Bank Merge: ಈಗಿನ ಕಾಲದಲ್ಲಿ ಹಣಕಾಸು ಕ್ಷೇತ್ರ ಎಷ್ಟು ಮುಂದುವರೆದಿದೆ ಅಂದರೆ ಪ್ರತಿಯೊಂದು ವಹಿವಾಟು ಕೂಡ ಬ್ಯಾಂಕುಗಳ ಮೂಲಕವೇ ನಡೆಯುತ್ತದೆ ಎಂದು ಹೇಳಬಹುದು. ಇದರ ನಡುವೆ ಕೇಂದ್ರ ಸರ್ಕಾರ ಜನರಿಗೆ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಕಡಿಮೆ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸಿಗಬೇಕು ಅನ್ನುವ ಕಾರಣಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಬದಲಾವಣೆ ಜಾರಿಗೆ ತಂದಿದೆ ಎಂದು ಹೇಳಬಹುದು. ಕಳೆದ RBI ಅನೇಕ ಬ್ಯಾಂಕುಗಳನ್ನು ವಿಲೀನ ಮಾಡುವುದರ ಮೂಲಕ ಗ್ರಾಹಕರಿಗೆ ಹಲವು ಸೇವೆಗಳು ಸಿಗುವಂತೆ ಮಾಡಿತ್ತು.
ಅದೇ ರೀತಿಯಲ್ಲಿ ಈಗ RBI ದೇಶಾದ್ಯಂತ ಸುಮಾರು 15 ಬ್ಯಾಂಕುಗಳು ಮೇ 1 ನೇ ತಾರೀಕಿನಿಂದ ವಿಲೀನ ಮಾಡಲು ಮುಂದಾಗಿದೆ, ಬ್ಯಾಂಕುಗಳು ವಿಲೀನ ಆಗುವ ಕಾರಣ ಜನರು ಬದಲಾಗುವ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಹಾಗಾದರೆ ಮೇ 1 ನೇ ತಾರೀಕಿನಿಂದ ದೇಶದಲ್ಲಿ ಯಾವ ಯಾವ ಬ್ಯಾಂಕುಗಳು ವಿಲೀನ ಆಗಲಿದೆ ಮತ್ತು ಬದಲಾಗುವ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶಾದ್ಯಂತ ವಿಲೀನ ಆಗಲಿದೆ 15 ಗ್ರಾಮೀಣ ಬ್ಯಾಂಕುಗಳು
RBI ಮತ್ತು ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ಮೇ 1 ನೇ ತಾರೀಕಿನಿಂದ ದೇಶಾದ್ಯಂತ ಸುಮಾರು 15 ಗ್ರಾಮೀಣ ಬ್ಯಾಂಕುಗಳು ವಿಲೀನ ಆಗಲಿದೆ ಎಂದು ತಿಳಿದುಬಂದಿದೆ. ಇನ್ನು ಮೇ 1 ನೇ ತಾರೀಕಿನಿಂದ 43 ಇದ್ದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 28 ಕ್ಕೆ ಇಳಿಯಲಿದೆ ಎಂದು ಕೇಂದ್ರ ತಿಳಿಸಿದೆ. ಇನ್ನು ನೀವು ಕೂಡ ಗ್ರಾಮೀಣ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿದ್ದರೆ ಬದಲಾಗುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ.
RBI ನೀಡಿರುವ ಮಾಹಿತಿಯ ಪ್ರಕಾರ, ಈ ಬ್ಯಾಂಕುಗಳು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಜಮ್ಮು ಮತ್ತು ಕಶ್ಮೀರ ಬಂಗಾಲ ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ತಾನದ ಬ್ಯಾಂಕುಗಳು ಎಂದು ತಿಳಿದುಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಸಿಗುವಂತೆ ಮಾಡಲು RBI ಈಗ 15 ಗ್ರಾಮೀಣ ಬ್ಯಾಂಕುಗಳನ್ನು ವಿಲೀನ ಮಾಡಲು ತೀರ್ಮಾನ ಮಾಡಿದೆ. ಇನ್ನು ಈ ಗ್ರಾಮೀಣ ಬ್ಯಾಂಕುಗಳು ವಿಲೀನವಾದ ನಂತರ ದೇಶದಲ್ಲಿ ಇರುವ 43 ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 28 ಕ್ಕೆ ಇಳಿಯಲಿದೆ.
ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ, ಒಡಿಶಾ ಮತ್ತು ರಾಜಸ್ತಾನದಲ್ಲಿ ಎರಡು RRB ವಿಲೀನ ಮಾಡಿ ತಲಾ ಒಂದು RRB ಯನ್ನು ರಚನೆ ಮಾಡಲಾಗುತ್ತದೆ. ದೇಶದಲ್ಲಿ RRB ಸುಮಾರು 22069 ಶಾಖೆಗಳನ್ನು ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಎಲ್ಲಾ ಬ್ಯಾಂಕುಗಳು RRB ಮೂಲಕ ಸಿಗಬೇಕು ಅನ್ನುವ ಉದ್ದೇಶದಿಂದ ದೇಶದಲ್ಲಿ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ ಇಳಿಮುಖ ಮಾಡಲು ಈಗ RBI ಮುಂದಾಗಿದೆ. ಇನ್ನು ಗ್ರಾಮೀಣ ಬ್ಯಾಂಕುಗಳು ವಿಲೀನವಾದ ನಂತರ ಗ್ರಾಮೀಣ ಪ್ರದೇಶದ ಜನರು ಹಲವು ಬ್ಯಾಂಕಿಂಗ್ ಸೇವೆಯನ್ನು ಏಕಕಾಲದಲ್ಲಿ ಪಡೆದುಕೊಳ್ಳಲಿದ್ದಾರೆ. ಇನ್ನು ಯಾವ ಯಾವ ಬ್ಯಾಂಕುಗಳು ವಿಲೀನ ಆಗಲಿದೆ ಅನ್ನುವ ಪಟ್ಟಿಯನ್ನು ಇನ್ನೇನು ಬಿಡುಗಡೆ ಮಾಡಬೇಕಿದೆ.