Speed Gun In Road: ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಬಹುದು. ಸಂಚಾರಿ ಪೊಲೀಸರು ಪ್ರತಿನಿತ್ಯ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಎಷ್ಟೇ ಸಂಚಾರಿ ನಿಯಮ ಕಠಿಣವಾದರೂ ಕೂಡ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದರ ನಡುಗೆ ಈಗ ತಂತ್ರಜ್ಞಾನ ಮುಂದುವರೆದಿದೆ ಮತ್ತು ತಂತ್ರಜ್ಞಾನ ಮುಂದುವರೆದಂತೆ ಹೊಸ ಹೊಸ ನಿಯನ ಕೂಡ ದೇಶದಲ್ಲಿ ಜಾರಿಗೆ ತರಲಾಗಿದೆ.
ಇದರ ನಡುವೆ ಈಗ ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿಗೆ ಬಂದಿದೆ ಮತ್ತು ಹೊಸ ಸಂಚಾರಿ ನಿಯಮದ ಪ್ರಕಾರ ಇನ್ನುಮುಂದೆ ರಸ್ತೆಯಲ್ಲಿ ಯಾವುದೇ ಪೊಲೀಸರು ವಾಹನ ಸವಾರರನ್ನು ಅಡ್ಡಗಟ್ಟುವುದಿಲ್ಲ. ಹಾಗಾದರೆ ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ ಸಂಚಾರಿ ನಿಯಮ ಯಾವುದು ಮತ್ತು ಇನ್ನುಮುಂದೆ ಯಾವ ರೀತಿಯಲ್ಲಿ ದಂಡ ವಸೂಲಿ ಮಾಡಲಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇನ್ನುಮುಂದೆ ಪೊಲೀಸರು ರಸ್ತೆಯಲ್ಲಿ ನಿಮ್ಮನ್ನು ತಡೆಯಲ್ಲ
ಹೌದು, ಪೊಲೀಸರು ಇನ್ನುಮುಂದೆ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡಲ್ಲ ಮತ್ತು ಹೊಸ ವಿಧಾನದ ಮೂಲಕ ಪೊಲೀಸರು ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ. ರಸ್ತೆಗಳಲ್ಲಿ ಈಗ ಪೊಲೀಸರು ಸ್ಪೀಡ್ ಗನ್ ಗಳನ್ನೂ ಅಳವಡಿಸಲು ಮುಂದಾಗಿದ್ದಾರೆ ಮತ್ತು ಸ್ಪೀಡ್ ಗನ್ ರಸ್ತೆಯಲ್ಲಿ ಯಾವ ವಾಹನ ಎಷ್ಟು ವೇಗದಲ್ಲಿ ಚಲಿಸುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ.
ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತೀ ವೇಗದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ರಾಜ್ಯ ಸಂಚಾರಿ ಪೊಲೀಸರು ರಸ್ತೆಗಳಲ್ಲಿ ಸ್ಪೀಡ್ ಗನ್ ಅಳವಡಿಸಿದ್ದಾರೆ, ಈ ಸ್ಪೀಡ್ ವಾಹನಗಳ ವೇಗವನ್ನು ಅಳತೆ ಮಾಡಲು ಮತ್ತು ಅತೀ ವೇಗದಲ್ಲಿ ಯಾವ ವಾಹನ ಚಲಿಸುತ್ತೋ ಅದರ ಮಾಹಿತಿಯನ್ನು ನೀಡಲಿದೆ. ಇನ್ನು ಈ ಹೊಸ ಸಂಚಾರಿ ನಿಯಮ ಜುಲೈ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.
ನೀವು ರಸ್ತೆಯಲ್ಲಿ ಅತೀ ವೇಗದಲ್ಲಿ ವಾಹನಗಳನ್ನು ಚಲಾಯಿಸಿದರೆ ನಿಮ್ಮ ಮನೆಗೆ ಪೊಲೀಸರಿಂದ ದಂಡದ ನೋಟೀಸ್ ಬರಲಿದೆ. ಮನೆಗೆ ದಂಡದ ನೋಟೀಸ್ ಬಂದರೆ ನೀವು ಕೋರ್ಟಿಗೆ ಹೋಗಿ ದಂಡ ಪಾವತಿ ಮಾಡಬೇಕು. ಅದೇ ರೀತಿಯಲ್ಲಿ ಇನ್ನುಮುಂದೆ ಯಾವ ರಸ್ತೆಯಲ್ಲಿ ಎಷ್ಟು ವೇಗದಲ್ಲಿ ಸಂಚಾರ ಮಾಡಬೇಕು ಅನ್ನುವುದರ ಬಗ್ಗೆ ಕೂಡ ಬೋರ್ಡ್ ಹಾಕಲಾಗುತ್ತದೆ ಮತ್ತು ನಿಗದಿಪಡಿಸಿದ ವೇಗಕ್ಕಿಂತ ಅಧಿಕ ವೇಗದಲ್ಲಿ ಚಲಿಸಿದರೆ ನೀವು ದಂಡಕ್ಕೆ ಅರ್ಹರಾಗುತ್ತೀರಿ.
ರಸ್ತೆಗಳಲ್ಲಿ ಅತ್ಯಾಧುನಿಕ ಕ್ಯಾಮೆರಾ ಗಳನ್ನೂ ಅಳವಡಿಸಲು ಈಗ ಪೊಲೀಸ್ ಇಲಾಖೆ ಮುಂದಾಗಿದೆ. ವಾಹನಗಳ ಅತೀ ವೇಗ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ಹೆಲ್ಮೆಟ್ ಧರಿಸದೇ ಇರುವುದು, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ ಮಾಡುವುದು, ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುವುದು ಹೀಗೆ ಯಾವುದೇ ನಿಯಮ ಉಲ್ಲಂಘನೆ ಮಾಡಿದರೂ ದೊಡ್ಡ ಮೊತ್ತದ ದಂಡ ಇನ್ನುಮುಂದೆ ವಾಹನ ಸವಾರರು ಪಾವತಿ ಮಾಡಬೇಕು.