Ration Card: ಹೊಸ BPL ಮತ್ತು APL ಕಾರ್ಡಿಗೆ ಅರ್ಜಿ ಆರಂಭ, ಈ ದಾಖಲೆ ಕೊಟ್ಟು ಅರ್ಜಿ ಸಲ್ಲಿಸಿ

New Ration Card Application 2025: ಹೊಸ BPL ಕಾರ್ಡಿಗಾಗಿ ಕಾಯುತ್ತಿರುವವರಿಗೆ ಈಗ ಮತ್ತೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಾಕಷ್ಟು ಸಮಯಗಳಿಂದ ರಾಜ್ಯದಲ್ಲಿ ಜನರು ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಕಾಯುತ್ತಿದ್ದು ಈಗ ಹೊಸ ರೇಷನ್ ಮಾಡಿಸಿಕೊಳ್ಳುವ ಜನರಿಗೆ ಜನರಿಗೆ ಮತ್ತೆ ಅವಕಾಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೆಲವು ಅಗತ್ಯ ದಾಖಲೆ ಸಲ್ಲಿಸುವುದರ ಮೂಲಕ BPL ರೇಷನ್ ಕಾರ್ಡ್ ಮತ್ತು APL ರೇಷನ್ ಕಾರ್ಡುಗಳಿಗೆ ಜನರು ಅರ್ಜಿ ಸಲ್ಲಿಸಬಹುದು. BPL ಅಥವಾ APL ಕಾರ್ಡ್ ಇಲ್ಲದೆ ಇರುವವರು ಆಹಾರ ಮತ್ತು ನಾಗರೀಕ ಇಲಾಖೆಯ ವೆಬ್ಸೈಟ್ ಭೇಟಿನೀಡಿ ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾದ ಸದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ
ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಈಗ ಮತ್ತೆ ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಆಹಾರ ನಾಗರೀಕ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ahara.kar.nic.in ಭೇಟಿನೀಡಿ ಜನರು ರೇಷನ್ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಬಹುದು. ಮೊಬೈಲ್ ಮೂಲಕ, ಕಂಪ್ಯೂಟರ್ ಕ್ಲಾಸ್ ನಲ್ಲಿ ಅಥವಾ ಸೇವಾ ಸಿಂಧು ಕಚೇರಿಗಳಿಗೆ ಭೇಟಿನೀಡಿ ಜನರು ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಮಧ್ಯಾಹ್ನ 1 ರಿಂದ 3 ಘಂಟೆಯ ತನಕ ಮಾತ್ರ ವೆಬ್ಸೈಟ್ ತೆರೆದಿರಲಿದ್ದು ಆ ಸಮಯದಲ್ಲಿ ಮಾತ್ರ ಜನರು ಅರ್ಜಿ ಸಲ್ಲಿಸಬಹುದು.

ರೇಷನ್ ಕಾರ್ಡಿಗೆ ಬೇಕಾದ ದಾಖಲೆಗಳು ಮತ್ತು ಅರ್ಹತಾ ಮಾನದಂಡಗಳು

* ಈಗಾಗಲೇ APL ಅಥವಾ BPL ಕಾರ್ಡ್ ಇದ್ದವರಿಗೆ ಅರ್ಜಿ ಸಲ್ಲಿಸುವಂತಿಲ್ಲ

* ಹೊಸದಾಗಿ ಮದುವೆಯಾದ ನವ ದಂಪತಿಗಳು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.

* ಸರ್ಕಾರ ಕುಟುಂಬದ ಆದಾಯ ಮೇಲೆ BPL ಅಥವಾ APL ಕಾರ್ಡ್ ಕೊಡಬೇಕೋ ಅನ್ನುವುದನ್ನು ನಿರ್ಧಾರ ಮಾಡುತ್ತಾದೆ.

* ದಾಖಲೆಗಳು ತಪ್ಪಾಗಿದ್ದರೆ ಅವರ ಅರ್ಜಿ ತಿರಸ್ಕಾರ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

* ಅಭ್ಯರ್ಥಿಯ ಆಧಾರ್ ಕಾರ್ಡ್

* ಅಭ್ಯರ್ಥಿಯ ವೋಟರ್ ಕಾರ್ಡ್

* ಅಭ್ಯರ್ಥಿಯ ವಿಳಾಸ ಪುರಾವೆ

* ವಯಸ್ಸಿನ ಪ್ರಮಾಣಪತ್ರ

* ಡ್ರೈವಿಂಗ್ ಲೈಸನ್ಸ್ ಇದ್ದರೆ ಕೊಡಬೇಕು

* ಅಭ್ಯರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ

* ಮೊಬೈಲ್ ಸಂಖ್ಯೆ

* ಸ್ವಯಂ ಘೋಷಿತ ಪ್ರಮಾಣಪತ್ರ

Leave a Comment