Sunil Gavaskar About Vaibhav Suryavanshi: ನಿನ್ನೆ ರಾಜಸ್ಥಾನ್ ರಾಯಲ್ಸ್ (Rajasthan Royals) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ನಡುವೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 100 ರನ್ನುಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 218 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ದೊಡ್ಡ ಮೊತ್ತ ಗುರಿ ನೀಡಿತ್ತು. ಇನ್ನು ಮುಂಬೈ ಇಂಡಿಯನ್ಸ್ ನೀಡಿದ್ದ ಈ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಘಾತ ಅನುಭವಿಸುವುದರ ಮೂಲಕ ಆರಂಭದಲ್ಲೆ ಸೋಲಿನ ಹಾದಿ ತಲುಪಿತು ಎಂದು ಹೇಳಬಹುದು. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಎಲ್ಲರೂ ಕಾಯುತ್ತಿದ್ದದ್ದು ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಆಟಕ್ಕೆ ಎಂದು ಹೇಳಬಹುದು, ಆದರೆ ನಿನ್ನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಜೀರೋ ರನ್ ಹೊಡೆಯುವುದರ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣವಾದರು.
ಜೀರೋ ರನ್ ಹೊಡೆದ ವೈಭವ್ ಸೂರ್ಯವಂಶಿ
ಹೌದು, ನಿನ್ನೆ ಮುಂಬೈ ಇಂಡಿಯನ್ಸ್ ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರು ಜೀರೋ ರನ್ ಹೊಡೆಯುವುದರ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣವಾದರು. ಹಿಂದಿನ ಪಂದ್ಯದಲ್ಲಿ ಕೇವಲ 35 ಎಸೆತಕ್ಕೆ 100 ರನ್ ಕಲೆಹಾಕುವುದರ ಮೂಲಕ ದಾಖಲೆ ನಿರ್ಮಾಣ ಮಾಡಿದ್ದ ವೈಭವ್ ಸೂರ್ಯವಂಶಿ ಅವರು ಮುಂಬೈ ಇಂಡೈನ್ಡ್ ನಡುವಿನ ಪಂದ್ಯದಲ್ಲಿ ಜೀರೋ ರನ್ ಹೊಡೆಯುವುದರ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣವಾದರು. ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ವೈಭವ್ ಸೂರ್ಯವಂಶಿ ಅವರು ಕ್ಯಾಚ್ ಕೊಟ್ಟು ವಾಪಾಸ್ ಮರಳಿದರು.
ನಿಜವಾಯಿತು ಸುನಿಲ್ ಗವಾಸ್ಕರ್ ಹೇಳಿದ ಮಾತು
ಕಳೆದ ಪಂದ್ಯದ ಹಾಗೆ ಈ ಪಂದ್ಯದಲ್ಲಿ ಕೂಡ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಜನರು ಭಾವಿಸಿದ್ದರು, ಆದರೆ ವೈಭವ್ ಸೂರ್ಯವಂಶಿ ಅವರು ಜೀರೋ ರನ್ ಹೊಡೆಯುವುದರ ಮೂಲಕ ಎಲ್ಲರಿಗೂ ನಿರಾಸೆ ಮೂಡಿಸಿದರು. GT ವಿರುದ್ಧ ನಡೆದ ಪಂದ್ಯದಲ್ಲಿ ಸಾಕಷ್ಟು ದಿಗ್ಗಜರು ವೈಭವ್ ಸೂರ್ಯವಂಶಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ್ದರು, ಆದರೆ ಸುನಿಲ್ ಗವಾಸ್ಕರ್ ಮಾತ್ರ ಅಷ್ಟೇನು ಮೆಚ್ಚುಗೆ ವ್ಯಕ್ತಪಡಿಸಿರಲಿಲ್ಲ.
“ಅಂದು ವೈಭವ್ ಸೂರ್ಯವಂಶಿ ಅವರು ಹರಾಜಿಗೆ ಬರುವ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದರು. 13 ವರ್ಷದ ಯುವಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಇನ್ನು ರಾಹುಲ್ ದ್ರಾವಿಡ್ (Rahul Dravid) ಅವರು ಕೂಡ ಆತನ ಜೊತೆಯಲ್ಲಿ ಇರುವ ಕಾರಣ ಆತನ ಪ್ರತಿಭೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸಾಕಷ್ಟು ಜನರು ಹೇಳಿದ್ದರು. ಆತನನ್ನು ಇಷ್ಟೊಂದು ಹೊಗಳಿ ಆಕಾಶಕ್ಕೆ ಏರಿಸುವ ಅಗತ್ಯ ಇಲ್ಲ ಮತ್ತು ಕಲಿಕೆಗೆ ಆಧ್ಯತೆ ನೀಡಿ” ಎಂದು ಸುನಿಲ್ ಗವಾಸ್ಕರ್ (Sunil Gavaskar) ಅವರು ಕಿವಿಮಾತು ಹೇಳಿದ್ದರು.
ಒಂದು ಪಂದ್ಯದಲ್ಲಿ ಶತಕ ಭಾರಿಸಿದ್ದಾನೆ ಅಂತ ಆಕಾಶಕ್ಕೆ ಏರಿಸಬಾರದು ಮತ್ತು ಆತ ಇನ್ನಷ್ಟು ಅಭ್ಯಾಸ ಮಾಡಬೇಕು ಎಂದು ಸುನಿಲ್ ಗವಾಸ್ಕರ್ ಅವರು ಹೇಳಿದ್ದರು. ಸದ್ಯ ಸುನಿಲ್ ಗವಾಸ್ಕರ್ ಅವರು ಹೇಳಿದ ಈ ಮಾತು ಈಗ ವೈಭವ್ ಸೂರ್ಯವಂಶಿ ಅವರು ಜೀರೋ ರನ್ ಗಳಿಸಿದ ನಂತರ ಸಾಕಷ್ಟು ವೈರಲ್ ಆಗುತ್ತಿದೆ. ಸದ್ಯ ವೈಭವ್ ಸೂರ್ಯವಂಶಿ ಅವರು ಇನ್ನಷ್ಟು ಅಭ್ಯಾಸ ಮಾಡಿ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಅನ್ನುವುದು ಸಾಕಷ್ಟು ಜನರ ಆಶಯವಾಗಿದೆ.