RCB and Delhi: ಇದು ನನ್ನ ಗ್ರೌಂಡ್ ಎಂದು ಕೆ ಎಲ್ ರಾಹುಲ್ ಲೆಕ್ಕ ಚುಕ್ತಾ ಮಾಡಿದ ಕೊಹ್ಲಿ, ವೈರಲ್ ವಿಡಿಯೋ

RCB And Delhi Capitals Match: ನಿನ್ನೆ RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB And Delhi Capitals) ನಡೆವೆ ನಡೆದ IPL 2025 ರ ಎರಡನೆಯ ಹಂತದ ಪಂದ್ಯದಲ್ಲಿ RCB ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಭರ್ಜಟಿ ಜಯವನ್ನು ಸಾಧಿಸಿದೆ ಎಂದು ಹೇಳಬಹುದು. ಈ ಹಿಂದೆ ನಡೆದ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರು ಅಮೋಘ ಬ್ಯಾಟಿಂಗ್ ಮಾಡಿದ್ದು RCB ಸೋಲುವಂತೆ ಮಾಡಿದ್ದರು ಮತ್ತು ಪಂದ್ಯ ಗೆದ್ದ ನಂತರ ಕೆ ಎಲ್ ರಾಹುಲ್ ಅವರು ಮೈದಾನದಲ್ಲಿ ಕಾಂತಾರ ಚಿತ್ರದ ಒಂದು ದೃಶ್ಯವನ್ನು ಮಾಡಿ ತೋರಿಸಿದ್ದರು. ಸದ್ಯ ಈಗ RCB ಆದಿನ ಸೋತ ಸೇಡನ್ನು ಈಗ ತೀರಿಸಿಕೊಂಡಿದೆ ಎಂದು ಹೇಳಬಹುದು. ಹೌದು, ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕ್ರುನಲ್ ಪಾಂಡ್ಯ ಅವರ ಅಮೋಘ ಬ್ಯಾಟಿಂಗ್ ನಿಂದ RCB ತಂಡ ಡೆಲ್ಲಿ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

WhatsApp Group Join Now
Telegram Group Join Now

ಡೆಲ್ಲಿ ವಿರುದ್ಧ ಗೆದ್ದು ಬಿಗಿದ RCB
ನಿನ್ನೆ ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ IPL ಎರಡನೆಯ ಹಂದ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ RCB ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲಿ ಮತ್ತೆ ಮೇಲಕ್ಕೆ ಬಂದಿದೆ ಎಂದು ಹೇಳಬಹುದು. ಅಂತಿಮ ನಿರ್ಣಾಯಕ ಪಂದ್ಯದಲ್ಲಿ ಉತ್ತಮವಾಗಿ ಪ್ರದರ್ಶನವನ್ನು ನೀಡುತ್ತಿರುವ RCB ಈ ಬಾರಿಯ IPL ನಲ್ಲಿ ಪ್ಲೇ ಆಫ್ ತಲುಪುವ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 163 ರನ್ನುಗಳ ಮೊತ್ತವನ್ನು RCB ತಂಡಕ್ಕೆ ನೀಡಿತ್ತು. 163 ರನ್ ಮೊತ್ತವನ್ನು ಬೆನ್ನು ಹತ್ತಿದ RCB ಆರಂಭಿಕ ಆಘಾತ ಅನುಭವಿಸುವುದರ ಮೂಲಕ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಆದರೆ ವಿರಾಟ್ ಕೊಹ್ಲಿ ಮತ್ತು ಕ್ರುನಲ್ ಪಾಂಡ್ಯ ಅವರ ಅಮೋಘವಾದ ಬ್ಯಾಟಿಂಗ್ ನಿಂದ ಡೆಲ್ಲಿ ವಿರುದ್ಧ 165 ಹೊಡೆಯುವುದರ ಮೂಲಕ ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೋತ ಸೇಡು ತೀರಿಸಿಕೊಂಡಿದೆ.

ಕೆ ಎಲ್ ರಾಹುಲ್ ಗೆ ತಿರುಗೇಟು ಕೊಟ್ಟ ಕೊಹ್ಲಿ
ಕಳೆದ ಬಾರಿ RCB ಸೋತ ನಂತರ ಮೈದಾನದಲ್ಲಿ ಕಾಂತಾರ ದೃಶ್ಯ ಪ್ರದರ್ಶನ ಮಾಡಿದ್ದ ಕೆ ಎಲ್ ರಾಹುಲ್ ಅವರಿಗೆ ಈಗ ವಿರಾಟ್ ಕೊಹ್ಲಿ ಅವರು ತಿರುಗೇಟು ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಕಾಂತಾರ ದೃಶ್ಯವನ್ನು ಕೆ ಎಲ್ ರಾಹುಲ್ ಅವರ ಬಳಿ ಮಾಡಿ ತೋರಿಸಿದ್ದಾರೆ. ತಮಾಷೆಗಾಗಿ ಕೆ ಎಲ್ ರಾಹುಲ್ ಅವರ ಬಳಿ ಬಂದ ಕೊಹ್ಲಿ ರಾಹುಲ್ ಮಾಡಿದ ದೃಶ್ಯವನ್ನು ಮಾಡಿ ತೋರಿಸುವುದರ ಮೂಲಕ ರಾಹುಲ್ ಅವರ ಬಳಿ ತಮಾಷೆ ಮಾಡಿದ್ದಾರೆ ಮತ್ತು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.

ಸದ್ಯ IPL ನಲ್ಲಿ ಪ್ಲೇ ಆಫ್ ತಲುಪಲು ತಂಡಗಳು ಹರಸಾಹಸವನ್ನು ಪಡುತ್ತಿದೆ ಎಂದು ಹೇಳಬಹುದು. ಇದರ ನಡುವೆ RCB ಕೂಡ ರೇಸ್ ನಲ್ಲಿ ಇದ್ದು ಇನ್ನು ಒಂದು ಪಂದ್ಯಗಳನ್ನು ವಿನ್ ಆದರೆ RCB ಪ್ಲೇ ಆಫ್ ತಲುಪುವುದು ಬಹುತೇಕ ಖಚಿತವಾಗಲಿದೆ. ಸದ್ಯ RCB IPL 2025 ರ ಪಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿ ಇದ್ದು ಈಗಾಗಲೇ ಹತ್ತು ಪಂದ್ಯಗಳನ್ನು ಆಡಿದೆ. ಇನ್ನು ಒಂದು ಪಂದ್ಯ ವಿನ್ ಆದರೆ RCB ಈ ಬಾರಿಯ IPL ನಲ್ಲಿ ಪ್ಲೇ ಆಫ್ ಪ್ರವೇಶ ಪಡೆದ ಮೊದಲ ತಂಡ ಅನಿಸಿಕೊಳ್ಳಲಿದೆ.

Leave a Comment