Lower Berth: ರೈಲಿನಲ್ಲಿ ಪ್ರಯಾಣ ಮಾಡುವ 58 ವರ್ಷ ಮೇಲ್ಪಟ್ಟ ಜನರಿಗೆ ಹೊಸ ರೂಲ್ಸ್, ರೈಲ್ವೆ ನಿಯಮ ಬದಲಾವಣೆ

Lower Berth Rules Changes: ಭಾರತೀಯ ರೈಲ್ವೆ ಈಗಾಗಲೇ ತನ್ನ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತರುವುದರ ಮೂಲಕ ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿತ್ತು. ದೇಶದಲ್ಲಿ ಪ್ರತಿನಿತ್ಯ ಕೋಟ್ಯಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ರೈಲಿನಲ್ಲಿ ಪ್ರಯಾಣ ಮಾಡಿದರೆ ನಮ್ಮ ಪ್ರಯಾಣ ಸುರಕ್ಷಿತ ಆಗಿರುತ್ತದೆ ಮತ್ತು ಹೆಚ್ಚು ಆಯಾಸ ಆಗುವದಿಲ್ಲ ಹಾಗು ದೂರ ಪ್ರದೇಶವನ್ನು ಬೇಗ ತಲುಪಬಹುದು ಅನ್ನುವ ಕಾರಣಕ್ಕೆ ಈಗಿನ ಕಾಲದ ಜನರು ಹೆಚ್ಚು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಇನ್ನು ರೈಲಿನಲ್ಲಿ ಬರ್ತ್ ಆಯ್ಕೆ ವಿಕಾಹಾರದಲ್ಲಿ ಕೆಲವು ನಿಯಮಗಳನ್ನು ದೇಶದಲ್ಲಿ ಈಗಾಗಲೇ ಜಾರಿಗೆ ತರಲಾಗಿದೆ. ಅದೇ ರೀತಿಯಲ್ಲಿ ಈಗ ಲೋವರ್ ಬರ್ತ್ ನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ.

WhatsApp Group Join Now
Telegram Group Join Now

ಲೋವರ್ ಬರ್ತ್ ನಿಯಮ ಬದಲಿಸಿದ ರೈಲ್ವೆ ಇಲಾಖೆ
ಹೌದು ಭಾರತೀಯ ರೈಲ್ವೆ ಈಗ ಲೋವರ್ ಬರ್ತ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತಂದಿದೆ. ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಆಗಬಾರದು ಮತ್ತು ಅಂಗವಿಕಲರು, ಹಿರಿಯರು ಮತ್ತು ಹೆಚ್ಚು ಮಹಿಳೆಯರು ಲೋವರ್ ಬರ್ತ್ ಪ್ರಯಾಣ ಮಾಡುತ್ತಾರೆ. ಆದರೆ ಲೋವರ್ ಬರ್ತ್ ಸಂಖ್ಯೆ ಕಡಿಮೆ ಇರುವ ಕಾರಣ ಜನರು ಲೋವರ್ ಬರ್ತ್ ಟಿಕೆಟ್ ಪಡೆಯುವಲ್ಲಿ ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಬಹುದು. ಈ ಕಾರಣಗಳಿಂದ ಭಾರತೀಯ ರೈಲ್ವೆ ಈಗ ಲೋವರ್ ಬರ್ತ್ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತರಲು ಮುಂದಾಗಿದೆ.

ಲೋವರ್ ಬರ್ತ್ ಸಂಖ್ಯೆ ವಿಸ್ತರಿಸಲು ರೈಲ್ವೆ ನಿರ್ಧಾರ
ಜನರು ಹೆಚ್ಚು ಹೆಚ್ಚು ಲೋವರ್ ಬರ್ತ್ ಟಿಕೆಟ್ ಇಷ್ಟಪಡುವ ಕಾರಣ ಈಗ ಭಾರತೀಯ ರೈಲ್ವೆ ಲೋವರ್ ಬರ್ತ್ ಸಂಖ್ಯೆ ವಿಸ್ತರಣೆ ಮಾಡಲು ತೀರ್ಮಾನ ಮಾಡಿದೆ. ಇನ್ನುಮುಂದೆ 58 ವರ್ಷ ಮೇಲ್ಪಟ್ಟ ಜನರು ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಬರ್ತ್ ಆಯ್ಕೆ ಮಾಡದೆ ಇದ್ದರೂ ಕೂಡ ಅವರಿಗೆ ಲೋವರ್ ಬರ್ತ್ ಟಿಕೆಟ್ ನೀಡಲಾಗುತ್ತದೆ. ಇನ್ನು ಅಂಗವಿಕಲರು ಹಾಗು ಮಹಿಳೆಯರಿಗೆ ಹೆಚ್ಚು ಹೆಚ್ಚು ಲೋವರ್ ಬರ್ತ್ ಟಿಕೆಟ್ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ವಯಸ್ಸಾದ ವೃದ್ದರು, ಅಂಗವಿಕಲರು, ಗರ್ಭಿಣಿಯರು ಮತ್ತು ಮಹಿಳೆಯರಿಗೆ ಲೋವರ್ ಬರ್ತ್ ನಲ್ಲಿ ಹೆಚ್ಚು ಆದ್ಯತೆ ನೀಡಲು ಭಾರತೀಯ ರೈಲ್ವೆ ತೀರ್ಮಾನವನ್ನು ಮಾಡಿದೆ. ವಯಸ್ಸಾದವರಿಗೆ ಮಧ್ಯಮ ಬರ್ತ್ ಮತ್ತು ಮೇಲಿನ ಬರ್ತ್ ನಲ್ಲಿ ಕುಳಿತುಕೊಳ್ಳಲು ಆಗದ ಕಾರಣ ಭಾರತೀಯ ರೈಲ್ವೆ ಈಗ ಲೋವರ್ ಬರ್ತ್ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತಂದಿದೆ ಎಂದು ಹೇಳಬಹುದು.

2 thoughts on “Lower Berth: ರೈಲಿನಲ್ಲಿ ಪ್ರಯಾಣ ಮಾಡುವ 58 ವರ್ಷ ಮೇಲ್ಪಟ್ಟ ಜನರಿಗೆ ಹೊಸ ರೂಲ್ಸ್, ರೈಲ್ವೆ ನಿಯಮ ಬದಲಾವಣೆ”

  1. Make some arrangements to senior people to get in to the train like a ramp to climb steps. Support to board into the train. Pl. Look in to this matter seroiously.

    Reply

Leave a Comment