮಾಡದೆ ಇದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು. ಅದೇ ರೀತಿಯಲ್ಲಿ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಮತ್ತು ಮನೆಯಲ್ಲಿ ತೆರಿಗೆ ನಿಯಮದ ಪ್ರಕಾರ ಎಷ್ಟು ಹಣ ಕೂಡಿಡಬಹುದು ಅನ್ನುವುದಕ್ಕೂ ಸಂಬಂಧಿಸಿದಂತೆ ನಿಯಮ ಕೂಡ ಜಾರಿಯಲ್ಲಿ ಇದೆ. ಹಾಗಾದರೆ ಆದಾಯ ತೆರಿಗೆ ನಿಯಮದ ಪ್ರಕಾರ, ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಮತ್ತು ತೆರಿಗೆ ನಿಯಮ ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳುವಂತಿಲ್ಲ
ಇತ್ತೀಚಿನ ಕಾಲದಲ್ಲಿ ಜನರು ಡಿಜಿಟಲ್ ಪೇಮೆಂಟ್ ಸಿಸ್ಟಮ್ (Digital Payment System) ಹೆಚ್ಚು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಮನೆಯಲ್ಲಿ ಹಣವನ್ನು ಶೇಖರಣೆ ಮಾಡಿಟ್ಟುಕೊಳ್ಳುವುದು ಜನರ ಅಭ್ಯಾಸ ಆಗಿಬಿಟ್ಟಿದೆ. ಇದರ ನಡುವೆ ಕೇಂದ್ರ ಸರ್ಕಾರ ತೆರಿಗೆ ನಿಯಮ ಹೊರಡಿಸಿದೆ ಮತ್ತು ತೆರಿಗೆ ನಿಯಮದ ಪ್ರಕಾರ ಮಿತಿಗಿಂತ ಹೆಚ್ಚು ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.

ಮಿತಿಗಿಂತ ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೆ ನೀವು ಆ ಹಣಕ್ಕೆ ಮೂಲ ತೋರಿಸುವುದು ಅತೀ ಕಡ್ಡಾಯವಾಗಿದೆ. ನಿಮಗೆ ಹಣ ಎಲ್ಲಿಂದ ಬಂತು, ಯಾರು ಕೊಟ್ಟಿದ್ದು ಅನ್ನುವುದರ ಬಗ್ಗೆ ಮಾಹಿತಿಯನ್ನು ತೆರಿಗೆ ಇಲಾಖೆಗೆ ನೀಡುವುದು ಕಡ್ಡಾಯ, ಇಲ್ಲವಾದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟೀಸ್ ನೀಡುವ ಸಾಧ್ಯತೆ ಹೆಚ್ಚಿದೆ. ಇನ್ನು ಮನೆಯಲ್ಲಿ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಂಡರೆ ನೀವು ಅದಕ್ಕೆ ಮೂಲ ತೋರಿಸುವುದು ಅತೀ ಕಡ್ಡಾಯ. ಅದೇ ರೀತಿಯಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯಿಂದ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ನೀವು ತೆರಿಗೆ ನಿಯಮ ಪಾಲನೆ ಮಾಡಬೇಕು.

ಆದಾಯ ತೆರಿಗೆ ಇಲಾಖೆಯ ನಿಯಮದ ಪ್ರಕಾರ, ಆದಾಯ ತೆರಿಗೆ ಸೆಕ್ಷನ್ 194N ಅಡಿಯಲ್ಲಿ ಕನಿಷ್ಠ 3 ವರ್ಷ ಆದಾಯ ತೆರಿಗೆ ಪಾವತಿ ಮಾಡದ ವ್ಯಕ್ತಿ 20 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಯಿಂದ ಹಿಂಪಡೆದರೆ ಆತ ಕನಿಷ್ಠ 2% TDS ಪಾವತಿ ಮಾಯಬೇಕು. ಅದೇ ರೀತಿಯಲ್ಲಿ 1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಆತ 5% TDS ಪಾವತಿ ಮಾಡಬೇಕು. ಇನ್ನು ITR ಪಾವತಿ ಮಾಡಿದ ವ್ಯಕ್ತಿ ಈ TDS ನಿಂದ ಕೊಂಚ ರಿಯಾಯಿತಿ ಪಡೆದುಕೊಳ್ಳಬಹುದು. ಹೌದು ಪ್ರತಿ ವರ್ಷ ITR ಪಾವತಿ ಮಾಡುವ ವ್ಯಕ್ತಿ ಬ್ಯಾಂಕ್ ಖಾತೆ ಅಥವಾ ಅಂಚೆ ಇಲಾಖೆಯಿಂದ ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಆತ 2% TDS ಪಾವತಿ ಮಾಡಿದರೆ ಸಾಕು.

ನೀವು ಮಿತಿಗಿಂತ ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟುಕೊಂಡು ಆದಾಯ ತೆರಿಗೆ ಇಲಾಖೆಗೆ ಅದರ ಬಗ್ಗೆ ಸೂಕ್ತ ಮಾಹಿತಿ ನೀಡದೆ ಇದ್ದರೆ ನಿಮ್ಮ ಹಣವನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು 2025 ರ ವರ್ಷದಲ್ಲಿ ಕಠಿಣ ಮಾಡಲಾಗಿದೆ. 2025 ಆ ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡಲು ಕೊನೆಯ ದಿನಾಂಕ ಜೂಲೈ 31 ಆಗಿದೆ.

Leave a Comment