Top Selling Electric Scooters Under 1 Lakh: ಎಲೆಕ್ಟ್ರಿಕ್ ಸ್ಕೂಟರ್ (Electric Scooter) ತಯಾರಕ ಕಂಪನಿಗಳು ಕಡಿಮೆ ಬೆಲೆಗೆ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡುವುದರ ಮೂಲಕ ಜನರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ. ಇದರ ನಡುವೆ ಗ್ರಾಹಕರು ಯಾವ ಸ್ಕೂಟರ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗುತ್ತಿದ್ದಾರೆ. ಕಡಿಮೆ ಬೆಲೆ ಮತ್ತು ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಜನರ ಹುಡುಕಾಟಕ್ಕೆ ಅನುಗುಣವಾಗಿ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಗಳು ಕೂಡ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ. ಹಾಗಾದರೆ ಮಾರುಕಟ್ಟೆಯಲ್ಲಿ 1 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ 3 ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು (Top 3 Electric Scooters) ಯಾವುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿ TVS iQube
TVS ಕಂಪನಿಯ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಅನಿಸಿಕೊಂಡಿರುವ TVS iQube ಸ್ಕೂಟರ್ ಜನರ ಮೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಒಂದಾಗಿದೆ. ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಅತೀ ಹೆಚ್ಚು ಮಾರಾಟ ಕಾಣುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ TVS iQube ಎಲೆಕ್ಟ್ರಿಕ್ ಸ್ಕೂಟರ್ ಕೂಡ ಒಂದು. ದೊಡ್ಡ ಡಿಸ್ಪ್ಲೇ, ಬ್ಲೂಟೂತ್, ಮೊಬೈಲ್ ಚಾರ್ಜಿಂಗ್ ಸೇರಿದಂತೆ 2.2 kWh ಬ್ಯಾಟರಿ ಹೊಂದಿರುವ TVS iQube ಸ್ಕೂಟರ್ ಸುಮಾರು 75 Km ಮೈಲೇಜ್ ಕೊಡುತ್ತದೆ. ಇನ್ನು ಬೆಲೆ ಬಗ್ಗೆ ಹೇಳುವುದಾದರೆ, TVS iQube ನ ಆರಂಭಿಕ ಬೆಲೆ 94 ಸಾವಿರ ರೂಪಾಯಿ ಆಗಿದೆ ಮತ್ತು ವಿವಿಧ ರೂಪಾಂತರದಲ್ಲಿ ಖರೀದಿ ಮಾಡಬೇಕು ಅಂದರೆ ಬೆಲೆ ಅಧಿಕ.
Ola S1 X ಎಲೆಕ್ಟ್ರಿಕ್ ಸ್ಕೂಟರ್
OLA ಕಂಪನಿಯ ಇನ್ನೊಂದು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಅನಿಸಿಕೊಂಡಿರುವ Ola S1 X ದೇಶದಲ್ಲಿ ಅತೀ ಹೆಚ್ಚು ಮಾರಾಟ ಕಾಣುತ್ತಿರುವ ಸ್ಕೂಟರ್ ಗಳಲ್ಲಿ ಒಂದಾಗಿದೆ. ಕೆಲವು ಮಾದರಿಯ OLA ಸ್ಕೂಟರ್ ನಲ್ಲಿ ನಾವು ಕೆಲವು ದೋಷಗಳು ಇರುವುದನ್ನು ಕಾಣಬಹುದು, ಆದರೆ Ola S1 X ನಲ್ಲಿ ಯಾವುದೇ ದೋಷವಿಲ್ಲ. ಡಿಜಿಟಲ್ ಡಿಸ್ಪ್ಲೇ, ಸ್ಪೀಕರ್, ಬ್ಲೂಟೂತ್, ಮೊಬೈಲ್ ಚಾರ್ಜಿಂಗ್ ಮತ್ತು 3 KWH ಬ್ಯಾಟರಿ ಹೊಂದಿರುವ Ola S1 X ಎಲೆಕ್ಟ್ರಿಕ್ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 108 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಬೆಲೆ ಬಗ್ಗೆ ಹೇಳುವುದಾದರೆ, Ola S1 X ನ ಆರಂಭಿಕ ಬೆಲೆ 75 ಸಾವಿರ ರೂಪಾಯಿ ಆಗಿದೆ ಮತ್ತು ರೂಪಾಂತರದ ಮೇಲೆ ಬೆಲೆ ನಿರ್ಧಾರ ಆಗುತ್ತದೆ.
Vida V2 ಎಲೆಕ್ಟ್ರಿಕ್ ಸ್ಕೂಟರ್
Vida V2 ಎಲೆಕ್ಟ್ರಿಕ್ ಸ್ಕೂಟರ್ (Vida V2 Electric Scooter) ಕೂಡ ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಒಂದಾಗಿದೆ. ಕಳೆದ ಒಂದು ವರ್ಷದಲ್ಲಿ ದಾಖಲೆಯ ಮಾರಾಟ ಕಂಡಿರುವ Vida V2 ಎಲೆಕ್ಟ್ರಿಕ್ ಸ್ಕೂಟರ್ ಡಿಜಿಟಲ್ ಡಿಸ್ಪ್ಲೇ, ಡಿಸ್ಕ್ ಬ್ರೇಕ್, ಮೊಬೈಲ್ ಚಾರ್ಜಿಂಗ್, ಬ್ಲೂಟೂತ್ ಮತ್ತು 2.2 KWH ಬ್ಯಾಟರಿ ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ ಸೂಮಾರು 94 Km ಮೈಲೇಜ್ ಕೊಡುತ್ತದೆ. ಇನ್ನು ಬೆಲೆ ಬಗ್ಗೆ ಹೇಳುವುದಾದರೆ, Vida V2 ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ 74 ಸಾವಿರ ಆಗಿದೆ ಮತ್ತು ಬೆಲೆ ರೂಪಾಂತರ ಮೇಲೆ ನಿಗದಿ ಮಾಡಲಾಗಿದೆ.