Indus Water Treaty abrogated: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಕಾರಣ ಸುಮಾರು 28 ಭಾರತೀಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಕ್ಕೆಂದು ಹೋದ ಸುಮಾರು 28 ಜನರು ಈ ಉಗ್ರರ ದಾಳಿಯನ್ನು ಪ್ರಾಣ ಕಳೆದುಕೊಂಡಿದ್ದು ಇದು ಭಾರತೀಯ ಕೋಪ, ಆಕ್ರೋಶ ಮತ್ತು ನೋವಿಗೆ ಕೂಡ ಕಾರಣವಾಗಿದೆ. ಪಾಕಿಸ್ತಾನದ ಉಗ್ರರು ಕೇವಲ ಹಿಂದುಗಳನ್ನು ಮಾತ್ರ ಟಾರ್ಗೆಟ್ ಮಾಡಿ ಬಲಿ ತಗೆದುಕೊಂಡಿದ್ದಾರೆ. ಇದರ ನಡುವೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಒತ್ತಡ ಕೂಡ ಬರುತ್ತಿದೆ. ಕೆಲವು ರಾಜಕೀಯ ನಾಯಕರು ಇದಕ್ಕೆಲ್ಲ ಕಾರಣ ಭಾರತೀಯ ಸರ್ಕಾರ ಸರಿ ಇಲ್ಲದೆ ಇರುವುದು ಎಂದು ಆರೋಪ ಕೂಡ ಮಾಡುತ್ತಿದ್ದಾರೆ. ಇದರ ನಡುವೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಜ್ಞೆ ಮಾಡಿದ್ದು ಈ ಹೀನ ಕೃತ್ಯ ಮಾಡಿದವರಿಗೆ ಸರಿಯಾದ ಶಿಕ್ಷೆ ಕೊಡುವುದಾಗಿ ಹೇಳಿದ್ದಾರೆ.
ಸಿಂಧೂ ನದಿ ಒಪ್ಪಂದ ರದ್ದು ಮಾಡಿದ ಭಾರತ
ಪಾಕಿಸ್ತಾನ ಈಗ ಮಾಡಿದ ತಪ್ಪಿಗೆ ತನ್ನ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡಿದೆ ಎಂದು ಹೇಳಬಹುದು. ಪಾಕಿಸ್ತಾನದ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ದಾಳಿ ಮಾಡಿದ ಭಾರತೀಯರನ್ನು ಬಲಿ ತಗೆದುಕೊಂಡ ಕಾರಣ ಭಾರತ ಸರ್ಕಾರ ಈಗ ಸಿಂಧೂ ನದಿ ಒಪ್ಪಂದ ರದ್ದು ಮಾಡಲು ತೀರ್ಮಾನವನ್ನು ಮಾಡಿದೆ. ಇನ್ನು ಈ ಕುರಿತಂತೆ ಭಾರತದ ಭದ್ರತಾ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತಗೆದುಕೊಳ್ಳಲಾಗಿದೆ ಎಂದು ಹೇಳಬಹುದು. ಇನ್ನು ಸಿಂಧೂ ನದಿ ಇಲ್ಲದೆ ಪಾಕಿಸ್ತಾನದ ಜನಜೀವನ ಊಹೆ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ ಎಂದು ಹೇಳಬಹುದು. ಪಾಕಿಸ್ತಾನದ ಜೀವಾಳ ಅನಿಸಿಕೊಂಡಿದ್ದ ಸಿಂಧೂ ನದಿ ಒಪ್ಪಂದವನ್ನು ಈಗ ರದ್ದು ಮಾಡಲು ಭಾರತ ಸರ್ಕಾರ ತೀರ್ಮಾನವನ್ನು ಮಾಡಿದೆ.
ಏನಿದು ಸಿಂಧೂ ನದಿ ಒಪ್ಪಂದ, ಪಾಕಿಸ್ತಾನಕ್ಕೆ ಏನಿದರ ಉಪಯೋಗ
ಭಾರತಕ್ಕೆ ಹೋಲಿಕೆ ಮಾಡಿದರೆ ಪಾಕಿಸ್ತಾನದಲ್ಲಿ ಮಳೆಯಾಗುವುದು ಬಹಳ ಕಡಿಮೆ ಎಂದು ಹೇಳಬಹುದು. ಇನ್ನು ಪಾಕಿಸ್ತಾನದಲ್ಲಿ ವಾರ್ಷಿಕವಾಗಿ ಕೇವಲ 200mm ಮಳೆ ಮಾತ್ರ ಆಗುತ್ತದೆ. ನಿಜ ಹೇಳಬೇಕು ಅಂದರೆ ವಿಶ್ವದದಲ್ಲಿ ಇರುವ ಬರಪೀಡಿತ ಪ್ರದೇಶಗಳಲ್ಲಿ ಪಾಕಿಸ್ತಾನ ಕೂಡ ಎಂದು ಹೇಳಬಹುದು. ಪಾಕಿಸ್ತಾನ ಬೆಳೆಗಳಿಗೆ ನೀರು ಪಡೆದುಕೊಳ್ಳುವುದು ಭಾರತದಿಂದ ಆಗಿದೆ. ಸಿಂಧೂ ನದಿಯಿಂದ ಪಾಕಿಸ್ತಾನದ ಹೇರಳ ಪ್ರಮಾಣದಲ್ಲಿ ನೀರು ಪಡೆದುಕೊಳ್ಳುತ್ತದೆ ಮತ್ತು ಪಾಕಿಸ್ತಾನಕ್ಕೆ ಸಿಂಧೂ ಜೀವ ನದಿ ಎಂದು ಹೇಳಬಹುದು.
1960 ನೇ ಇಸವಿಯಿಂದ ಭಾರತ ಪಾಕಿಸ್ತಾನಕ್ಕೆ ಸಿಂಧೂ ನದಿಯಿಂದ ನೀರು ಕೊಡುತ್ತ ಬಂದಿದೆ. ಪಾಕಿಸ್ತಾನದ ಜನರ ಪರಿಸ್ಥಿತಿ ಮತ್ತು ಪಾಕಿಸ್ತಾನದ ಮೇಲೆ ಇರುವ ಕನಿಕರದಿಂದ 1960 ರಿಂದ ಭಾರತ ಸಿಂಧೂ ನದಿ ಮುಕಾಂತರ ಪಾಕಿಸ್ತಾನಕ್ಕೆ ನೀರು ಕೊಡುತ್ತಾ, ಬಂದಿದೆ ಆದರೆ ಈಗ ಆ ಒಪ್ಪಂದವನ್ನು ರದ್ದು ಮಾಡಲು ಭದ್ರತಾ ಸಂಪುಟ ಸಭೆಯಲ್ಲಿ ತೀರ್ಮಾನವನ್ನು ಮಾಡಲಾಗಿದೆ. ಪಾಕಿಸ್ತಾನಕ್ಕೆ ಶೇಕಡಾ 76 ರಷ್ಟು ನೀರು ಇಂಡಸ್ ನದಿ, ಅಂದರೆ ಸಿಂಧೂ ನದಿಯ ಮೂಲಕ ಬರುತ್ತದೆ ಮತ್ತು ಪಾಕಿಸ್ತಾನದ ಶೇಕಡಾ 90 ರಷ್ಟು ಕೃಷಿ ಅವಲಂಬಿಸಿರುವುದು ಸಿಂಧೂ ನದಿಯ ನೀರಿನಿಂದ ಆಗಿದೆ. ಭತ್ತ, ಗೋದಿ, ಹತ್ತಿ ಸೇರಿದಂತೆ ಪ್ರಮುಖ ಬೆಳೆಗಳಿಗೆ ಸಿಂಧೂ ನದಿಯನ್ನು ನೀರು ಪಾಕಿಸ್ತಾನ ಬಳಸಿಕೊಳ್ಳುತ್ತದೆ.
ಸಿಂಧೂ ನದಿಯ ನೀರು ಬಂದ್ ಮಾಡಿದರೆ ಪಾಕಿಸ್ತಾನ ಬಹುದೊಡ್ಡ ಮಟ್ಟದ ನೀರಿನ ಅಭಾವ ಅನುಭವಿಸುತ್ತದೆ. ಪಾಕಿಸ್ತಾನ ಅಧ್ಯಕ್ಷ ಅಯೂಬ್ ಖಾನ್ ಮತ್ತು ನೆಹರು ಅವರ ಮಧ್ಯಸ್ಥಿಕೆಯಲ್ಲಿ 1960 ನೇ ಇಸವಿಯಲ್ಲಿ ಸಿಂಧೂ ನದಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೇವಲ ಸಿಂಧೂ ಮಾತ್ರವಲ್ಲದೆ ಭಾರತದಿಂದ ಪಾಕಿಸ್ತಾನಕ್ಕೆ ಹಲವು ನದಿಗಳು ಹರಿಯುತ್ತದೆ. ಭಾರತ ಕೆಲವ 20 ರಷ್ಟು ನೀರು ಬಳಕೆ ಮಾಡಿಕೊಂಡು ಉಳಿದ ನೀರನ್ನು ಪಾಕಿಸ್ತಾನಕ್ಕೆ ಬಿಡುತ್ತಿತ್ತು, ಆದರೆ ಈಗ ಆ ಒಪ್ಪಂದ ರದ್ದು ಮಾಡಲು ಭಾರತ ಮುಂದಾಗಿದೆ.
ಚೀನಾದಲ್ಲಿ ಹುಟ್ಟುವ ಸಿಂಧೂ ನದಿ ನಂತರ ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತದೆ. ಕೃಷಿ ಮಾತ್ರವಲ್ಲದೆ ಹಲವು ನೀರಾವರಿ ಚಟುವಟಿಕೆಗಳಿಗೆ ಪಾಕಿಸ್ತಾನ ಸಿಂಧೂ ನದಿಯನ್ನು ಅವಲಂಭಿಸಿದೆ, ಆದರೆ ಈಗ ಸಿಂಧೂ ನದಿ ಒಪ್ಪಂದ ರದ್ದು ಮಾಡಲು ಭಾರತ ತೀರ್ಮಾನ ತಗೆದುಕೊಂಡಿದೆ. ಪಾಕಿಸ್ತಾನದ ಮನೆಗಳು, ಕಾರ್ಖಾನೆಗಳು ಮತ್ತು ನಗರಗಳಿಗೆ ಸಿಂಧೂ ನದಿ ನೀರು ಅಗತ್ಯ. ಒಂದುವೇಳೆ ಸಿಂಧೂ ನದಿ ನೀರು ರದ್ದಾದರೆ ಪಾಕಿಸ್ತಾನದಕ್ಕೆ ಪರಿಸ್ಥಿತಿ ಹೇಳಲಾಗದ ರೀತಿಯಲ್ಲಿ ಕೆಟ್ಟದಾಗಿ ಬದಲಾಗುತ್ತದೆ.