Post Office RD Scheme Investment Plan: ಪೋಸ್ಟ್ ಆಫೀಸ್ ನಲ್ಲಿ (Post Office) ಹಣವನ್ನು ಹೂಡಿಕೆ ಮಾಡಿದರೆ ನಮ್ಮ ಹಣಕ್ಕೆ ಸುರಕ್ಷತೆ ಮತ್ತು ಉತ್ತಮ ಬಡ್ಡಿ ಸಿಗುತ್ತದೆ ಅನ್ನುವ ಕಾರಣಕ್ಕೆ ಈಗಿನ ಕಾಲದಲ್ಲಿ ಪೋಸ್ಟ್ ಆಫೀಸ್ ನ ಹಲವು ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ ಪೋಸ್ಟ್ ಆಫೀಸ್ ಹೂಡಿಕೆ ಮಾಡುವ ಜನರಿಗಾಗಿ ಹಲವು ಯೋಜನೆಯನ್ನು ಕೂಡ ಪರಿಚಯ ಮಾಡಿದೆ. ಇನ್ನು ಪೋಸ್ಟ್ ಆಫೀಸ್ ಹಲವು ಯೋಜನೆಗಳ ಬಗ್ಗೆ ಸರಿಯಾದ ಇನ್ನೂ ಕೂಡ ಜನರಿಗೆ ತಿಳಿಯದೆ ಇರುವುದು ಬೇಸರದ ಸಂಗತಿ ಆಗಿದೆ. ನಾವು ಹೇಳುವ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಕೆಲವ 5 ವರ್ಷಗಳ ಕಾಲ ಹಣ ಇಟ್ಟರೆ ಬರೋಬ್ಬರಿ 20 ಲಕ್ಷ ರೂಪಾಯಿ ಲಾಭ ಗಳಿಸಿಕೊಳ್ಳಬಹುದು. ಹಾಗಾದರೆ 20 ಲಕ್ಷ ರೂಪಾಯಿ ಲಾಭ ಸಿಗುವ ಪೋಸ್ಟ್ ಆಫೀಸ್ ನ ಈ ಯೋಜನೆ ಯಾವುದು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಣ ಸುರಕ್ಷಿತವಾಗಿರಲು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದರೆ
ಸಾಕಷ್ಟು ಜನರು ಮ್ಯೂಚುಯಲ್ ಫಂಡ್ಸ್ ನಲ್ಲಿ ಹೆಚ್ಚಿನ ಆದಾಯ ಬರುತ್ತದೆ ಅನ್ನುವ ಕಾರಣಕ್ಕೆ ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡುವುದನ್ನು ನಾವು ನೋಡಿರಬಹುದು. ಆದರೆ ಷೇರು ಮಾರುಕಟ್ಟೆ ಕುಸಿತವಾದರೆ ಮ್ಯೂಚುಯಲ್ ಫಂಡ್ ನಲ್ಲಿ ನೀವು ಇಟ್ಟ ಹಣ ಕೂಡ ಸಿಗಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಆದರೆ ಪೋಸ್ಟ್ ಆಫೀಸ್ ನ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೂ ಕೂಡ ನೀವು ಇಟ್ಟ ಹಣಕ್ಕೆ ಯಾವುದೇ ಮೋಸ ಆಗುವುದಿಲ್ಲ ಮತ್ತು ನೀವು ಇಟ್ಟ ಹಣಕ್ಕೆ ಉತ್ತಮ ರಿಟರ್ನ್ಸ್ ಸಿಗುತ್ತದೆ ಎಂದು ಹೇಳಬಹುದು.
ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಹೂಡಿಕೆ ಮಾಡಿ (Post Office RD Sceheme)
ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಉತ್ತಮವಾದ ಯೋಜನೆಯಲ್ಲಿ RD ಯೋಜನೆ ಕೂಡ ಒಂದು ಎಂದು ಹೇಳಬಹುದು. ಹೌದು, ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಉತ್ತರ ರಿಟರ್ನ್ ಸಿಗುತ್ತದೆ. ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಪ್ರತಿ ತಿಂಗಳು ಹಣವನ್ನು ಉಳಿತಾಯ ಮಾಡುವ ಮೂಲಕ ನೀವು ಯೋಜನೆಯ ಮುಕ್ತಾಯದ ಸಮಯದಲ್ಲಿ ಉತ್ತಮ ಲಾಭ ಗಳಿಸಿಕೊಳ್ಳಬಹುದು. ಪ್ರತಿ ತಿಂಗಳು ಕೇವಲ 100 ರೂ ಹೂಡಿಕೆ ಮಾಡುವುದರ ಮೂಲಕ ನೀವು ಪೋಸ್ಟ್ ಆಫೀಸ್ ನಲ್ಲಿ RD ಖಾತೆ ತೆರೆಯಬಹುದು. ಅದೇ ರೀತಿಯಲ್ಲಿ RD ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ 6.7% ಬಡ್ಡಿ ನೀಡಲಾಗುತ್ತದೆ.
ಇನ್ನು ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಹೂಡಿಕೆ ಮಾಡುವ ಕನಿಷ್ಠ ಮೊತ್ತ 100 ರೂಪಾಯಿ ಆಗಿದೆ ಮತ್ತು ಗರಿಷ್ಟ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. ಅದೇ ರೀತಿಯಲ್ಲಿ RD ಯೋಜನೆಯಲ್ಲಿ ಕನಿಷ್ಠ ಮೂರೂ ವರ್ಷ ಹೂಡಿಕೆ ಮಾಡಬೇಕು ಮತ್ತು ತುರ್ತು ಸಮಯದಲ್ಲಿ ನೀವು ಕೆಲವು ಶುಲ್ಕಗಳ ಅಡಿಯಲ್ಲಿ ಹಣವನ್ನು ಹಿಂಪಡೆಯಬಹುದು. ಇನ್ನು RD ಯೋಜನೆಯಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು 20 ಲಕ್ಷ ರೂಪಾಯಿ ತನಕ ಲಾಭ ಗಳಿಸಿಕೊಳ್ಳಬಹುದು.
5 ವರ್ಷಕ್ಕೆ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗಲಿದೆ ನೋಡಿ
* ನೀವು RD ಯೋಜನೆಯಲ್ಲಿ ಪ್ರತಿ ತಿಂಗಳು 1000 ರೂಪಾಯಿಯನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ಯೋಜನೆಯ ಮುಕ್ತಾಯದ ಸಮಯದಲ್ಲಿ 71,366 ರೂಪಾಯಿ ಲಾಭ ಪಡೆದುಕೊಳ್ಳಬಹುದು.
* ನೀವು RD ಯೋಜನೆಯಲ್ಲಿ ತಿಂಗಳಿಗೆ 2000 ರೂಪಾಯಿ ಹೂಡಿಕೆ ಮಾಡಿದರೆ 5 ವರ್ಷದ ನಂತರ ಯೋಜನೆಯ ಮುಕ್ತಾಯದ ಸಮಯದಲ್ಲಿ 1,42,732 ರೂಪಾಯಿ ಹಣವನ್ನು ಪಡೆದುಕೊಳ್ಳುತ್ತೀರಿ.
* ತಿಂಗಳಿಗೆ 3000 ರೂಪಾಯಿಯಂತೆ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಯೋಜನೆಯ ಮುಕ್ತಾಯದ ಸಮಯದಲ್ಲಿ 2,14,097 ರೂಪಾಯಿಯನ್ನು ಯೋಜನೆಯ ಮುಕ್ತಾಯದ ಸಮಯದಲ್ಲಿ ಪಡೆದುಕೊಳ್ಳಬಹುದು.
* ತಿಂಗಳಿಗೆ 5000 ರೂಪಾಯಿಯನ್ನು 5 ವರ್ಷಗಳ ಕಾಲ ಪ್ರತಿ ತಿಂಗಳು ಹೂಡಿಕೆ ಮಾಡಿದರೆ ನೀವು ಯೋಜನೆಯ ಮುಕ್ತಾಯದ ಸಮಯದಲ್ಲಿ 3,56,829 ರೂಪಾಯಿ ಪಡೆದುಕೊಳ್ಳುತ್ತೀರಿ.
* ತಿಂಗಳಿಗೆ 25,000 ರೂಪಾಯಿಯಿಂದ 35,000 ರೂಪಾಯಿ ಹಣವನ್ನು ನೀವು 5 ವರ್ಷಗಳ ಅವಧಿಗೆ RD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಯೋಜನೆಯ ಮುಕ್ತಾಯದ ಸಮಯದಲ್ಲಿ 18 ರಿಂದ 25 ಲಕ್ಷ ರೂಪಾಯಿ ಲಾಭ ಗಳಿಸಿಕೊಳ್ಳಬಹುದು.
ನೀವು ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಸಿಗುವ ರಿಟರ್ನ್ಸ್ ಹೆಚ್ಚಾಗಿರುತ್ತದೆ. ನಿಮಗೆ ಹೆಚ್ಚಿನ ಲಾಭ ಬೇಕಾದರೆ ನೀವು ಹೆಚ್ಚಿನ ಹಣವನ್ನು ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ರೀತಿಯ ಮೋಸ ಇರುವುದಿಲ್ಲ ಮತ್ತು RD ಯೋಜನೆಯಲ್ಲಿ ನೀವು ಎಷ್ಟೇ ಹಣವನ್ನು ಹೂಡಿಕೆ ಮಾಡಿದರೂ ಆ ಹಣಕ್ಕೆ 6.7% ಬಡ್ಡಿ ನೀಡಲಾಗುತ್ತದೆ.