About Vaibhav Suryavanshi: BCCI ವೈಭವ್ ಸೂರ್ಯವಂಶಿಗೆ ಮೂಳೆ ಪರೀಕ್ಷೆ ಮಾಡಿದ್ದು ಏಕೆ…? ಭೂಮಿ ಮಾರಿದ ತಂದೆ

Vaibhav Suryavanshi Rajasthan Royals: ಸದ್ಯ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದೇ ಒಂದು ಸುದ್ದಿ ಅಂದರೆ ಅದು ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಸುದ್ದಿ ಎಂದು ಹೇಳಬಹುದು. ಕೇವಲ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ತನ್ನ ಅಮೋಘ ಬ್ಯಾಟಿಂಗ್ ಮೂಲಕ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಪಂದ್ಯದಲ್ಲಿ ಕೇವಲ 35 ಎಸೆತಕ್ಕೆ 100 ರನ್ ಕಲೆಹಾಕುವುದರ ಮೂಲಕ ವೈಭವ್ ಸೂರ್ಯವಂಶಿ ಅವರು IPL ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

WhatsApp Group Join Now
Telegram Group Join Now

ಈ ಹಿಂದೆ ಇದ್ದ ಎಲ್ಲಾ ದಾಖಲೆಯನ್ನು ಅಳಿಸಿ ಹಾಕುವುದರ ಮೂಲಕ ವೈಭವ್ ಸೂರ್ಯವಂಶಿ ಅವರು IPL ನಲ್ಲಿ ತನ್ನದೇ ಆದ ಹೊಸ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ವೈಭವ್ ಸೂರ್ಯವಂಶಿ ಅವರು ಬಗ್ಗೆ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಇದರ ನಡುವೆ ವೈಭವ್ ಸೂರ್ಯವಂಶಿ ಅವರಿಗೆ BCCI ಮ್ಯೂಲ್ ಪರೀಕ್ಷೆ ಮಾಡಿಸಿದ್ದು ಏಕೆ ಅನ್ನುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈಭವ್ ಸೂರ್ಯವಂಶಿ ನಿಜವಾಗ್ಲೂ 14 ವರ್ಷನ…?
ಹೌದು, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಕಂಡು ಈತನಿಗೆ ನಿಜವಾಗ್ಲೂ 14 ವರ್ಷ ವಯಸ್ಸಾ ಎಂದು ಸಾಕಷ್ಟು ಜನರು ಅನುಮಾನವನ್ನು ಹೊರಹಾಕುತ್ತಿದ್ದಾರೆ ಮತ್ತು ಇದಕ್ಕೆ ಕಾರಣ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಜುನೈದ್ ಖಾನ್ ಅವರ ಹೇಳಿಕೆ ಎಂದು ಹೇಳಬಹುದು. ಕಳೆದ ವರ್ಷ ನಡೆದ ಅಂಡರ್ 19 ಏಷ್ಯಾ ಕಪ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಕಂಡ ಜುನೈದ್ ಖಾನ್ ಅವರು ಈ ಹುಡುಗನಿಗೆ ನಿಜವಾಗ್ಲೂ 14 ವರ್ಷ ವಯಸ್ಸಾ ಅಥವಾ ಹೆಚ್ಚಾಗಿದೆಯಾ ಅನ್ನುವ ಅನುಮಾನವನ್ನು ಹೊರಹಾಕಿದ್ದರು. ಜುನೈದ್ ಖಾನ್ ಅವರ ಈ ಹೇಳಿಕೆ ತಳ್ಳಿಹಾಕಿದ ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ (Vaibhav Suryavanshi Father Sanjiv Suryavanshi) ಅವರು ಜುನೈದ್ ಖಾನ್ ಅವರ ಪ್ರಶ್ನೆಗೆ ಉತ್ತರ ಕೂಡ ನೀಡಿದ್ದರು.

ವೈಭವ್ ಸೂರ್ಯವಂಶಿಗೆ ಮೂಳೆ ಪರೀಕ್ಷೆ ಮಾಡಿದ ಬಿಸಿಸಿಐ
ಹೌದು, ಅಂಡರ್ 19 ಏಷ್ಯಾ ಕಪ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ BCCI ಮೂಳೆ ಪರೀಕ್ಷೆ ಮಾಡಿತ್ತು ಮತ್ತು ಮೂಳೆ ಪರೀಕ್ಷೆಯಲ್ಲಿ ವೈಭವ್ ಸೂರ್ಯವಂಶಿ ಅವರು ಯಶಸ್ವಿ ಕೂಡ ಆಗಿದ್ದರು. ಹೌದು, ವೈಭವ್ ಸೂರ್ಯವಂಶಿಗೆ 8 ವರ್ಷ ವಯಸ್ಸಿದ್ದಾಗಲೇ BCCI ಆತನಿಗೆ ಮೂಳೆ ಪರೀಕ್ಷೆ ಮಾಡಿದೆ. ಯುವ ಕ್ರಿಕೆಟಿಗರ ವಯಸ್ಸು ಪರಿಶೀಲನೆ ಮಾಡುವ ಉದ್ದೇಶದಿಂದ BCCI ಸಾಮಾನ್ಯವಾಗಿ ಈ ಮೂಳೆ ಪರೀಕ್ಷೆ ಮಾಡುತ್ತದೆ ಮತ್ತು ಆ ಪರೀಕ್ಷೆಯಲ್ಲಿ ವೈಭವ್ ಸೂರ್ಯವಂಶಿ ಅವರ ನಿಖರ ವಯಸ್ಸು ಕೂಡ BCCI ಗೆ ತಿಳಿದಿದೆ ಎಂದು ವೈಭವ್ ಸೂರ್ಯವಂಶಿ ಅವರ ತಂದೆ ಸಜೀವ ಸೂರ್ಯವಂಶಿ ಅವರು ಹೇಳಿದ್ದಾರೆ.

ಮಗನಿಗಾಗಿ ಕೃಷಿ ಭೂಮಿ ಮಾರಿದ್ದ ಸಂಜೀವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಒಬ್ಬ ಬಡ ಕುಟುಂಬದ ಹುಡುಗ ಮತ್ತು ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಅಂದರೆ ಬಹಳ ಇಷ್ಟಪಡುವ ಹುಡುಗ. ಮಗನ ಕ್ರಿಕೆಟ್ ಅಸೆ ಈಡೇರಿಸಲು ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ ಅವರು ಕೃಷಿ ಭೂಮಿ ಮಾರಾಟ ಮಾಡಿದ್ದಾರೆ. ವೈಭವ್ ಸೂರ್ಯವಂಶಿ ಅವರು ತನ್ನ 13 ನೇ ವಯಸ್ಸಿಗೆ ಅಂಡರ್ 19 ತಂಡಕ್ಕೆ ಆಯ್ಕೆ ಆಗಿದ್ದರು ಮತ್ತು ಅಂಡರ್ 19 ಏಷ್ಯಾ ಕಪ್ ನಲ್ಲಿ ವೈಭವ್ ಸೂರ್ಯವಂಶಿ ಅವರ ಉತ್ತಮ ಪ್ರದರ್ಶನ ಕಂಡ ಹಲವು ಮಾಜಿ ಕ್ರಿಕೆಟ್ ಆಟಗಾರರು ವೈಭವ್ ಸೂರ್ಯವಂಶಿ ಅವರ ನಿಖರ ವಯಸ್ಸಿನ ಬಗ್ಗೆ ಅನುಮಾನ ಕೂಡ ಹೊರಹಾಕಿದ್ದರು.

Leave a Comment