Income Taxn Deductions New Rules: ಆದಾಯ ತೆರಿಗೆ (Income Tax) ನಿಯಮದಲ್ಲಿ ಪ್ರಸ್ತುತ ವರ್ಷದಲ್ಲಿ ಕೆಲವು ಬದಲಾವಣೆ ಜಾರಿಗೆ ತರಲಾಗಿದೆ. ಹೌದು. ಆದಾಯ ತೆರಿಗೆ ಪಾವತಿ ಮಾಡಲು ಜೂಲೈ 31 ಕಡೆಯ ದಿನಾಂಕ ಆಗಿದೆ. ಅದೇ ರೀತಿಯಲ್ಲಿ ಈ ವರ್ಷದಲ್ಲಿ ಆದಾಯ ತೆರಿಗೆ ವಿನಾಯಿತಿಯಲ್ಲಿ ಕೂಡ ಕೆಲವು ಬದಲಾವಣೆ ಮಾಡಲಾಗಿದೆ ಮತ್ತು ಆದಾಯ ತೆರಿಗೆ ಪಾವತಿ ಮಾಡುವ ಸಮಯದಲ್ಲಿ ಆದಾಯ ತೆರಿಗೆ ವಿನಾಯಿತಿ ನಿಯಮದಲ್ಲಿ ಆದ ಬದಲಾವಣೆಯ ಬಗ್ಗೆ ಅರಿತುಕೊಳ್ಳುವುದು ಬಹಳ ಅಗತ್ಯ. ಕೆಲವು ವೆಚ್ಚಗಳಲ್ಲಿ ಆದಾಯ ತೆರಿಗೆಯಲ್ಲಿ ಹೊಸದಾಗಿ ಸೇರಿಸಲಾಗಿದೆ ಮತ್ತು ಕೆಲವು ವೆಚ್ಚಗಳಿಗೆ ಇನ್ನುಮುಂದೆ ಆದಾಯ ತೆರಿಗೆ ವಿನಾಯಿತಿ ಎಂದು ತೆರಿಗೆ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಹೊಸ ನಿಯಮದ ಪ್ರಕಾರ, ಪ್ರಸ್ತುತ ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಈ ಕೆಲವು ವೆಚ್ಚಗಳಿಗೆ ಆದಾಯ ತೆರಿಗೆ ವಿನಾಯಿತಿ (Income Tax Deductions) ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಇನ್ನುಮುಂದೆ ಯಾವ ವೆಚ್ಚಗಳಿಗೆ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇನ್ನುಮುಂದೆ ಈ ವೆಚ್ಚಗಳಿಗೆ ಆದಾಯ ತೆರಿಗೆ ವಿನಾಯಿತಿ ಇಲ್ಲ
ಹೌದು, ಕೆಲವರು ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅನೇಕ ವೆಚ್ಚಗಳಲ್ಲಿ ಸೇರಿಸಿ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳುತ್ತಿದ್ದರು, ಆದರೆ ಇನ್ನುಮುಂದೆ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ.
* ಆದಾಯ ತೆರಿಗೆ ಇಲಾಖೆಯ ವರದಿಯ ಪ್ರಕಾರ, ಇನ್ನುಮುಂದೆ SEBI ಕಾಯ್ದೆ ಮತ್ತು ಸ್ಪರ್ಧಾ ಕಾಯ್ದೆಗಳ ವಿಚಾರಣೆಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಈ ಕಾಯ್ದೆಗಳು ಇನ್ನುಮುಂದೆ ಆದಾಯ ತೆರಿಗೆ ಇಲಾಖೆಯ ಅಡಿಯಲ್ಲಿ ಬರುತ್ತದೆ.
* ಸೆಕ್ಯೂರಿಟಿ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಡಿಯಲ್ಲಿ ಇನ್ನುಮುಂದೆ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ.
* ಠೇವಣಿ ಆಯ್ದೆ ಮತ್ತು ಸೆಕ್ಯೂರಿಟಿ ಕಾಂಟ್ರಾಕ್ಟ್ ಅಡಿಯಲ್ಲಿ ಕೂಡ ಇನ್ನುಮುಂದೆ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ.
* ಸ್ಪರ್ಧಾ ಕಾಯ್ದೆ 2002 ಏಪ್ರಿಲ್ 23 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಆದಾಯ ತೆರಿಗೆ ಇಲಾಖೆಯನ್ನು ನಿಯಂತ್ರಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ, ಕಾನೂನು ಉಲ್ಲಂಘನೆ ಮತ್ತು ಡಿಫಾಲ್ಟ್ ಗಳನ್ನೂ ಇತ್ಯರ್ಥ ಮಾಡಲು ಮಾಡಿದ ಯಾವುದೇ ವೆಚ್ಚವನ್ನು ತೆರಿಗೆ ವಿನಾಯಿತಿಯಲ್ಲಿ ಪರಿಗಣನೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
* SEBI ಕಾಯ್ದೆ, ಸೆಕ್ಯೂರಿಟಿ ಕಾಯ್ದೆ, ಠೇವಣಿ ಕಾಯ್ದೆ, ಸ್ಪರ್ಧಾ ಕಾಯ್ದೆ ಸೇರಿದಂತೆ ರಾಜಿಗಾಗಿ ಮಾಡಿದ ವೆಚ್ಚದಲ್ಲಿ ಯಾವುದೇ ವಿನಾಯಿತಿ ಪಡೆದುಕೊಳ್ಳಲು ಇನ್ನುಮುಂದೆ ಸಾಧ್ಯವಿಲ್ಲ.
ಬದಲಾದ ಈ ನಿಯಮ ಇದೆ ವರ್ಷದಿಂದ ದೇಶದಲ್ಲಿ ಜಾರಿಗೆ ಬಂದಿದ್ದು ಇನ್ನುಮುಂದೆ ಆದಾಯ ತೆರಿಗೆ ಇಲಾಖೆ ಹಲವು ತೆರಿಗೆ ವಿನಾಯಿತಿಯನ್ನು ರದ್ದು ಮಾಡುವ ಮೂಲಕ ದೇಶದಲ್ಲಿ ಹೊಸ ಆದಾಯ ತೆರಿಗೆ ನಿಯಮ ಜಾರಿಗೆ ತಂದಿದೆ. ಆದಾಯ ತೆರಿಗೆ ನಿಯಮ ಬದಲಾಗಿದ್ದು ಜನರು ಹೊಸ ಮತ್ತು ಹಳೆಯ ಆದಾಯ ತೆರಿಗೆ ನಿಯಮದ ಅಡಿಯಲ್ಲಿ ತೆರಿಗೆ ಪಾವತಿ ಮಾಡುತ್ತಾರೋ ಅದರ ಆಧಾರದ ಮೇಲೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.