LIC Scheme: 50 ರೂ ಹೂಡಿಕೆ ಮಾಡಿದರೆ ಸಾಕು ಸಿಗಲಿದೆ 1 ಲಕ್ಷ ರೂ ಲಾಭ, LIC ಯೋಜನೆಗೆ ಹೆಸರು ನೋಂದಾಯಿಸಿ

Best LIC Scheme For Small Investers: LIC ಹಲವು ವರ್ಷಗಳಿಂದ ಜನರಿಗೆ ಬಹಳ ಉತ್ತಮವಾದ ಸೇವೆ ಒದಗಿಸಿಕೊಂಡು ಬಂದಿದೆ ಎಂದು ಹೇಳಬಹುದು. ಜನರಿಗಾಗಿ ಹಲವು ಯೋಜನೆಯನ್ನು ಪರಿಚಯ ಮಾಡಿರುವ LIC ಈಗ ಇನ್ನೊಂದು ಹೊಸ ಯೋಜನೆ ಜಾರಿಗೆ ತಂದಿದೆ. ಕಡಿಮೆ ಹಣ ಹೂಡಿಕೆ ಮಾಡುವ LIC ಯ ಈ ಯೋಜನೆಯಲ್ಲಿ ನೀವು ಲಕ್ಷಾಧಿಪತಿ ಆಗಬಹುದು. ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಬಯಸುವವರಿಗೆ ಈ ಯೋಜನೆ ಉತ್ತಮವಾದ ಯೋಜನೆ ಎಂದು ಹೇಳಬಬಹುದು. ಕೇವಲ 50 ರೂಪಾಯಿ ಹೂಡಿಕೆ ಮಾಡುವ ಮೂಲಕ ಈ ಯೋಜನೆಯಲ್ಲಿ ನೀವು ಲಕ್ಷ ರೂಪಾಯಿ ತನಕ ಲಾಭ ಗಳಿಸಿಕೊಳ್ಳಬಹುದು. ಹಾಗಾದರೆ LIC ಯ ಈ ಯೋಜನೆ ಯಾವುದು ಮತ್ತು ಈ ಯೋಜನೆಗೆ ಯಾರು ಯಾರು ಅರ್ಜಿ ಸಲ್ಲಿಸಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

50 ರೂಪಾಯಿಯಿಂದ ಆರಂಭಿಸಿ LIC ಯೋಜನೆ
LIC ಯ ಈ ಯೋಜನೆಯನ್ನು ಎಂಡೋಮೆಂಟ್ ಅಥವಾ ಮನಿ ಬ್ಯಾಕ್ ಪಾಲಿಸಿ (LIC Money Back Policy)ಎಂದು ಹೇಳಬಹುದು. ಇದೊಂದು ಲಾಂಗ್ ಟರ್ಮ್ ಯೋಜನೆ ಆಗಿದ್ದು ಈ ಯೋಜನೆಯಲ್ಲಿ ನೀವು ದೀರ್ಘಕಾಲ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮೊತ್ತ ಲಾಭ ಪಡೆಯಬಹುದಾಗಿದೆ. ನೀವು ನಿಗದಿತ ಅವಧಿಯಲ್ಲಿ ಅಥವಾ ಮಾಸಿಕವಾಗಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಈ ಯೋಜನೆಯಲ್ಲಿ ಒಂದು ಲಕ್ಷ ರೂಪಾಯಿಯ ತನಕ ಲಾಭ ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ನಿರ್ಧಿಷ್ಟ ಆದಾಯ ಬರುತ್ತದೆ ಮತ್ತು ನಿಮ್ಮ ಹಣ ಸುರಕ್ಷಿತ ಕೂಡ ಆಗಿರುತ್ತದೆ.

ಪ್ರತಿನಿತ್ಯ ನೀವು ಹೂಡಿಕೆ ಮಾಡಬೇಕು 50 ರೂ
LIC ಯ ಈ ಯೋಜನೆಯಲ್ಲಿ ನೀವು ಪ್ರತಿನಿತ್ಯ 50 ರೂ ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿನಿತ್ಯ 50 ರೂಪಾಯಿಯಂತೆ ಅಥವಾ ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಬೇಕು. 5 ವರ್ಷದಿಂದ 55 ವರ್ಷದ ಒಳಗಿನ ಎಲ್ಲಾ ಜನರು ಈ ಯೋಜನೆಯ ಅಡಿಯಲ್ಲಿ ಲಾಭ ಪಡೆದುಕೊಳ್ಳಬಹುದು. ಇನ್ನು ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ಈ LIC ಯೋಜನೆಯಲ್ಲಿ ನೀವು ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು. ಹಾಗಾದರೆ LIC ಯ ಯಾವ ಯಾವ ಯೋಜನೆಯಲ್ಲಿ ನೀವು 50 ರೂ ಹೂಡಿಕೆ ಮಾಡುವುದರ ಮೂಲಕ ಲಕ್ಷಾಧಿಪತಿ ಆಗಬಹುದು ನೋಡಿ.

* LIC ಜೀವನ್ ಲಾಭ್ ಯೋಜನೆ (LIC Jeevan Labh)
* LIC ಹೊಸ ದತ್ತಿ ಯೋಜನೆ (LIC Hosa Datti Scheme)
* LIC ಜೀವನ್ ಆನಂದ್ ಯೋಜನೆ (LIC Jeevan Anand scheme)
* LIC ಭೀಮ ಜ್ಯೋತಿ ಯೋಜನೆ (LIC Bima Jyothi Scheme)

ಈ ನಾಲ್ಕು LIC ಯೋಜನೆ ಅಡಿಯಲ್ಲಿ ನೀವು ದಿನಕ್ಕೆ ಕೇವಲ 50 ರೂ ಹೂಡಿಕೆ ಮಾಡುವುದರ ಮೂಲಕ ಯೋಜನೆಯ ಮುಕ್ತದ ಅವಧಿಯಲ್ಲಿ ಒಂದು ಲಕ್ಷ ರೂಪಾಯಿಯ ತನಕ ಲಾಭ ಪಡೆಯಬಹುದಾಗಿದೆ. ಇನ್ನು ಈ ನಾಲ್ಕು ಯೋಜನೆಯ ಅಡಿಯಲ್ಲಿ ನೀವು ದೀರ್ಘಕಾಲ ಹೂಡಿಕೆ ಮಾಡಬೇಕು, ಅಂದರೆ ಅಂದಾಜು 20 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ಈ ಯೋಜನೆಯ ಹೂಡಿಕೆಯ ಮೊತ್ತ 1000 ರೂ ಮತ್ತು ಗರಿಷ್ಟ ಹೂಡಿಕೆಗೆ ಮಿತಿ ಇಲ್ಲ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ನೀವು ವಾರ್ಷಿಕವಾಗಿ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು ಎಷ್ಟು ಹೂಡಿಕೆ ಮಾಡುತ್ತಿರೋ ಅಷ್ಟು ದೊಡ್ಡ ಮೊತ್ತದ ಆದಾಯ ನೀವು ಗಳಿಸಿಕೊಳ್ಳಬಹುದು.

Leave a Comment