RCB Playoff: ಪ್ಲೇ ಆಫ್ ತಲುಪಲು RCB ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು…? ಇಲ್ಲಿದೆ RCB ಪ್ಲೇ ಆಫ್ ಹಾದಿ

RCB Playoff Chances IPL 2025: ಸದ್ಯ IPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಆರಂಭದಲ್ಲಿ ನೀಡಿದ ಪ್ರದರ್ಶನವನ್ನು ಈಗ ನೀಡುತ್ತಿಲ್ಲ ಎಂದು ಹೇಳಬಹುದು. ಹೌದು, RCB ತಂಡ ಆರಂಭದಲ್ಲಿ ಎಲ್ಲಾ ಪಂದ್ಯಗಳನ್ನು ವಿನ್ ಆಗುವುದರ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿ ಇತ್ತು, ಆದರೆ ಈಗ ಮೂರನೇ ಸ್ಥಾನಕ್ಕೆ ಬಂದು ತಲುಪಿದೆ. ಆಡಿದ 9 ಪಂದ್ಯದಲ್ಲಿ 6 ಪಂದ್ಯಗಳನ್ನು ಗೆದ್ದು 3 ಪಂದ್ಯಗಳನ್ನು ಸೋತಿರುವ RCB ಈಗ ಪಾಯಿಂಟ್ ಟೇಬಲ್ ನಲ್ಲಿ 3 ನೇ ಸ್ಥಾನದಲ್ಲಿ ಇದೆ. ಈ ನಡುವೆ RCB ಅಭಿಮಾನಿಗಳಿಗೆ ಆತಂಕ ಕೂಡ ಉಂಟಾಗಿದೆ. ಹೌದು ತಂಡದಲ್ಲಿ ಕೆಲವು ಆಟಗಾರರು ವಿಫಲರಾಗಿದ್ದು ಇದು RCB ಅಭಿಮಾನಿಗಳಿಗೆ ಆತಂಕವನ್ನು ಉಂಟುಮಾಡಿದೆ. ಹಾಗಾದರೆ RCB ಪ್ಲೇ ಆಫ್ ತಲುಪಲು ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು ಮತ್ತು RCB ಮುಂದಿನ ಹಾದಿ ಹೇಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಬ್ಯಾಟಿಂಗ್ ವಿಫಲರಾದ RCB ಆಟಗಾರರು
ಹೌದು, RCB ತಂಡದ ಕೆಲವು ಪ್ರಮುಖ ಆಟಗಾರರು ಬ್ಯಾಟಿಂಗ್ ವಿಫಲರಾಗಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದುವರೆಗೆ ನಡೆದ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 3 ಪಂದ್ಯಗಳನ್ನು ಸೋತಿರುವ RCB ಪ್ಲೇ ಆಫ್ ತಲುಪಲು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಅನ್ನುವ ಚರ್ಚೆಗಳು ಕೂಡ ನಡೆಯುತ್ತಿದೆ. ಮೊದಲು 5 ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ RCB ನಂತರ ಮೂರೂ ಪಂದ್ಯಗಳನ್ನು ಸತತವಾಗಿ ಸೋಲುವುದರ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಸತತ ಮೂರೂ ಪಂದ್ಯಗಳನ್ನು ಸೋತಿದ್ದ RCB ಮೊನ್ನೆ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಮತ್ತೆ ಗೆಲುವುವಿನ ಹಾದಿಯನ್ನು ಮುಂದುವರೆಸಿದೆ.

ಪ್ಲೇ ಆಫ್ ತಲುಪಲು ಎಷ್ಟು ಪಂದ್ಯ ಗೆಲ್ಲಬೇಕು
ಈಗಾಗಲೇ ಆರು ಪಂದ್ಯಗಳನ್ನು ಗೆದ್ದಿರುವ RCB ಮತ್ತೆ ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಆಡಬೇಕಿದೆ. ಇನ್ನು RCB ಈ ಐದು ಪಂದ್ಯದಲ್ಲಿ ಕನಿಷ್ಠ 3 ಪಂದ್ಯ ವಿನ್ ಆಗಬೇಕು ಮತ್ತು ವಿನ್ ಆದ ಎಲ್ಲಾ ಪಂದ್ಯದಲ್ಲಿ ಉತ್ತಮ ರನ್ ರೇಟ್ ಕಾಯ್ದುಕೊಳ್ಳುವುದು ಬಹಳ ಅಗತ್ಯ. ಪಂದ್ಯ ಗೆಲ್ಲುವುದರ ಜೊತೆಗೆ ಉತ್ತಮ ರನ್ ರೇಟ್ ಕಾಯ್ದುಕೊಂಡರೆ ಮಾತ್ರ ಪ್ಲೇ ಆಫ್ ತಲುಪಬಹುದಾಗಿದೆ. ಇನ್ನು ಪ್ಲೇ ಆಫ್ ತಲುಪಲು ತಂಡ 16 ಪಾಯಿಂಟ್ ಗಳಿಸಿಕೊಳ್ಳುವುದು ಅಗತ್ಯ, RCB ಈಗಾಗಲೇ 12 ಅಂಕಗಳನ್ನು ಗಳಿಸಿಕೊಂಡಿದೆ ಮತ್ತು ಮುಂದಿನ 5 ಪಂದ್ಯದಲ್ಲಿ 2 ಪಂದ್ಯ ಗೆದ್ದರೆ ಪ್ಲೇ ಆಫ್ ತಲುಪಬಹುದು. ಆದರೆ 16 ಅಂಕದ ಜೊತೆ ಉತ್ತಮ ರನ್ ರೇಟ್ ಹೊಂದಿರುವುದು ಕಡ್ಡಾಯ, ಈ ಕಾರಣಗಳಿಂದ ಐದು ಪಂದ್ಯದಲ್ಲಿ ಮೂರೂ ಪಂದ್ಯ ವಿನ್ ಆಗಲೇಬೇಕು, ಮುಂದಿನ ಮೂರೂ ಪಂದ್ಯಗಳಲ್ಲಿ ಗೆದ್ದರೆ RCB ಸುಲಭವಾಗಿ ಪ್ಲೇ ಆಫ್ ತಲುಪಬಹುದು.

RCB ಜೊತೆ ಪೈಪೋಟಿಗೆ ಇಳಿದ ಮುಂಬೈ
ಒಂದು ಕಡೆ RCB ಪ್ಲೇ ಆಫ್ ತಲುಪಲು ಸಾಹಸ ಮಾಡುತ್ತಿದ್ದರೆ, ಇನ್ನೊಂದು ಕಡೆ ಮುಂಬೈ ಇಂಡಿಯನ್ಸ್ ಕೂಡ ಪ್ಲೇ ಆಫ್ ತಲುಪಲು ಪ್ರಯತ್ನ ಮಾಡುತ್ತಿದೆ. ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ತಲುಪಲು ಇನ್ನೂ ಮೂರೂ ಪಂದ್ಯಗಳನ್ನು ವಿನ್ ಆಗಬೇಕು. ಆಡಿರುವ 8 ಪಂದ್ಯದಲ್ಲಿ 5 ಪಂದ್ಯ ಗೆದ್ದು ಮೂರೂ ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ ನಲ್ಲಿ ಮೇಲಕ್ಕೆ ಬರಲು ಸಾಹಸ ಮಾಡುತ್ತಿದೆ. ಇತ್ತ ಕಡೆ ಗುಜರಾತ್ ಮತ್ತು ಡೆಲ್ಲಿ ಕ್ಯಾಪಿಟಲ್ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರ ಸ್ಥಾನದಲ್ಲಿ ಇದೆ.

Leave a Comment