BCCI On Jammu And Kashmir Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಸುಮಾರು 28 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೌದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರವಾಸಕ್ಕೆ ಹೋಗಿದ್ದ ಸುಮಾರು 28 ಜನರು ಉಗ್ರರ ದಾಳಿಯನ್ನು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಈ ಉಗ್ರರ ದಾಳಿಗೆ ಭಾರತ ಮಾತ್ರವಲ್ಲದೆ ಬೇರೆಬೇರೆ ದೇಶದವರು ಬೇಸರವನ್ನು ಹೊರಹಾಕಿದ್ದು ಮಾತ್ರವಲ್ಲದೆ ಅವರಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಕೇಂದ್ರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಸೇರಿದಂತೆ ಅನೇಕ ಭಾರತದ ಕ್ರಿಕೆಟ್ ಆಟಗಾರರು ಈ ದಾಳಿಯ ಬಗ್ಗೆ ಬೇಸರ ಹೊರಹಾಕಿದ್ದು ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಇಂದಿನ IPL ಪಂದ್ಯದಲ್ಲಿ ಮಹತ್ವದ ಬದಲಾವಣೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಂದ 28 ಜನರು ಪ್ರಾಣವನ್ನು ಕಳೆದುಕೊಂಡಿದ್ದು ಇಡೀ ದೇಶವೇ ಸಂತಾಪ ವ್ಯಕ್ತಪಡಿಸಿದೆ. ಇದರ ನಡುವೆ ಇಂದಿನ ಐಪಿಎಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡಲು BCCI ತೀರ್ಮಾನವನ್ನು ಮಾಡಿದೆ. ದೇಶದಲ್ಲಿ ಇಂತಹ ಹೀನ ಕೃತ್ಯ ನಡೆದಿದ್ದು ದೇಶದ ಪ್ರತಿಯೊಬ್ಬರೂ ಕೂಡ ಬೇಸರದಲ್ಲಿ ಮತ್ತು ನೋವಿನಲ್ಲಿ ಇದ್ದಾರೆ. ಇದರ ನಡುವೆ ಐಪಿಎಲ್ ನಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುವ ಉದ್ದೇಶದಿಂದ ಇಂದಿನ ಪಂದ್ಯದಲ್ಲಿ ಎಲ್ಲಾ ಆಟಗಾರರು ಕಪ್ಪುಪಟ್ಟಿ ಧರಿಸಿ ಮೈದಾನಕ್ಕೆ ಇಳಿಯಲಿದ್ದಾರೆ.
ಅದೇ ರೀತಿಯಲ್ಲಿ ಇಂದಿನ ಐಪಿಎಲ್ ಪಂದ್ಯದಲ್ಲಿ ಪಟಾಕಿಯನ್ನು ಸಿಡಿಸದೆ ಇರಲು ತೀರ್ಮಾನವನ್ನು ತಗೆದುಕೊಳ್ಳಲಾಗಿದೆ. ಐಪಿಎಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವುದು ಬೇಡ ಮತ್ತು ಐಪಿಎಲ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುವ ಉದ್ದೇಶದಿಂದ ಪಟಾಕಿ ಸಿಡಿಸದೆ ಇರಲು ತೀರ್ಮಾನ ಮಾಡಲಾಗಿದೆ. ಅದೇ ರೀತಿಯಲ್ಲಿ ಇಂದು ಚಿಯರ್ ಲೀಡರ್ ಗಳನ್ನೂ ನಾವು ಐಪಿಎಲ್ ನಲ್ಲಿ ನೋಡಲು ಕೂಡ ಸಾಧ್ಯವಿಲ್ಲ, ಚಿಯರ್ ಲೀಡರ್ ಗಳು ಇದು ಐಪಿಎಲ್ ನಲ್ಲಿ ಡಾನ್ಸ್ ಮಾಡಲ್ಲ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುವ ಉದ್ದೇಶದಿಂದ ಇಂದು ಐಪಿಎಲ್ ಪಂದ್ಯದಲ್ಲಿ ಚಿಯರ್ ಲೀಡರ್ ಗಳು ಮೈದಾನದಲ್ಲಿ ಡಾನ್ಸ್ ಮಾಡಲ್ಲ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ ಬಗ್ಗೆ ಮಾತನಾಡಿದ ಕೊಹ್ಲಿ
ದೇಶದ ಟಾಪ್ ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಬೇಸರ ಹೊರಹಾಕಿದ್ದಾರೆ. ಇನ್ನು ಬೇಸರ ಹೊರಹಾಕಿದ ವಿರಾಟ್ ಕೊಹ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುವುದು ಮಾತ್ರವಲ್ಲದೆ ಈ ಹೀನ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕೇಂದ್ರದ ಬಳಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಈ ಉಗ್ರರ ದಾಳಿ ಬರಿ ಭಾರತ ಮಾತ್ರವಲ್ಲದೆ ಬೇರೆಬೇರೆ ದೇಶದವರ ಆಕ್ರೋಶಕ್ಕೆ ಕಾರಣವಾಗಿದೆ.