Mutual Funds SIP: Mutual Fund ಹಣ ಇಡುವಾಗ ಈ ತಪ್ಪು ಮಾಡಿದರೆ ಹಾಕಿದ ಹಣ ಕೂಡ ಸಿಗಲ್ಲ, ಇಲ್ಲಿದೆ ಹೂಡಿಕೆ ನಿಯಮ

Mutual Funds Profit And Loss: ಈಗಿನ ಕಾಲದ ಜನರು ಹೂಡಿಕೆ ಮಾಡುವತ್ತ ಹೆಚ್ಚು ಗಮನ ಕೊಡುತ್ತಾರೆ. ಭವಿಷ್ಯದ ಉದ್ದೇಶದಿಂದ ಈಗಿನ ಕಾಲದ ಜನರು ಎಚ್ಚ್ಚು ಹೆಚ್ಚು ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ ಹೂಡಿಕೆ ಮಾಡಲು ಇರುವ ಒಂದು ಉತ್ತಮ ಆಯ್ಕೆ ಎಂದು ಹೇಳಿದರೆ ಅದು ಮ್ಯೂಚುಯಲ್ ಫಂಡ್ಸ್ (Mutual Funds) ಎಂದು ಹೇಳಬಹುದು. ಹೌದು, ಮ್ಯೂಚುಯಲ್ ಫಂಡ್ಸ್ ಗಳಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಲಾಭ ಬರುತ್ತದೆ ಅನ್ನುವ ಕಾರಣಕ್ಕೆ ಜನರು ಮ್ಯೂಚುಯಲ್ ಫಂಡ್ಸ್ ಗಳಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆ ಅಪಾಯಗಳಿಗೆ ಬದ್ಧವಾಗಿದೆ ಅನ್ನುವುದು ಇನ್ನೂ ಕೂಡ ಸಾಕಷ್ಟು ಜನರಿಗೆ ತಿಳಿದಿಲ್ಲ. ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ (Mutual Funds Investment) ಮಾಡುವ ಸಮಯದಲ್ಲಿ ನಾವು ಈ ಕೆಲವು ತಪ್ಪುಗಳನ್ನು ಮಾಡಿದರೆ ದೊಡ್ಡ ಮೊತ್ತದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಹುದು ಮತ್ತು ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡಲು ಇರುವ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೂಡಿಕೆ ಮಾಡಲು ಮ್ಯೂಚುಯಲ್ ಫಂಡ್ಸ್ ಉತ್ತಮ ಆಯ್ಕೆ
ಹೌದು, ಹೂಡಿಕೆ ಮಾಡಲು ಮ್ಯೂಚುಯಲ್ ಫಂಡ್ಸ್ ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಮ್ಯೂಚುಯಲ್ ಫಂಡ್ಸ್ ನಲ್ಲಿ ನಾವು ಲಾಂಗ್ ಟರ್ಮ್ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು, ಆದರೆ ನಾವು ಯಾವ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಅನ್ನುವುದು ಬಹಳ ಮುಖ್ಯ. ಇನ್ನು ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೆಲವು ಬಾರಿ ಹೆಚ್ಚಿನ ರಿಟರ್ನ್ಸ್ ನೀಡಲಾಗುತ್ತದೆ ಮತ್ತು ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿ ಇದ್ದ ಸಮಯದಲ್ಲಿ ಮ್ಯೂಚುಯಲ್ ಫಂಡ್ಸ್ ನಲ್ಲಿ ಇರುವ ಹಣವನ್ನು ಹಿಂಪಡೆದರೆ ಉತ್ತಮ ಲಾಭ ಗಳಿಸಿಕೊಳ್ಳಬಹುದು.

ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡುವಾಗ ಈ ತಪ್ಪು ಮಾಡಬೇಡಿ
ಹೌದು, ಮ್ಯೂಚುಯಲ್ ಫಂಡ್ಸ್ ನಲ್ಲಿ ನಾವು ಹಣವನ್ನು ಹೂಡಿಕೆ ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡಿದರೆ ದೊಡ್ಡ ಮೊತ್ತದ ನಷ್ಟ ಅನುಭವಿಸಬೇಕಾಗುತ್ತದೆ.

* ಮ್ಯೂಚುಯಲ್ ಫಂಡ್ಸ್ ನಲ್ಲಿ ನಾವು SIP ಯಲ್ಲಿ ಹೂಡಿಕೆ ಮಾಡುವ ಸಮಯದಲ್ಲಿ ಯಾವ ಯೋಜನೆ ಆಯ್ಕೆ ಮಾಡಿಕೊಳ್ಳುತ್ತೇವೋ ಅದರ ಆಧಾರದ ಮೇಲೆ ಲಾಭ ಗಳಿಸಿಕೊಳ್ಳಬಹುದು ಮತ್ತು ಮಾರುಕಟ್ಟೆಗೆ ಕುಸಿದರೆ ನೀವು ಹೂಡಿಕೆ ಮಾಡಿದ ನಷ್ಟವನ್ನು ಅನುಭವಿಸಬಹುದು.

* ಮಾರುಕಟ್ಟೆ ಕುಸಿದ ಸಮಯದಲ್ಲಿ ನೀವು SIP ಯನ್ನು ನಿಲ್ಲಿಸುವುದು ಬಹಳ ಉತ್ತಮ. ಮಾರುಕಟ್ಟೆ ಕುಸಿತ ಕಂಡ ಸಮಯದಲ್ಲಿ ನೀವು SIP ಯನ್ನು ನಿಲ್ಲಿಸಿದರೆ ನೀವು ನಷ್ಟವನ್ನು ತಪ್ಪಿಸಿಕೊಳ್ಳಬಹುದು, ಇಲ್ಲವಾದರೆ ಬಹುದೊಡ್ಡ ಮೊತ್ತದ ನಷ್ಟ ಅನುಭವಿಸವೇಕಾಗುತ್ತದೆ.

* SIP ಆಯ್ಕೆ ಮಾಡುವ ಸಮಯದಲ್ಲಿ ಯಾವ ಯೋನನೆಯಲ್ಲಿ SIP ಆಯ್ಕೆ ಮಾಡಬೇಕು ಅನ್ನುವ ಅರಿವು ಇರುವುದು ಬಹಳ ಉತ್ತಮ. ನೀವು SIP ಆಯ್ಕೆ ಮಾಡುವ ಸಮಯದಲ್ಲಿ ಎಡವಿದರೆ ನಿಮ್ಮ ಹಣ ಪಾತಾಳಕ್ಕೆ ಕುಸಿಯುತ್ತದೆ ಎಚ್ಚರ.

* ಮ್ಯೂಚುಯಲ್ ಫಂಡ್ಸ್ ನಲ್ಲಿ ನೀವು ಗಳಿಸಿದ ಆದಾಯ ತೆರಿಗೆ ನಿಯಮ ಅಡಿಯಲ್ಲಿ ಬರುತ್ತದೆ. ಮ್ಯೂಚುಯಲ್ ಫಂಡ್ಸ್ ನಲ್ಲಿ ನೀವು ಹೆಚ್ಚಿನ ಲಾಭ ಗಳಿಸಿದರೆ ತೆರಿಗೆ ನಿಯಮ ಪಾಲನೆ ಮಾಡಬೇಕು, ಇಲ್ಲವಾದರೆ ನೀವು ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಳ್ಳಬೇಕಾಗುತ್ತದೆ ಎಚ್ಚರ.

* ಅನೇಕ ಜನರು ನಾವು ಹೂಡಿಕೆ ಮಾಡಿದ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸಿಕೊಳ್ಳಬೇಕು ಎಂದು ಬಯಸುತ್ತಾರೆ, ಆದರೆ ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡುವವರಿಗೆ ತಾಳ್ಮೆ ಬಹಳ ಅಗತ್ಯ. SIP ಯಲ್ಲಿ ಅಧಿಕ ವರ್ಷಗಳ ಕಾಲ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು.

* ಮಾರುಕಟ್ಟೆ ಎತ್ತರದಲ್ಲಿ ಇರುವ ಸಮಯದಲ್ಲಿ ನೀವು SIP ಮೊತ್ತವನ್ನು ಹೆಚ್ಚಳ ಮಾಡುವುದರ ಮೂಲಕ ಲಾಭ ಹೆಚ್ಚಿಸಿಕೊಳ್ಳಬಹುದು, ಆದರೆ ಮಾರುಕಟ್ಟೆ ಸ್ಥಿತಿ ಉತ್ತಮ ಇಲ್ಲದ ಸಮಯದಲ್ಲಿ SIP ನಿಲ್ಲಿಸುವ ಬಗ್ಗೆ ತೀರ್ಮಾನ ತಗೆದುಕೊಳ್ಳುವುದು ಉತ್ತಮ.

Leave a Comment