Income Tax Exemption On Home Loan Interest: ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕ ಜೂಲೈ 31 ನೇ ತಾರೀಕು ಆಗಿದೆ ಮತ್ತು ಜನರು ಆದಾಯ ತೆರಿಗೆ ಸಲ್ಲಿಸಲು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರಸ್ತುತ ವರ್ಷದಲ್ಲಿ ಆದಾಯ ತೆರಿಗೆ ನಿಯಮದಲ್ಲಿ ಕೆಲವು ಬದಲಾವಣೆ ಕೂಡ ಜಾರಿಗೆ ತರಲಾಗಿದೆ ಮತ್ತು ಪ್ರಸ್ತುತ ವರ್ಷದಲ್ಲಿ ಆದಾಯ ತೆರಿಗೆ ನಿಯಮದಲ್ಲಿ ಕೆಲವು ಬದಲಾವಣೆ ಕೂಡ ಜಾರಿಗೆ ತರಲಾಗಿದೆ. ಇನ್ನು ಜಾರಿಗೆ ತರಲಾಗಿರುವ ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ, ಕೆಲವು ಖರ್ಚುಗಳನ್ನು ಆದಾಯ ತೆರಿಗೆ ವಿನಾಯಿತಿಯಿಂದ ತಗೆದು ಹಾಕಲಾಲಾಗಿದೆ ಮತ್ತು ಕೆಲವು ಖರ್ಚುಗಳನ್ನು ಆದಾಯ ತೆರಿಗೆ ವಿನಾಯಿತಿಗೆ ಸೇರಿಸಲಾಗಿದೆ. ಇನ್ನುಯ್ ಪ್ರಸ್ತುತ ವರ್ಷದಲ್ಲಿ ಗೃಹಸಾಲದ ಬಡ್ಡಿಯ ಮೇಲೆ ಕೂಡ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಹಾಗಾದರೆ ಗೃಹಸಾಲದ ಬಡ್ಡಿ ಮೇಲೆ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದಲ್ಲಿ ಜಾರಿಯಲ್ಲಿ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿ
ನೀವು ಆದಾಯ ತೆರಿಗೆ ವಿನಾಯಿತಿ ಪಡೆಯಬೇಕು ಅಂದರೆ, ನೀವು ಯಾವ ಬಗೆಯ ಆದಾಯ ತೆರಿಗೆ ಆಯ್ಕೆ ಮಾಡಿದ್ದೀರಿ ಅನ್ನುವುದು ಅತೀ ಅಗತ್ಯವಾಗಿದೆ. ಇನ್ನು ಹೊಸ ಆದಾಯ ತೆರಿಗೆ ನಿಯಮದಲ್ಲಿ ಕೆಲವು ತೆರಿಗೆ ವಿನಾಯಿತಿಯನ್ನು ತಗೆದುಹಾಕಲಾಗಿದೆ ಮತ್ತು ಹಳೆಯ ಆದಾಯ ತೆರಿಗೆ ಪದ್ದತಿಯಲ್ಲಿ ನೀವು ಕೆಲವು ಹೊಸ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ, 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಹಳೆಯ ತೆರಿಗೆ ನಿಯಮದ ಪ್ರಕಾರ, 7 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.
ಹೊಸ ತೆರಿಗೆ ಪದ್ದತಿಯಲ್ಲಿ ಪಡೆಯಬಹುದು ಗೃಹಸಾಲದ ಬಡ್ಡಿ ಮೇಲೆ ವಿನಾಯಿತಿ
ಹೌದು, ಹೊಸ ಆದಾಯ ತೆರಿಗೆ ನಿಯಮದಲ್ಲಿ ಆದಾಯ ತೆರಿಗೆ ಸಲ್ಲಿಸುವವರು ಗೃಹಸಾಲದ ಮೇಲೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಆದರೆ, ಗೃಹಸಾಲದ ಬಡ್ಡಿ ಮೇಲೆ ತೆರಿಗೆ ವಿನಾಯಿತಿಯನ್ನು ನೇರವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಕೆಲವು ನಿಯಮ ಪಾಲನೆ ಮಾಡಬೇಕು. ಹೊಸ ಆದಾಯ ತೆರಿಗೆ ನಿಯಮದಲ್ಲಿ ಕೆಲವು ನಿಯಮ ಪಾಲನೆ ಮಾಡಿದರೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ, ಗೃಹಸಾಲದ ಬಡ್ಡಿ ಮೇಲೆ ವಿನಾಯಿತಿ ಪಡೆದುಕೊಳ್ಳಲು ಬಾಡಿಗೆ ಆಸ್ತಿಯ ನಿಯಮ ಅನುಸರಿಸಬೇಕು.
ತೆರಿಗೆ ನಿಯಮದ ಪ್ರಕಾರ, ನೀವು ಮನೆಯಲ್ಲಿ ಬಾಡಿಗೆಗೆ ನೀಡಿದ್ದರೆ ಮಾತ್ರ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ನೀವು ಗೃಹಸಾಲ ಪಡೆದುಕೊಂಡಿರುವ ಮನೆ ಸ್ವಯಂ ಆಕ್ರಮಿತವಲ್ಲ, ಆದರೆ ಬಾಡಿಗೆ ಆಗಿದ್ದರೆ ನೀವು ಬಡ್ಡಿ ಅಂಶವನ್ನು ಒಳಗೊಂಡಿರುವ ಮನೆ ಆಸ್ತಿ ಆದಾಯದಲ್ಲಿ ನಿವ್ವಳ ವೆಚ್ಚವನ್ನು ಸರಿಹೊಂದಿಸಬಹುದಾಗಿದೆ. ನೀವು ಮನೆಯಲ್ಲಿ ಸ್ವಂತವಾಗಿ ವಾಸಿಸುತ್ತಿದ್ದರೆ ಯಾವುದೇ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ. ನೀವು ಬಾಡಿಗೆಗೆ ಇದ್ದರೆ ನಷ್ಟವನ್ನು ಆದಾಯದಲ್ಲಿ ಸರಿಹೊಂದಿಸಬಹುದಾಗಿದೆ.
ಹೊಸ ಆದಾಯ ತೆರಿಗೆ ಪದ್ದತಿಯಲ್ಲಿ ನೇರವಾಗಿ ಮನೆ ಸಾಲದ ಬಡ್ಡಿ ಮೇಲೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಮನೆ ಬಾಡಿಗೆಗೆ ಇದ್ದರೆ ಅದರ ಮೇಲಿನ ಖರ್ಚು ಮತ್ತು ಬಡ್ಡಿಯಲ್ಲಿ ಕಡಿತ ಮಾಡುವ ಮೂಲಕ ನಿವ್ವಳ ಆದಾಯದಲ್ಲಿ ಸೆಟ್ ಆಫ್ ಪ್ರಯೋಜನ ಪಡೆಯಬಹುದು. ಗೃಹಸಲಾದ ಬಡ್ಡಿ ಮೇಲೆ ಸಿಗುವ ತೆರಿಗೆ ವಿನಾಯಿತಿಯಲ್ಲಿ ಯಾವುದಾದರೂ ಅನುಮಾನವಿದ್ದರೆ ನೀವು ಆದಾಯ ತೆರಿಗೆ ಸಲಹೆಗಾರರನ್ನು ಬೇಟಿಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.