Pakistan Media: ಪಾಕಿಸ್ತಾನದ ಮೀಡಿಯಾದಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ, ವೈರಲ್ ಆಯಿತು ಸಿದ್ದರಾಮಯ್ಯ ಮಾತು

Siddaramaiah In Pakistan Media: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ (Jammu And Kashmir Pahalgam) ಉಗ್ರರ ದಾಳಿಯ ನಂತರ ಸುಮಾರು 28 ಭಾರತೀಯರು ಪ್ರಾಣ ಕಳೆದುಕೊಂಡ ನಂತರ ಅನೇಕ ರಾಜಕೀಯ ನಾಯಕರು ಪಾಕಿಸ್ತಾನದ ವಿರುದ್ಧವಾಗಿ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹೌದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಗೆ ಪ್ರವಾಸಕ್ಕೆ ಹೋದ ಸುಮಾರು 28 ಭಾರತೀಯರನ್ನು ಪಾಕ್ ಉಗ್ರರು ಬಲಿ ತೆಗೆದುಕೊಂಡಿದ್ದಾರೆ. ಇದರ ನಡುವೆ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದು ಈಗಾಗಲೇ ಪಾಕಿಸ್ತಾನದ ಜೊತೆಗೆ ಇರುವ ಅನೇಕ ಒಪ್ಪಂದಗಳನ್ನು ಭಾರತ ರದ್ದು ಮಾಡಿದೆ. ಇದರ ನಡುವೆ ನಮ್ಮ ಕರ್ನಾಟಕದ ಮುಖ್ಯ ಮಂತ್ರಿಯಾದ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಹಳ ಸುದ್ದಿಯಾಗಿದ್ದಾರೆ.

WhatsApp Group Join Now
Telegram Group Join Now

ಪಾಕಿಸ್ತಾನದ ಮಾಧ್ಯಮದಲ್ಲಿ ಸುದ್ದಿಯಾದ ಸಿದ್ದರಾಮಯ್ಯ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Chief Minister Siddaramaiah) ಅವರು ಸದ್ಯ ಪಾಕಿಸ್ತಾನದ ಮಾಧ್ಯಮದಲ್ಲಿ ಬಹಳ ಸುದ್ದಿಯಾಗಿದ್ದಾರೆ. ಪಾಕಿಸ್ತಾನ ಭಾರತೀಯರ ಮೇಲೆ ದಾಳಿ ಮಾಡಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಬಹಳ ಹೆಚ್ಚಾಗಿದೆ. ಎರಡು ದೇಶಗಳ ರಾಜಕಾರಣಿಗಳು ಈ ಉಗ್ರರ ದಾಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ ಮತ್ತು ಅದೇ ರೀತಿಯಲ್ಲಿ ಕರ್ನಾಟಕ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಕೂಡ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದಾರೆ.

ಯುದ್ಧದ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿದ್ದೇನು
ಪಾಕಿಸ್ತಾನದವರು ಭಾರತೀಯರ ಪ್ರಾಣ ಬಲಿ ತಗೆದುಕೊಂಡ ನಂತರ ಈ ದಾಳಿಯ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾವು ಪಾಕಿಸ್ತಾನದ ಮೇಲೆ ಯುದ್ಧ ಮಾಡುದ ಅಗತ್ಯ ಇಲ್ಲ, ಬಿಗಿ ಕ್ರಮಗಳನ್ನು ತಗೆದುಕೊಂಡರೆ ಸಾಕು ಮತ್ತು ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು ಮತ್ತು ಜನರಿಗೆ ಭದ್ರತೆ ಬೇಕು, ನಾವು ಯುದ್ಧದ ಪರ ಇಲ್ಲ ಮತ್ತು ನಾವು ಶಾಂತಿ ಪರ, ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ತಗೆದುಕೊಳ್ಳಬೇಕು” ಎಂದು ಸಿದ್ದರಾಮನಯ್ಯ ಅವರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಹೊಗಳಿದ ಪಾಕಿಸ್ತಾನ ಮೀಡಿಯಾ
ಸಿದ್ದರಾಮಯ್ಯ ಅವರು ಮಾಧ್ಯಮದ ಮುಂದೆ ಹೇಳಿದ ಈ ಮಾತು ಈಗ ಪಾಕ್ ಮಾಧ್ಯಮಗಳಲ್ಲಿ ಕೂಡ ವೈರಲ್ ಆಗಿದೆ. ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅಗತ್ಯ ಇಲ್ಲ ಮತ್ತು ಬಿಗಿ ಕ್ರಮ ಕೈಕೊಳ್ಳಬೇಕು ಎಂದು ಹೇಳಿಕೆ ನೀಡಿರುವುದು ಸರಿ ಇದೆ ಮತ್ತು ಭದ್ರತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆ ನೀಡಿರುವುದು ಸರಿ ಇದೆ ಎಂದು ಪಾಕಿಸ್ತಾನ ಮೀಡಿಯಾ ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದೆ. ಇನ್ನು ಪಾಕಿಸ್ತಾನದಲ್ಲಿ ಸಿದ್ದರಾಮಯ್ಯ ಅವರ ಮಾತುಗಳು ವೈರಲ್ ಆದ ಬೆನ್ನಲ್ಲೇ ಇದರ ಬಗ್ಗೆ ಅನಿಸಿಕೆ ಹೊರಹಾಕಿದ ಭಾರತೀಯರು, ಸಿದ್ದರಾಮಯ್ಯ ಅವರು ಈ ರೀತಿಯಲ್ಲಿ ಹೇಳಿಕೆ ನೀಡಬಾರದಿತ್ತು ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

Leave a Comment