Economy Of Pakistan: ಪಾಕಿಸ್ತಾನದ ಆರ್ಥಿಕತೆ ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಗಮ್ ನಲ್ಲಿ ಪಾಕಿಸ್ತಾನಿ ಉಗ್ರರು ದಾಳಿ ಅನೇಕ ಭಾರತೀಯರ ಪ್ರಾಣ ಬಳಿ ತಗೆದುಕೊಂಡ ನಂತರ ಭಾರತ ಈಗ ಪಾಕಿಸ್ತಾನದ ಮೇಲೆ ಆರ್ಥಿಕವಾಗಿ ದಾಳಿ ಮಾಡಲು ಆರಂಭ ಮಾಡಿದೆ ಎಂದು ಹೇಳಬಹುದು. ಸದ್ಯ ಈಗ ಪಾಕಿಸ್ತಾನದ ಜನರ ಪರಿಸ್ಥಿತಿ ಹೇಳಲು ಆಗದಷ್ಟು ಕಷ್ಟವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಭಾರತದ ಜನರ ಮೇಲೆ ದಾಳಿಮಾಡಿ ದೊಡ್ಡ ತಪ್ಪು ಮಾಡಿದ ಪಾಕಿಸ್ತಾನದಲ್ಲಿ ಈಗ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಪಾಕಿಸ್ತಾನದಲ್ಲಿ ಅಕ್ಕಿ ಹಿಟ್ಟು, ಅಡುಗೆ ಎಣ್ಣೆ, ಹಣ್ಣುಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಆಗುತ್ತಿದ್ದು ಜನರು ಕಂಗಾಲಾಗಿ ಹೋಗಿದ್ದಾರೆ. ಹಾಗಾದರೆ ಪಾಕಿಸ್ತಾನದಲ್ಲಿ ಯಾವ ವಸ್ತುವಿನ ಬೆಲೆ ಏರಿಕೆ ಆಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಾಕಿಸ್ತಾನದಲ್ಲಿ ಏರಿಕೆ ಆಯಿತು ದಿನಸಿ ವಸ್ತುಗಳ ಬೆಲೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಮ್ ನಲ್ಲಿ ಉಗ್ರರ ದಾಳಿ ನಂತರ ಭಾರತ ಈಗ ಪಾಕಿಸ್ತಾನದ ಮೇಲೆ ಆರ್ಥಿಕವಾಗಿ ಯುದ್ಧ ಸರಿದೆ ಎಂದು ಹೇಳಬಹುದು. ಸದ್ಯ ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿದ್ದು ಜನರು ಕಂಗಾಲಾಗಿ ಹೋಗಿದ್ದಾರೆ. ಇನ್ನು ಪಾಕಿಸ್ತಾನದ ಈ ಲಕ್ಷಣವನ್ನು ನೋಡಿದರೆ ಪಾಕಿಸ್ತಾನ ಇನ್ನೇನು ಕೆಲವೇ ತಿಂಗಳಲ್ಲಿ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಮ್ಮ ದೇಶದಲ್ಲಿ ಒಂದು ಕೆಜಿ ಅಕ್ಕಿ ಹಿಟ್ಟಿನ ಬೆಲೆ ಹೆಚ್ಚು ಅಂದರೆ 250 ರೂಪಾಯಿ ಆಗಿದೆ, ಆದರೆ ಪಾಕಿಸ್ತಾನದಲ್ಲಿ ಒಂದು ಕೆಜಿ ಅಕ್ಕಿ ಹಿಟ್ಟಿನ ಬೆಲೆ 600 ರೂಪಾಯಿ ಆದ. ನಮ್ಮ ದೇಶದಲ್ಲಿ 200 ರೂಪಾಯಿಯ ಒಳಗೆ ಸಿಗುವ ಅಡುಗೆ ಎಣ್ಣೆ ಮತ್ತು ಇತರೆ ಎಣ್ಣೆಯ ಬೆಲೆ ಪಾಕಿಸ್ತಾನದಲ್ಲಿ 500 ರೂಪಾಯಿ ಆಗಿದೆ.
ಮೌಲ್ಯ ಕಳೆದುಕೊಂಡು ಪಾಕಿಸ್ತಾನದ ಕರೆನ್ಸಿ
ಭಾರತದ ಮೇಲೆ ದಾಳಿ ನಂತರ ಪಾಕಿಸ್ತಾನದ ಕರೆನ್ಸಿ ಮೂಲ್ಯ ಕೂಡ ಭಾರತದಲ್ಲಿ ಕಡಿಮೆ ಆಗಿದೆ ಎಂದು ಹೇಳಬಹುದು. ಪಾಕಿಸ್ತಾನದ ಒಂದು ರೂಪಾಯಿಗೆ ಭಾರತದಲ್ಲಿ ಕೇವಲ ಈಗ 30 ಪೈಸೆ ಬೆಲೆ ಇದೆ, ಆದರೆ ಭಾರತದ ಒಂದು ರೂಪಾಯಿಗೆ ಪಾಕಿಸ್ತಾನದಲ್ಲಿ 3 ರೂಪಾಯಿ ಮೌಲ್ಯ ಇದೆ. ಪಾಕಿಸ್ತಾನದ ಕರೆನ್ಸಿ ಭಾರತದ ಎದುರು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು ಇದು ಪಾಕಿಸ್ತಾನದ ಅಂತ್ಯದ ಹಾದಿ ಎಂದು ಕೂಡ ಹೇಳಲಾಗುತ್ತಿದೆ. ಇದರ ನಡುವೆ ಭಾರತ ಸರ್ಕಾರ ಸಿಂಧು ನದಿ ಒಪ್ಪಂದ ಕೂಡ ರದ್ದು ಮಾಡಿದೆ. ಪಾಕಿಸ್ತಾನದ ಜೀವನದಿ ಅನಿಸಿಕೊಂಡಿದ್ದ ಸಿಂಧು ನದಿ ಒಪ್ಪಂದವನ್ನು ಈಗ ರದ್ದು ಮಾಡಲಾಗಿದ್ದು ಪಾಕಿಸ್ತಾನದ ಬೆಳೆಗಳಿಗೆ ನೀರು ಕೂಡ ಸಿಗದಂತೆ ಆಗಿದೆ.
ಏರಿಕೆಯಾದ ಮೊಟ್ಟೆ, ಸಕ್ಕರೆ ಬೆಲೆ ಮತ್ತು ಹಾಲಿನ ಬೆಲೆ
ನಮ್ಮ ದೇಶದಲ್ಲಿ ಒಂದು ಮೊಟ್ಟೆಯ ಬೆಲೆ 6 ರಿಂದ 7 ರೂಪಾಯಿಗಳು ಆಗಿದೆ, ಆದರೆ ಪಾಕಿಸ್ತಾನದಲ್ಲಿ ಒಂದು ಮೊಟ್ಟೆಯ ಬರೋಬ್ಬರಿ 25 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ ಭಾರತದಲ್ಲಿ ಒಂದು ಕೆಜಿ ಸಕ್ಕರೆಯ ಬೆಲೆ 50 ರೂಪಾಯಿಯಾದರೆ ಪಾಕಿಸ್ತಾನದಲ್ಲಿ ಒಂದು ಕೆಜಿ ಸಕ್ಕರೆಯ ಬೆಲೆ 180 ರೂಪಾಯಿ ಆಗಿದೆ. ಭಾರತದಲ್ಲಿ ಒಂದು ಲೀಟರ್ ಹಾಕಿನ ಬೆಲೆ 56 ರೂಪಾಯಿಯಾದರೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿನ ಬೆಲೆ 150 ರೂಪಾಯಿಗೂ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಒಂದು ಕೆಜಿ ಸೇಬು ಹಕ್ಕಿನ ಬೆಲೆ 450 ರೂಪಾಯಿಗೆ ಬಂದು ತಲುಪಿದೆ. ಕಾಶ್ಮೀರದಲ್ಲಿ ಹೆಚ್ಚು ಹೆಚ್ಚು ಸೇಬು ಹಣ್ಣುಗಳನ್ನು ಬೆಳೆಯಾಗಲಾಗುತ್ತದೆ, ಆದರೆ ಪಾಕಿಸ್ತಾನದ ಈಗ ಕಾಶ್ಮೀರದ ಮೇಲೆ ದಾಳಿ ಮಾಡುವ ಮೂಲಕ ಎಲ್ಲವನ್ನು ಕಳೆದುಕೊಂಡಿದೆ.
ಆರ್ಥಿಕವಾಗಿ ದಿವಾಳಿಯಾದ ಪಾಕಿಸ್ತಾನ
ಪಾಕಿಸ್ತಾನದ ಸದ್ಯದ ದಿನಗಳಲ್ಲಿ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ವರದಿಯ ಪ್ರಕಾರ ಪಾಕಿಸ್ತಾನದ ಈಗಿನ ಸಾಲದ ಮೊತ್ತ 125$ ಶತಕೋಟ್ಟಿ ಎಂದು ಹೇಳಲಾಗುತ್ತಿದೆ. ಅದೇ ರೀತಿಯಲ್ಲಿ ಪಾಕಿಸ್ತಾನದಲ್ಲಿ ಸುಮಾರು 39 % ಜನರು ಬಡತನ ರೇಖೆಗಿಂತ ಕೆಳಗೆ ಇದ್ದಾರೆ ಎಂದು ಎಂದು ತಿಳಿದುಬಂದಿದೆ. ಪಾಕಿಸ್ತಾನದ ಹಣದುಬ್ಬರದ ದರ ಈಗ ಗರಿಷ್ಟ ಮಟ್ಟಕ್ಕೆ ತಲುಪಿದ್ದು ಇನ್ನೇನು ಕೆಲವೇ ವರ್ಷದಲ್ಲಿ ಪಾಕಿಸ್ತಾನದ ಸಂಪೂರ್ಣ ದಿವಲಿ ಆಗುವುದರಲ್ಲಿ ಎರಡು ಮಾತಿಲ್ಲ.