Jammu And Kashmir Attack: ಉಗ್ರರ ದಾಳಿ ಬೆನ್ನಲ್ಲೇ ಪ್ರತಿಜ್ಞೆ ಮಾಡಿದ ನರೇಂದ್ರ ಮೋದಿ, ಮೋದಿ ದಿಟ್ಟ ನಿರ್ಧಾರ

Narendra Modi About Jammi And Kashmir Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ (Jammu andKashmir Pahalgam) ನಲ್ಲಿ ನಡೆದ ಉಗ್ರರ ದಾಳಿಯಿಂದ ಸಾಕಷ್ಟು ಪ್ರವಾಸಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆ ಮಾಡಿಕೊಂಡ ಹನಿಮೂನ್ ಆಚರಣೆ ಬಂದ ನವ ದಂಪತಿಗಳು, ಕುಟುಂಬದವರ ಜೊತೆ ಪ್ರವಾಸಕ್ಕೆ ಬಂದ ಪ್ರವಾಸಿಗರು ಸೇರಿದಂತೆ ಕೆಲವು ಕನ್ನಡಿಗರು ಕೂಡ ಈ ಉಗ್ರರ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯನ್ನು ಬಿಟ್ಟು ಕೇವಲ ಪುರುಷರನ್ನು ಮಾತ್ರ ಉಗ್ರರು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಈ ಉಗ್ರರ ದಾಳಿಗೆ ಭಾರತ ಪಾತ್ರವಲ್ಲದೆ ಬೇರೆ ಬೇರೆ ದೇಶದ ಜನರು ಆಕ್ರೋಶವನ್ನು ಹೊರಹಾಕಿದ್ದಾರೆ. ಇದರ ನಡುವೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರು ಈಗ ಮಹತ್ವದ ಘೋಷಣೆ ಮಾಡಿ ದೊಡ್ಡ ತೀರ್ಮಾನ ತಗೆದುಕೊಂಡಿದ್ದಾರೆ. ಹಾಗಾದರೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಉಗ್ರರ ದಾಳಿ ಬಗ್ಗೆ ನರೇಂದ್ರ ಮೋದಿ ಖಂಡನೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ಮಾಡಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಈಗ ದೇಶದ ಪ್ರಧಾನಿಯಾದ ನರೇಂದ್ರ ಮೋದಿ (Narendra Modi) ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಇನ್ನು ಈ ಉಗ್ರರ ದಾಳಿ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಅವರು ಪ್ರವಾಸಿಗರಿಗೆ ನಾನು ನ್ಯಾಯ ಒದಗಿಸಿಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ ನರೇಂದ್ರ ಮೋದಿ ಅವರ ಸಾವಿಗೆ ನ್ಯಾಯ ಕೊಡುವ ಬಗ್ಗೆ ಮಾತನಾಡಿದ್ದಾರೆ.

ಪ್ರತಿಜ್ಞೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾಕಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಪ್ರಾಣ ಕಳೆದುಕೊಂಡವರಲ್ಲಿ ನಮ್ಮ ಕರ್ನಾಟಕದ ಕೆಲವರು ಕೂಡ ಇದ್ದಾರೆ. ಉಗ್ರರ ದಾಳಿ ನಡೆದ ಬೆನ್ನಲ್ಲೇ ಈ ದಾಳಿಯ ಬಗ್ಗೆ ಮಾತನಾಡಿದ ನರೇಂದ್ರ ಮೋದಿಯವರು, “ಈ ಹೀನ ಕೃತ್ಯದ ಹಿಂದೆ ಇರುವವರನ್ನು ನಾನು ಯಾವುದೇ ಕಾರಣಕ್ಕೂ ಬಿಡಲ್ಲ, ಅವರ ದುಷ್ಟ ಉದ್ದೇಶ ಎಂದಿಗೂ ಯಶಸ್ವಿಯಾಗಲು ನಾನು ಬಿಡುವುದಿಲ್ಲ ಮತ್ತು ಪ್ರಾಣ ಕಳೆದುಕೊಂಡವರಿಗೆ ನಾನು ನ್ಯಾಯ ಖಂಡಿತ ಒದಗಿಸುತ್ತೇನೆ” ಎಂದು ನರೇಂದ್ರ ಮೋದಿಯವರು ಪ್ರತಿಜ್ಞೆ ಮಾಡಿದ್ದಾರೆ.

ದಾಳಿಯಾದ ಸ್ಥಳಕ್ಕೆ ಭೇಟಿನೀಡಲು ಮುಂದಾದ ಮೋದಿ
ಇನ್ನು ನರೇಂದ್ರ ಮೋದಿಯವರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದ ಸ್ಥಳಕ್ಕೆ ಭೇಟಿನೀಡುವ ತೀರ್ಮಾನ ಮಾಡಿದ್ದಾರೆ ಮತ್ತು ಈ ದಾಳಿಯನ್ನು ಪ್ರಾಣ ಕಳೆದುಕೊಂಡವರಿಗೆ ಸಂತಾಪ ಕೂಡ ಸೂಚಿಸಿದ್ದಾರೆ. ಅಷ್ಟೇ ಮಾತ್ರವಲ್ಲದೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವ ಭರವಸೆಯನ್ನು ನರೇಂದ್ರ ಮೋದಿ ನೀಡಿದ್ದಾರೆ. ಉಗ್ರರ ದಾಳಿ ಬಳಿಕ ಈಗ ನರೇಂದ್ರ ಮೋದಿಯವರ ವಿರುದ್ಧವಾಗಿ ಸಾಕಷ್ಟು ಜನರು ಬೇಸರ ಕೂಡ ಹೊರಹಾಕುತ್ತಿದ್ದಾರೆ. ಸತ್ತವರಿಗೆ ನ್ಯಾಯ ಒದಗಿಸಿಕೊಡುವುದು ನರೇಂದ್ರ ಮೋದಿಯವರ ಜವಾಬ್ದಾರಿ ಎಂದು ಜನರು ಮೋದಿಯವರ ಬಳಿ ಆಕ್ರೋಶವನ್ನು ಕೂಡ ಹೊರಹಾಕುತ್ತಿದ್ದಾರೆ. ಈ ನಡುವೆ ನರೇಂದ್ರ ಮೋದಿಯವರು ಪ್ರತಿಜ್ಞೆ ಮಾಡಿದ್ದಾರೆ.

Leave a Comment