Home Loan EMI: ಗೃಹ ಸಾಲದ EMI ಕಡಿಮೆ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ 5 ಮಾರ್ಗಗಳು

Home Loan EMI: ಸಾಮಾನ್ಯವಾಗಿ ಮನೆ ಕಟ್ಟುವ ಬಯಕೆ ಎಲ್ಲರಿಗೂ ಇದ್ದೆ ಇರುತ್ತದೆ, ಆದರೆ ಮನೆ ಕಟ್ಟಲು ಹಣ ಇಲ್ಲದೆ ಜನರು ಬ್ಯಾಂಕ್ EMI (Bank EMI) ಮೊರೆ ಹೋಗುತ್ತಾರೆ ನಂತರ EMI ಕಟ್ಟಲಾಗದೆ ಕಷ್ಟಪಡುತ್ತಾರೆ. ಇದರ ನಡುವೆ ಸಾಕಷ್ಟು ಜನರು ಬ್ಯಾಂಕ್ ಸಾಲದ EMI ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕೂಡ ಹುಡುಕುತ್ತಿದ್ದಾರೆ. ನಿಮ್ಮ ಮಾಸಿಕ ಆದಾಯ ಕಡಿಮೆ ಆಗಿದ್ದು ಅಥವಾ ನಿಮಗೆ ಮನೆ ಸಾಲದ EMI ಕಟ್ಟಲು ಕಷ್ಟವಾಗುತ್ತಿದ್ದರೆ ನೀವು EMI ಕೆಲವು ಮಾರ್ಗಗಳ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಮನೆ ಸಾಲದ ಬ್ಯಾಂಕ್ EMI ಕಡಿಮೆ ಮಾಡಿಕೊಳ್ಳುವುದು ಹೇಗೆ ಮತ್ತು ಆ ಮಾರ್ಗಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಗೃಹ ಸಾಲದ EMI ಕಡಿಮೆ ಮಾಡಿಕೊಳ್ಳಲು ಇರುವ ಮಾರ್ಗಗಳು.

* ಬ್ಯಾಲೆನ್ಸ್ ವರ್ಗಾವಣೆ ಮಾಡಿಕೊಳ್ಳುವುದು
ಹೌದು, ಬ್ಯಾಲೆನ್ಸ್ ವರ್ಗಾವಣೆ ಮಾಡಿಕೊಳ್ಳುವುದರ ಮೂಲಕ ನೀವು ಮನೆ ಸಾಲದ EMI ಕಡಿಮೆ ಮಾಡಿಕೊಳ್ಳಬಹುದು. ನೀವು ಸಾಲದ ಮಾಡಿದ ಬ್ಯಾಂಕಿಂಗ್ EMI ಮತ್ತು ಬಡ್ಡಿ ಅಧಿಕವಾಗಿದ್ದರೆ ನೀವು ನಿಮ್ಮ ಗೃಹ ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳಬಹುದು. ಹಲವು ಬ್ಯಾಂಕುಗಳು ನಿಮಗೆ ಗೃಹ ಸಲ ವರ್ಗಾವಣೆ ಆಫರ್ ನೀಡುತ್ತದೆ ಮತ್ತು ನೀವು ಯಾವ ಬ್ಯಾಂಕಿನಲ್ಲಿ ಕಡಿಮೆ EMI ಇದೆಯೋ ಆ ಬ್ಯಾಂಕಿಗೆ ನಿಮ್ಮ ಗೃಹ ಸಾಲವನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಗೃಹ ಸಾಲ ವರ್ಗಾವಣೆ ಮಾಡಿಕೊಳ್ಳುವ ಸಮಯದಲ್ಲಿ ನೀವು ಕೆಲವು ಶುಲ್ಕ ಪಾವತಿ ಮಾಡಬೇಕು.

* ಸಲಾದ ಭಾಗಶಃ ಪಾವತಿ ಮಾಡುವುದು
ನೀವು ನಿಮ್ಮ ಗೃಹ ಸಲಾದ ಭಾಗಶಃ ಪಾವತಿ ಮಾಡಿಕೊಳ್ಳುವುದರ ಮೂಲಕ ಮನೆ ಸಾಲದ EMI ಕಡಿಮೆ ಮಾಡಿಕೊಳ್ಳಬಹುದು. ಹೌದು, ನಿಮ್ಮ ಬಳಿ ತೆರಿಗೆ ಉಳಿತಾಯದ ಹಣ ಅಥವಾ ಅಥವಾ ಇತರೆ ಯಾವುದೇ ಉಳಿತಾಯದ ಹಣ ಇದ್ದರೆ ನೀವು ಅದನ್ನು ಗೃಹ ಸಾಲವಕ್ಕೆ ಪಾವತಿ ಮಾಡಿಕೊಳ್ಳುವುದರ ಮೂಲಕ EMI ಕಡಿಮೆ ಮಾಡಿಕೊಳ್ಳಬಹುದು. ನೀವು ಭಾಗಶಃ ಪಾವತಿ ಮಾಡಿದರೆ ನಿಮ್ಮ ಸಾಲದ ಮೊತ್ತ ಕಡಿಮೆ ಆಗುತ್ತದೆ ಮತ್ತು ಸಾಲ ಮೊತ್ತ ಕಡಿಮೆಯಾದರೆ EMI ಕೂಡ ಕಡಿಮೆ ಆಗುತ್ತದೆ.

* ಸಾಲದ ಅವಧಿಯಲ್ಲಿ ವಿಸ್ತರಣೆ ಮಾಡಿ
ಸಾಲದ ಅವಧಿ ವಿಸ್ತರಣೆ ಮಾಡಿಕೊಳ್ಳುವುದರ ಮೂಲಕ ನಿಮ್ಮ ಗೃಹ ಸಾಲದ EMI ಕಡಿಮೆ ಮಾಡಿಕೊಳ್ಳಬಹುದು. ನಿಮಗೆ ಗೃಹ ಸಾಲದ EMI ಪಾವತಿ ಮಾಡಲು ಕಷ್ಟವಾಗುತ್ತಿದ್ದರೆ ನೀವು ಸಾಲದ ಅವಧಿಯಲ್ಲಿ ನಿಮ್ಮ ಮಾಸಿಕ ಆದಾಯದ ಮೇಲೆ ವಿಸ್ತರಣೆ ಮಾಡಿಕೊಳ್ಳಬಹುದು. ನೀವು ಗೃಹ ಸಾಲದ ಅವಧಿ ವಿಸ್ತರಣೆ ಮಾಡಿಕೊಂಡರೆ ನೀವು ಒಟ್ಟು ಸಾಲದ ಮೇಲೆ ಮುಕ್ತಾಯದ ಅವಧಿಯ ತನಕ ಹೆಚ್ಚು ಬಡ್ಡಿ ಪಾವತಿ ಮಾಡಬೇಕಾಗುತ್ತದೆ.

* EMI ಹೆಚ್ಚಿಸಿಕೊಂಡು ಸಾಲದ ಮೊತ್ತ ಕಡಿಮೆ ಮಾಡಿ
EMI ಹೆಚ್ಚಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ಸಾಲದ ಮೊತ್ತ ಕಡಿಮೆ ಮಾಡಿಕೊಂಡು EMI ಕಡಿಮೆ ಮಾಡಬಹುದು. ನಿಮ್ಮ ಬಳಿ ಯಾವುದಾದರೂ ಠೇವಣಿ ಮಾಡಿದ ಹಣ ಅಥವಾ ತೆರಿಗೆ ಉಳಿತಾಯದ ಹಣ ಇದ್ದರೆ ನೀವು ಅದನ್ನು ಗೃಹ ಸಾಲಕ್ಕೆ ಒಂದೇ ಬಾರಿಗೆ ತುಂಬಿ EMI ಕಡಿಮೆ ಮಾಡಿಕೊಳ್ಳಬಹುದು. ಅಥವಾ ನಿಮಗೆ ಹೆಚ್ಚು ಸಮಯ EMI ಪಾವತಿ ಮಾಡುವುದು ಕಷ್ಟವಾದರೆ ನೀವು ಹೆಚ್ಚು ಹೆಚ್ಚು EMI ಪಾವತಿ ಮಾಡುವುದರ ಮೂಲಕ EMI ಕಡಿಮೆ ಮಾಡಿಕೊಳ್ಳಬಹುದು.

* ಫ್ಲೋಟಿಂಗ್ ದರ ಆಯ್ಕೆಮಾಡಿ EMI ಕಡಿಮೆ ಮಾಡಿ
ಹೌದು ಫ್ಲೋಟಿಂಗ್ ದರ ಆಯ್ಕೆ ಮಾಡಿಕೊಳ್ಳುವುದರ ಮೂಲಕ EMI ಕಡಿಮೆ ಮಾಡಿಕೊಳ್ಳಬಹುದು. ನೀವು ಮನೆ ಕಟ್ಟಲು ಒಂದು ಸ್ಥಿರವಾದ ಸಾಲ ಪಡೆದುಕೊಂಡಿದ್ದರೆ ನೀವು ಆ ಸಾಲವನ್ನು ಫ್ಲೋಟಿಂಗ್ ದರಕ್ಕೆ ಬದಲಾಯಿಸಿಕೊಳ್ಳಬಹುದು. ಫ್ಲೋಟಿಂಗ್ ದರ ಅನ್ನುವುದು ಮಾರುಕಟ್ಟೆಯ ಸ್ಥಿತಿಗತಿಗಳ ಆಯ್ಕೆ ಮೇಲೆ ಇರುತ್ತದೆ ಮತ್ತು ಮಾರುಕಟ್ಟೆ ಉತ್ತಮವಾಗಿದ್ದ ಸಮಯದಲ್ಲಿ ಬಡ್ಡಿದರ ಕಡಿಮೆ ಆಗುತ್ತದೆ ಮತ್ತು ಮಾರುಕಟ್ಟೆ ಕುಸಿತವಾದ ಸಮಯದಲ್ಲಿ ಬಡ್ಡಿದರ ಏರಿಕೆ ಆಗುತ್ತದೆ. ಫ್ಲೋಟಿಂಗ್ ದರ ಆಯ್ಕೆ ಮಾಡುವುದು ಅಪಾಯ ಕೂಡ ಆಗಿದೆ ಎಚ್ಚರ.

Leave a Comment