KIA Syros Car EMI Details: ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕಾರು ಇರುವುದನ್ನು ನಾವು ಕಾಣಬಹುದು. ಹೌದು, ಜೀವನದಲ್ಲಿ ಒಮ್ಮೆಯಾದರೂ ತಮಗೆ ಇಷ್ಟವಾದ ಕಾರ್ ಖರೀದಿ ಮಾಡಬೇಕು ಅನ್ನುವ ಬಯಕೆ ಎಲ್ಲರಿಗೂ ಇದ್ದೆ ಇರುತ್ತದೆ. ಅದೇ ರೀತಿಯಲ್ಲಿ ಕಾರ್ ತಯಾರಕ ಕಂಪನಿಗಳು ಜನರಿಗೆ ಇಷ್ಟವಾಗುವ ರೀತಿಯಲ್ಲಿ ಕಡಿಮೆ ಬೆಲೆಗೆ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ. ಈ ನಡುವೆ ಜನರು ಯಾವ ಕಾರ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗುತ್ತಿದ್ದಾರೆ. ಕಾರ್ ಖರೀದಿ ಮಾಡುವ ಇಷ್ಟಪಡುವ ಜನರಿಗೆ ಕಾರುಗಳ ಆಯ್ಕೆಗಳು KIA ಕಾರುಗಳು ಕೂಡ ಒಂದು ಹೇಳಿದರೆ ತಪ್ಪಾಗಲ್ಲ. ಹೌದು KIA ಕಾರ್ ಕಂಪನಿ ಹಲವು ಬಗೆಯ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿಯಲ್ಲಿ KIA ಕಾರುಗಳನ್ನು ಜನರು ಕಡಿಮೆ EMI ನಲ್ಲಿ ಕೂಡ ಖರೀದಿ ಮಾಡಬಹುದು.
12 ಲಕ್ಷದ ಒಳಗೆ ಖರೀದಿಸಿ KIA ಕಾರ್
ಹೌದು, ಕಡಿಮೆ ಬೆಲೆಗೆ ಬಜೆಟ್ ಕಾರ್ ಖರೀದಿ ಮಾಡಬೇಕು ಅಂದುಕೊಂಡವರಿಗೆ KIA Syros ಒಂದು ಉತ್ತಮ ಆಯ್ಕೆ ಆಗಿದೆ. KIA Syros ಒಂದು ಫ್ಯಾಮಿಲಿ ಕಾರ್ ಆಗಿದ್ದು ಜನರು ಕಡಿಮೆ ಡೌನ್ ಪೇಮೆಂಟ್ ಮಾಡಿ ಮನೆಗೆ ಕಾರ್ ತರಬಹುದು. KIA Syros ಒಂದು SUV ಕಾರ್ ಆಗಿದ್ದು ಜನರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯಲ್ಲಿ ಕೂಡ KIA Syros ಖರೀದಿ ಮಾಡಬಹುದು. ನಿಮ್ಮ ಬಳಿ ಹಣಕಾಸಿನ ಸಮಸ್ಯೆ ಇದ್ದರೆ ನೀವು ಅತೀ ಕಡಿಮೆ ಡೌನ್ ಪೇಮೆಂಟ್ ಮಾಡುವುದರ ಮೂಲಕ KIA Syros ಕಾರನ್ನು ಖರೀದಿ ಮಾಡಬಹುದು. ಹಾಗಾದರೆ KIA Syros ಕಾರಿನ ಡೌನ್ ಪೇಮೆಂಟ್ ಮತ್ತು ಬೆಲೆ ಎಷ್ಟು ಅನ್ನುವುದರ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
KIA Syros ಕಾರಿನ ಬೆಲೆ ಮತ್ತು EMI
KIA Syros SUV ಕಾರ್ ಆಗಿದ್ದು ಈಗ ಜನರು ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ KIA Syros ಕಾರನ್ನು ಮನೆಗೆ ತರಬಹುದು. ಹಲವು ಹಣಕಾಸು ಸಂಸ್ಥೆಗಳು ನಿಮಗೆ KIA Syros ಕಾರಿನ ಮೇಲೆ ಸಾಲ ನೀಡಲು ತಯಾರಿದ್ದು ನೀವು ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ KIA Syros ಕಾರನ್ನು ಮನೆಗೆ ತರಬಹುದು. ಹಲವು ರೂಪಾಂತರಗಳಲ್ಲಿ ನಿಮಗೆ KIA Syros ಕಾರ್ ಲಭ್ಯವಿದ್ದು KIA Syros ಕಾರಿನ ಆರಂಭಿಕ ಬೆಲೆ 12 ಲಕ್ಷ ರೂಪಾಯಿ ಆಗಿದೆ. ಇದರಲ್ಲಿ RTO ಟ್ಯಾಕ್ಸ್ ಮತ್ತು ವಿಮೆ ಕೂಡ ಒಳಗೊಂಡಿದೆ. ನೀವು ಡೀಸೆಲ್ ಮಾದರಿಯ ಕಾರ್ ಖರೀದಿ ಮಾಡಬೇಕು ಅಂದರೆ KIA Syros ಕಾರಿನ ಬೆಲೆ 12.73 ಲಕ್ಷ ರೂಪಾಯಿ ಆಗಿದೆ.
ಇನ್ನು ಹಲವು ಹಣಕಾಸು ಸಂಸ್ಥೆಯ ಸಹಾಯದಿಂದ ನೀವು KIA Syros ಕಾರನ್ನು ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಖರೀದಿ ಮಾಡಬಹುದು. ಹೌದ್, ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ 10 ಲಕ್ಷ ರೂಪಾಯಿ ತನಕ ನೀವು ಹಣಕಾಸು ಸಂಸ್ಥೆಯಿಂದ ಸಾಲ ಪಡೆದುಕೊಳ್ಳಬಹುದು. ಹೌದು, ಶೇಕಡಾ 9 ರ ಬಡ್ಡಿ ದರದಲ್ಲಿ ನೀವು ನೀವು 10 ಲಕ್ಷ ರೂಪಾಯಿ ತನಕ KIA Syros ಕಾರಿನ ಮೇಲೆ ಸಾಲ ಪಡೆಯಬಹುದು. ನೀವು ಏಳು ವರ್ಷಗಳ ಕಾಲ EMI ಆಯ್ಕೆ ಪಡೆದುಕೊಂಡರೆ ನೀವು ಪ್ರತಿ ತಿಂಗಳು 17,263 ರೂಪಾಯಿ EMI ಪಾವತಿ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಏಳು ವರ್ಷದಲ್ಲಿ ನೀವು KIA Syros ಕಾರಿನ ಮೇಲೆ ಸುಮಾರು 3.77 ಲಕ್ಷ ರೂಪಾಯಿ ಬಡ್ಡಿ ಪಾವತಿ ಮಾಡಿದಂತೆ ಆಗುತ್ತದೆ. ನಿಮ್ಮ EMI ಮೊತ್ತ ನೀವು ಎಷ್ಟು ಡೌನ್ ಪೇಮೆಂಟ್ ಮಾಡುತ್ತಿರೋ ಅದರ ಆಧಾರದ ಮೇಲೆ ನಿರ್ಧಾರ ಆಗುತ್ತದೆ.