Vaibhav suryavanshi Real Age: ರಾಜಸ್ಥಾನ್ ರಾಯಲ್ಸ್ (Rajasthan Royals) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಬಹಳ ಫೇಮಸ್ ಆಗಿದ್ದು ಅಂದರೆ ಅದೂ ವೈಭವ್ ಸೂರ್ಯವಂಶಿ (Vaibhav Suryavanshi) ಎಂದು ಹೇಳಬಹುದು. ಹೌದು, ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿರುವ ಸುದ್ದಿ ಅಂದರೆ ಅದು ವೈಭವ್ ಸೂರ್ಯವಂಶಿ ಅವರ ಬಗ್ಗೆ ಎಂದು ಹೇಳಬಹುದು. ಸುಮಾರು 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಅವರು ಕೇವಲ 35 ಎಸೆತದಲ್ಲಿ 100 ಹೊಡೆಯುವುದರ ಮೂಲಕ IPL ಇತಿಹಾಸದಲ್ಲಿ ಅತೀ ಕಡಿಮೆ ಎಸೆತದಲ್ಲಿ 100 ಬಾರಿಸಿದ ಆಟಗಾರ ಅನ್ನುವ ಹೆಗ್ಗಳಿಕೆಯನ್ನು ವೈಭವ್ ಸೂರ್ಯವಂಶಿ ಅವರು ಪಡೆದುಕೊಂಡಿದ್ದಾರೆ.
IPL ನಲ್ಲಿ ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ
ಹೌದು, IPL ನಲ್ಲಿ ವೈಭವ್ ಸೂರ್ಯವಂಶಿ ಅವರು ತನ್ನದೇ ಆದ ಹೊಸ ದಾಖಲೆ ಬರೆದಿದ್ದರೆ ಎಂದು ಹೇಳಿದರೆ ತಪ್ಪಾಗಲ್ಲ. ಕೇವಲ 35 ಎಸೆತದಲ್ಲಿ 100 ಹೊಡೆಯುವುದರ ಮೂಲಕ ಇರ್ಫಾನ್ ಪಠಾಣ್ ಮತ್ತು ಕ್ರಿಶ್ ಗೆಲ್ ಅವರ ದಾಖಲೆ ಧೂಳಿಪಟ ಮಾಡಿದ್ದಾರೆ. ಇದರ ನಡುವೆ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ವೈಭವ್ ಸೂರ್ಯವಂಶಿ ಅವರಿಗೆ ಈಗ 14 ವರ್ಷ ವಯಸ್ಸು ಮತ್ತು 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಅವರು ಈಗಾಗಲೇ ಅಂಡರ್ 19 ಏಷ್ಯಾ ಕಪ್ (Under 19 Aisa Cup) ಪಂದ್ಯದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿಗೆ ನಿಜವಾಗ್ಲೂ 14 ವರ್ಷನಾ…?
ಹೌದು, ಕೆಲವು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಜಿ ಕ್ರಿಕೆಟ್ ಆಟಗಾರರು ವೈಭವ್ ಸೂರ್ಯವಂಶಿಗೆ ನಿಜವಾಗ್ಲೂ 14 ವರ್ಷ ವಯಸ್ಸಾ ಅನ್ನುವ ಅನುಮಾನವನ್ನು ಈಗ ಹೊರಹಾಕಿದ್ದಾರೆ. ಇನ್ನು ಕೆಲವರು ಈ ರೀತಿಯ ಅನುಮಾನವನ್ನು ಹೊರಹಾಕಲು ಕಾರಣ ಮಾಜಿ ಪಾಕ್ ಕ್ರಿಕೆಟ್ ಆಟಗಾರ ಜುನೈದ್ ಖಾನ್ ಅವರ ಹೇಳಿಕೆ ಆಗಿದೆ. ಕಳೆದ ಬಾರಿ ಅಂಡರ್ 19 ಎಷ್ಟ ಕಪ್ ಪಂದ್ಯದಲ್ಲಿ ಆಡಿದ್ದ ವೈಭವ್ ಸೂರ್ಯವಂಶಿ ತನ್ನ ಅಮೋಘ ಬ್ಯಾಟಿಂಗ್ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದರು. ಇನ್ನು ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಕಂಡ ಮಾಜಿ ಪಾಕ್ ಕ್ರಿಕೆಟ್ ಆಟಗಾರ ಜುನೈದ್ ಖಾನ್ ಅವರು ವೈಭವ್ ಸೂರ್ಯವಂಶಿ ವಯಸ್ಸಿನ ಮೇಲೆ ಅನುಮಾನ ಹೊರಹಾಕಿದ್ದರು.
ಜುನೈದ್ ಖಾನ್ ಪ್ರಶ್ನೆಗೆ ಉತ್ತರಿಸಿದ ವೈಭವ್ ಸೂರ್ಯವಂಶಿ ತಂದೆ
ಜುನೈದ್ ಖಾನ್ (Junaid Khan) ಅವರು ವೈಭವ್ ಸೂರ್ಯವಂಶಿ ಅವರ ಅವರ ವಯಸ್ಸಿನ ಮೇಲೆ ಪ್ರಶ್ನೆ ಹಾಕಿದ ಕಾರಣ ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ (Sanjiv Suryavanshi) ಅವರು ನನ್ನ ಮಗನಿಗೆ 8 ವರ್ಷ ವಯಸ್ಸಿದಾಗಲೇ BCCI ಮೂಳೆ ಪರೀಕ್ಷೆ ಮಾಡಿ ಆತನ ವಯಸ್ಸಿನ ಬಗ್ಗೆ ದಾಖಲೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ. ಯುವ ಕ್ರಿಕೆಟ್ ಆಟಗಾರ ನಿಖರವಾದ ವಯಸ್ಸು ನಿರ್ಧಾರ ಮಾಡುವ ಉದ್ದೇಶದಿಂದ BCCI ಈ ರೀತಿಯಲ್ಲಿ ಮೂಳೆ ಪರೀಕ್ಷೆ ಮಾಡುತ್ತದೆ ಮತ್ತು ಮೂಳೆ ಪರೀಕ್ಷೆಯ ಮೂಲಕ ಒಬ್ಬ ವ್ಯಕ್ತಿಯ ವಯಸ್ಸು ಎಷ್ಟು ಅನ್ನುವುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬಹುದು. ಏನೇ ವೈಭವ್ ಸೂರ್ಯವಂಶಿ ಅವರು ತನ್ನ 14 ನೇ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ನಿಜಕ್ಕೂ ಗ್ರೇಟ್ ಎಂದು ಹೇಳಬಹುದು.