K.L Rahul And Sanjiv Goenka: Viral News: ನಿನ್ನೆ Lucknow Super Giants ಮತ್ತು ಡೆಲ್ಲಿ ಕಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸುವುದರ ಮೂಲಕ IPL ನಲ್ಲಿ ಹೊಸ ಸಾಧನೆ ಮಾಡಿದೆ ಎಂದು ಹೇಳಬಹುದು. ಈ ಹಿಂದೆ ಕೆ ಎಲ್ ರಾಹುಲ್ (K.L Rahul) ಅವರು Lucknow Super Giants ತಂಡದ ಪರವಾಗಿ ಆಟ ಆಡುತ್ತಿದ್ದರು, ಆದರೆ Lucknow Super Giants ತಂಡದ ಮಾಲೀಕ ಕಳೆದ ಐಪಿಎಲ್ ನಲ್ಲಿ ಕೆ ಎಲ್ ರಾಹುಲ್ ಅವರು ಮೈದಾನದಲ್ಲೇ ಅವಮಾನ ಮಾಡಿದ್ದರು.
ಕಳೆದ Lucknow Super Giants ತಂಡದ ಪರ ಆಡಿದ್ದ ಕೆ ಎಲ್ ರಾಹುಲ್ ಅವರು ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ನಿನ್ನೆ Lucknow Super Giants ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರು ದೊಡ್ಡ ದಾಖಲೆ ಮಾಡುವುದರ ಮೂಲಕ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಹೇಳಬಹುದು. ಹಾಗಾದರೆ ಪಂದ್ಯ ಗೆದ್ದ ಬಳಿಕ ಕೆಲ ಎಲ್ ರಾಹುಲ್ ಮಾಡಿದ್ದೇನು ಮತ್ತು ಇದರ ಬಗ್ಗೆ ಅಭಿಮಾನಿಗಳು ಏನು ಹೇಳಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೆ ಎಲ್ ರಾಹುಲ್ ಅವಮಾನ ಮಾಡಿದ್ದ ಸಂಜೀವ್ ಗೋಯೆಂಕಾ (Sanjiv Goenka)
ಹೌದು, ಕಳೆದ ಬಾರಿ ಕೆ ಎಲ್ ರಾಹುಲ್ Lucknow Super Giants ತಂಡದ ನಾಯಕನಾಗಿ ಆಡಿದ್ದರು ಮತ್ತು ಪಾಂಡುವೂ ಸೋತ ನಂತರ ಕೆ ಎಲ್ ರಾಹುಲ್ ಅವರಿಗೆ Lucknow Super Giants ತಂಡದ ಮಾಲೀಕರ ಸಂಜೀವ್ ಗೋಯೆಂಕಾ ಅವರು ಮೈದಾನದಲ್ಲೇ ಅವಮಾನ ಮಾಡಿದ್ದರು. ಸಂಜೀವ್ ಗೋಯೆಂಕಾ ಅವರು ಅವಮಾನ ಮಾಡಿದ ನಂತರ ಕೆ ಎಲ್ ರಾಹುಲ್ ಅವರು Lucknow Super Giants ತಂಡದಿಂದ ಹೊರಬಂದು ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.
ಅವಮಾನಕ್ಕೆ ಸೇಡು ತೀರಿಸಿಕೊಂಡ ಕೆ ಎಲ್ ರಾಹುಲ್
ನಿನ್ನೆ Lucknow Super Giants ತಂಡದ ವಿರುದ್ಧ ಜಯ ಸಾಧಿಸುವುದರ ಮೂಲಕ ಕೆ ಎಲ್ ರಾಹುಲ್ ಅವರು ಕಳೆದ ಐಪಿಎಲ್ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಹೇಳಬಹುದು. ಪಂದ್ಯ ಗೆದ್ದ ಬಳಿಕ Lucknow Super Giants ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರನ್ನು ಭೇಟಿಮಾಡಿದ ಕೆ ಎಲ್ ರಾಹುಲ್ ಅವರು ಅವರಿಗೆ ಶೇಕ್ ಹ್ಯಾಂಡ್ ಮಾಡಿ ಏನು ಮಾತನಾಡದೆ ಸುಮ್ಮನೆ ಬಂದಿದ್ದಾರೆ.
ಅವರ ಬಳಿ ಮಾತನಾಡಲು ಏನು ಇಲ್ಲದ ಕಾರಣ ಕೆ ಎಲ್ ರಾಹುಲ್ ಅವರು ಸುಮ್ಮನೆ ಕಾಟಾಚಾರಕ್ಕೆ ಕೈಕೊಟ್ಟು ಸುಮ್ಮನೆ ಬಂದಿದ್ದಾರೆ. ಇನ್ನು ಕೆ ಎಲ್ ರಾಹುಲ್ ಏನು ಮಾತನಾಡದ ಕಾರಣ ಸಂಜೀವ್ ಗೋಯೆಂಕಾ ಕೂಡ ಏನು ಮಾತನಾಡಬೇಕು ಎಂದು ತೋಚದೆ ಅವಮಾನದಿಂದ ಬೇರೆಯವರ ಜೊತೆ ಮಾತನಾಡಲು ಆರಂಭ ಮಾಡಿದ್ದಾರೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.
ಇನ್ನು ಈ ವಿಡಿಯೋ ನೋಡಿದ ಕೆ ಎಲ್ ರಾಹುಲ್ ಅವರ ಅಭಿಮಾನಿಗಳು ಮಾಡಿದ ಅವಮಾನ ಕೆ ಎಲ್ ರಾಹುಲ್ ಮರೆತಿಲ್ಲ ಎಂದು ಹೇಳಿದರೆ , ಇನ್ನೂ ಕೆಲವು ಅಭಿಮಾನಿಗಳು ಮಾಡಿದ ಅವಮಾನಕ್ಕೆ ಇದು ತಕ್ಕ ಶಾಸ್ತಿ ಎಂದು ಹೇಳಿದ್ದಾರೆ. ಅದೇ ರಿತುಯಲ್ಲಿ ಕೆಲವು ಅಭಿಮಾನಿಗಳು ಅವಮಾನ ಮಾಡಿದ ಮೇಲೆ ಯಾವ ಮುಖ ಇಟ್ಟುಕೊಂಡು ಕೈಕುಲುಕಲು ಬಂದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.