Post Office fixed deposit Scheme Details: ಯಾವುದಾದರೂ ಒಂದು ಹಣಕಾಸು ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಅಂದರೆ ನಿಮಗೆ ಇರುವ ಉತ್ತಮ ಆಯ್ಕೆಯಲ್ಲಿ FD ಯೋಜನೆ (Fixed Deposit Scheme) ಒಂದು ಎಂದು ಹೇಳಬಹುದು. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ (Post Office) ನಲ್ಲಿ ನೀವು FD ಯೋಜನೆಯ ಖಾತೆ ತೆರೆಯಬಹುದು. ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗಲಿದೆ ಎಂದು ಹೇಳಬಹುದು. ಇದರ ನಡುವೆ ಈಗ ಸಾಕಷ್ಟು ಜನರಿಗೆ FD ಯೋಜನೆಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಲಾಭ ಗಳಿಸಬಹುದು ಅನ್ನುವುದರ ಸರಿಯಾದ ಮಾಹಿತಿ ಇಲ್ಲ. ಪೋಸ್ಟ್ ಆಫೀಸ್ ನ FD ಯೋಜನೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ 1.44 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು.
ಪೋಸ್ಟ್ ಆಫೀಸ್ ನಲ್ಲಿದೆ ಹಣಕ್ಕೆ ಸುರಕ್ಷತೆ
ಹೌದು, ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಉತ್ತಮ ಸುರಕ್ಷತೆ ಇದೆ ಎಂದು ಹೇಳಬಹುದು. ಪೋಸ್ಟ್ ಆಫೀಸ್ ನಲ್ಲಿ ನಾವು ಇಟ್ಟರೆ ಹಣಕ್ಕೆ ಉತ್ತಮ ಬಡ್ಡಿ ಸಿಗುವುದು ಮಾತ್ರವಲ್ಲದೆ ಹೆಚ್ಚಿನ ಸುರಕ್ಷತೆ ಕೂಡ ಸಿಗಲಿದೆ. ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ ಕಡಿಮೆ ಸಮಯದಲ್ಲಿ ಉತ್ತಮ ರಿಟರ್ನ್ ಪಡೆಯಬಹುದು. ಹಾಗಾದರೆ ಪೋಸ್ಟ್ ಆಫೀಸ್ ನಲ್ಲಿ ಎಷ್ಟು ಸಮಯದ ತನಕ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 1.44 ಲಕ್ಷ ರೂಪಾಯಿ ಪಡೆಯಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
FD ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿ
ಪೋಸ್ಟ್ ಆಫೀಸ್ ನ FD ಯೋಜನೆಯಲ್ಲಿ ನೀವು 5 ವರ್ಷದ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ ಒಂದು ಲಕ್ಷ ರೂಪಾಯಿಗೆ ಉತ್ತಮ ಆದಾಯ ಗಳಿಸಿಕೊಳ್ಳಬಹುದು. ಇನ್ನು ಪೋಸ್ಟ್ ಆಫೀಸ್ ನ FD ಯೋಜನೆಯಲ್ಲಿ 5 ವರ್ಷದ ಯೋಜನೆಯಲ್ಲಿ ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಪ್ರತಿಯಾಗಿ ನೀವು 1.44 ಲಕ್ಷ ರೂಪಾಯಿ ಪಡೆದುಕೊಳ್ಳುತ್ತೀರಿ. ಇನ್ನು ಪೋಸ್ಟ್ ಆಫೀಸ್ ನಲ್ಲಿ FD ಯೋಜನೆಯಲ್ಲಿ ಒಂದು ವರ್ಷದ ಕಾಲ ಹೂಡಿಕೆ ಯೋಜನೆ ಆಯ್ಕೆ ಮಾಡಿಕೊಂಡಿದ್ದರೆ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ 7.5% ಬಡ್ಡಿ ಪಡೆದುಕೊಳ್ಳಬಹುದು.
ಇನ್ನು FD ಯೋಜನೆಯಲ್ಲಿ ನಾವು ಎಷ್ಟು ವರ್ಷ ಹೆಚ್ಚು ಹೂಡಿಕೆ ಮಾಡುತ್ತೇವೋ ಅದರ ಆಧಾರದ ಮೇಲೆ ಬಡ್ಡಿ ಕೂಡ ನಿರ್ಧಾರ ಆಗುತ್ತದೆ. ಕಡಿಮೆ ವರ್ಷ ಹೂಡಿಕೆ ಮಾಡಿದರೆ ಕಡಿಮೆ ಬಡ್ಡಿ ಮತ್ತು ಹೆಚ್ಚು ವರ್ಷ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ಪಡೆದುಕೊಳ್ಳಬಹುದು. ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿ ಹೆಚ್ಚು ಪಡೆಯಬಹುದು ಮತ್ತು ನಮ್ಮ ಹಣಕ್ಕೆ ಉತ್ತಮ ಸುರಕ್ಷತೆ ಕೂಡ ಇರುತ್ತದೆ.
FD ಯೋಜನೆಯಲ್ಲಿ ಹೂಡಿಕೆ ಮಾಡಲು ಇರಬೇಕಾದ ಅರ್ಹತೆಗಳು
* ಕೇವಲ ಭಾರತೀಯ ನಿವಾಸಿಗಳು ಮಾತ್ರ FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* 18 ವರ್ಷ ಮೇಲ್ಪಟ್ಟ ಜನರು FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* ಗರಿಷ್ಟ 3 ಜನರು ಒಟ್ಟಾಗಿ ಜಂಟಿ ಖಾತೆ ತೆರೆಯಬಹುದು ಮತ್ತು FD ಯೋಜನೆಯ ಗರಿಷ್ಟ ಹೂಡಿಕೆಯ ಮೊತ್ತ 1000 ರೂ ಆಗಿದೆ.
* ಅನಿವಾಸಿ ಭಾರತೀಯರು FD ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹತೆ ಪಡೆದಿರುವುದಿಲ್ಲ.
FD ಯೋಜನೆಯಲ್ಲಿ ಖಾತೆ ತೆರೆಯಲು ಬೇಕಾದ ದಾಖಾಲೆಗಳು ಏನು
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಪಾಸ್ ಪೋರ್ಟ್ ಗಾತ್ರದ ಭಾವಚಿತ್ರಗಳು
* ನಿಮ್ಮ ವಿಳಾಸದ ಪುರಾವೆ
* ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಉಳಿತಾಯ ಖಾತೆ ಅಗತ್ಯ
* ಸರಿಯಾದ ಫಾರ್ಮ್ ಭರ್ತಿಮಾಡಿ ದಾಖಲೆ ಲಗತ್ತಿಸಬೇಕು