Virat Kohli Quit India: ವಿರಾಟ್ ಕೊಹ್ಲಿ (Virat Kohli) ದೇಶದ ಮತ್ತು ವಿಶ್ವದ ಟಾಪ್ ಕ್ರಿಕೆಟ್ ಆಟಗಾರ ಮತ್ತು ವಿಶ್ವದ ಶ್ರೀಮಂತ ಕ್ರಿಕೆಟ್ ಅಟರಗಾರರಲ್ಲಿ ಒಬ್ಬರು ಎಂದು ಹೇಳಬಹುದು. ಸದ್ಯ IPL ನಲ್ಲಿ ಬಹಳ ಬ್ಯುಸಿ ಆಗಿರುವ ವಿರಾಟ್ ಕೊಹ್ಲಿ ಅವರು ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗುವ ತೀರ್ಮಾನ ಮಾಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹೌದು, ವಿರಾಟ್ ಕೊಹ್ಲಿ ಮತ್ತು ಅವರ ಅನುಷ್ಕಾ ಶರ್ಮಾ (Anushka sharma) ಅವರು ಭಾರತವನ್ನು ಬಿಟ್ಟು ಲಂಡನ್ ಗೆ ಹೋಗುವ ತೀರ್ಮಾನ ಮಾಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಹಾಗಾದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತ ಬಿಟ್ಟು ಲಂಡನ್ ಗೆ ಹೋಗುತ್ತಾರಾ ಮತ್ತು ಈ ನಿರ್ಧಾರ ವಿರಾಟ್ ಕೊಹ್ಲಿ ತಗೆದುಕೊಂಡಿರುವುದು ಏಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ ಬಿಟ್ಟು ಹೋಗಲು ನಿರ್ಧಾರ ಮಾಡಿದ್ರ ವಿರಾಟ್ ಕೊಹ್ಲಿ
ಹೌದು, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಆಗಾಗ ಲಂಡನ್ ದೇಶಕ್ಕೆ ಹೋಗಿ ಬರುತ್ತಾರೆ. ಇನ್ನು ವಿರಾಟ್ ಕೊಹ್ಲಿ ಅವರು ಲಂಡನ್ ಗೆ ಹೋಗುವ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ಬಲಿ ಕೇಳಿದಾಗ ಅವರು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಮುಂದಿನ ದಿನಗಳಲ್ಲಿ ಲಂಡನ್ ನಲ್ಲಿ ನೆಲೆಸುವ ತೀರ್ಮಾನ ಮಾಡಿದ್ದಾರೆ ಮತ್ತು ಈ ಕಾರಣಕ್ಕೆ ಅವರು ಆಗಾಗ ಲಂಡನ್ ದೇಶಕ್ಕೆ ಹೋಗುತ್ತಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಭಾರತ ಬಿಡುತ್ತಿರುವುದು ಏಕೆ…
ಕೆಲವು ಸೆಲೆಬ್ರಿಟಿಗಳು ಕುಟುಂಬದ ಮುಂದಿನ ಭವಿಷ್ಯ ಮತ್ತು ಮಕ್ಕಳ ಭವಿಷ್ಯದ ಉದ್ದೇಶದಿಂದ ಬೇರೆಬೇರೆ ದೇಶಕ್ಕೆ ಹೋಗಿ ನೆಲೆಸುವುದು ನಾವು ಕಾಣಬಹುದು. ಅದೇ ರೀತಿಯಲ್ಲಿ ಅನುಷ್ಕಾ ಶರ್ಮಾ ಕೂಡ ಮಕ್ಕಳು ಸಾಮಾನ್ಯವಾಗಿ ಬೆಳೆಸುವ ಉದ್ದೇಶದಿಂದ ಲಂಡನ್ ದೇಶಕ್ಕೆ ಹೋಗುವ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಮಕ್ಕಳು ಸೆಲೆಬ್ರಿಟಿಗಳು ಆದಕಾರಣ ಅವರು ಏನೇ ಮಾಡಿದರು ಅದು ಗಮನ ಸೆಳೆಯುತ್ತದೆ. ಅವರು ಏನೇ ಸಾಧನೆ ಮಾಡಿದರು ಅದನ್ನು ಪ್ರಶಂಸೆ ಮಾಡಲು ಸಾಧ್ಯವಾಗುವುದಿಲ್ಲ, ಈ ಕಾರಣಕ್ಕೆ ನಾವು ಮಕ್ಕಳ ಜೊತೆ ಲಂಡನ್ ನಲ್ಲಿ ನೆಲೆಸುವ ತೀರ್ಮಾನ ಮಾಡಿದ್ದೇವೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
ಅಭಿಮಾನಿಗಳ ಬೇಸರಕ್ಕೆ ಕಾರಣವಾದ ಕೊಹ್ಲಿ ನಿರ್ಧಾರ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಲಂಡನ್ ನಲ್ಲಿ ನೆಲೆಸುವ ತೀರ್ಮಾನವನ್ನು ಮಾಡಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಮತ್ತು ಇಷ್ಟು ಜನಪ್ರಿಯತೆ ಗಳಿಸಿಕೊಂಡಿರುವುದು ಭಾರತದಲ್ಲಿ ಮತ್ತು ಅವರು ಭಾರತವನ್ನು ಬಿಟ್ಟರೆ ಅವರು ಭಾರತಕ್ಕೆ ಅವಮಾನ ಮಾಡಿದ ಹಾಗೆ ಸಾಕಷ್ಟು ಜನರು ಅಭಿಮಾನಿಗಳು ಅವರ ಅನಿಸಿಕೆಯನ್ನು ಹೊರಹಾಕುತ್ತಿದ್ದಾರೆ. ಅದೇ ರೀತಿಯಲ್ಲಿ ಕೆಲವು ಅಭಿಮಾನಿಗಳು ಇದು ಸರಿಯಾದ ನಿರ್ಧಾರ ಎಂದು ಕೂಡ ಹೇಳುತ್ತಿದ್ದಾರೆ.