UPI Limits: UPI ಮೂಲಕ ದಿನಕ್ಕೆ ಇಷ್ಟು ಹಣ ಮಾತ್ರ ವರ್ಗಾವಣೆ ಮಾಡಬಹುದು..! UPI ಬಳಸುವವರಿಗೆ ಹೊಸ ರೂಲ್ಸ್

UPI Payments Limits Per Day: ದೇಶದಲ್ಲಿ ಡಿಜಿಟಲ್ ವಹಿವಾಟು ಬಹಳ ಮುಂದುವರೆದಿದೆ ಎಂದು ಹೇಳಬಹುದು. ಹೌದು, ದೇಶದಲ್ಲಿ ಜನರು ನಗದು ಹಣದ ವಹಿವಾಟು ಬಿಟ್ಟು ಡಿಜಿಟಲ್ ಕರೆನ್ಸಿ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ ಫೋನ್ ಪೆ, ಗೂಗಲ್ ಪೆ ಸೇರಿದಂತೆ ಹಲವು UPI ಅಪ್ಲಿಕೇಶನ್ ಗಳು ಜಾರಿಯಲ್ಲಿ ಇದೆ. NPCI UPI ಬಳಕೆದಾರರಿಗೆ ಈಗಾಗಲೇ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೌದು, UPI ಮೂಲಕ ದಿನಕ್ಕೆ ಇಂತಿಷ್ಟು ಹಣವನ್ನು ಮಾತ್ರ ವರ್ಗಾವಣೆ ಮಾಡಬಹುದು ಮತ್ತು ಮಿತಿಗಿಂತ ಹೆಚ್ಚು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಜನರು UPI ಮೂಲಕ ದಿನಕ್ಕೆ ಎಷ್ಟು ಹಣ ವರ್ಗಾವಣೆ ಮಾಡಬಹುದು ಅನ್ನುವುದರ ಬಗ್ಗೆ ಅರಿವಿಲ್ಲದೆ ಗೊಂದಲಕ್ಕೆ ಕೂಡ ಒಳಗಾಗುತ್ತಿದ್ದಾರೆ. ಹಾಗಾದರೆ UPI ಮೂಲಕ ದಿನಕ್ಕೆ ಎಷ್ಟು ಹಣ ವರ್ಗಾವಣೆ ಮಾಡಬಹುದು ಮತ್ತು UPI ಹಣ ವರ್ಗಾವಣೆಗೆ ಸಂಬಂಧಿಸಿದಂತೆ NPCI ಜಾರಿಗೆ ತಂದಿರುವ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

UPI ಮೂಲಕ ದಿನಕ್ಕೆ ಇಷ್ಟು ಹಣ ಮಾತ್ರ ವರ್ಗಾವಣೆ ಮಾಡಬಹುದು
ದೇಶದಲ್ಲಿ ಜನರು 10 ಮತ್ತು 20 ರೂಪಾಯಿಯಿಂದ ದೊಡ್ಡ ಮೊತ್ತದ ವಹಿವಾಟುಗಳನ್ನು UPI ಮೂಲಕ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಆನ್ಲೈನ್ ಶಾಪಿಂಗ್ ಕೂಡ UPI ಮೂಲಕ ಮಾಡುತ್ತಿವುದನ್ನು ನಾವು ಕಾಣಬಹುದು. ಅಕ್ರಮ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗಳಿಗೆ ಹೆಚ್ಚು ಆಧ್ಯತೆ ಕೊಡುತ್ತಿರುವುದನ್ನು ನಾವು ಕಾಣಬಹುದು. ಅದೇ ರೀತಿಯಲ್ಲಿ UPI ಬಳಸುವವರಿಗೆ ಕೇಂದ್ರದ ಕೆಲವು ನಿಯಮ ಪಾಲನೆ ಮಾಡುವುದು ಕೂಡ ಕಡ್ಡಾಯವಾಗಿದೆ.

ಡಿಜಿಟಲ್ ಪಾವತಿಗಳನ್ನು (Digital Payments) ದುರುಪಯೋಗ ಪಡಿಸಿಕೊಳ್ಳುವುದು ಮತ್ತು ಕೆಲವು ತೆರಿಗೆ ನಿಯಮದ ಅಡಿಯಲ್ಲಿ UPI ಬಳಕೆಗೆ ಕೂಡ ಮಿತಿ ನಿಗದಿ ಮಾಡಲಾಗಿದೆ. ಆದಾಯ ತೆರಿಗೆ ಕಾಯ್ದೆ 269 ನೇ ವಿಧಿಯಲ್ಲಿ UPI ನಲ್ಲಿ ಮಿತಿಗಿಂತ ಅಡಿಮೆ ಹಣ ವರ್ಗಾವಣೆಯನ್ನು ನಿಶೇಷ ಮಾಡಲಾಗಿದೆ. ಇನ್ನು UPI ನಿಯಮದ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಅಥವಾ ಬೇರೆಬೇರೆ ಕಂತುಗಳಲ್ಲಿ 2 ಲಕ್ಷ ರೂಪಾಯಿಗಿಂತ ಅಧಿಕ ಹಣವನ್ನು UPI ಮೂಲಕ ಸ್ವೀಕಾರ ಮಾಡುವಂತೆ ಇಲ್ಲ. ಇನ್ನು ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ ಸಮಸ್ಯೆ ಅನುಭವಿಸಬೇಕಾಗುತ್ತದೆ.

ಇನ್ನು 2 ಲಕ್ಷ ರೂಪಾಯಿಗಿಂತ ಅಧಿಕ ಹಣ ವರ್ಗಾವಣೆ ಅಥಾವ UPI ಮೂಲಕ 2 ಲಕ್ಷ ರೂಪಾಯಿಗಿಂತ ಅಧಿಕ ಹಣವನ್ನು ಒಂದೇ ಬಾರಿಗೆ ಅಥವಾ ಬೇರೆಬೇರೆ ಕಂತುಗಳಲ್ಲಿ ಸ್ವೀಕಾರ ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ ನೀವು ನೋಟೀಸ್ (Income Tax Notice) ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ನೀವು ಡಿಜಿಟಲ್ ಪಾವತಿ ಮೂಲಕ ಮಾಡಿದ ಎಲ್ಲಾ ವಹಿವಾಟಿಗಳಿಗೆ ದಾಖಲೆ ಇರಲಿದ್ದು ನೀವು ತೆರಿಗೆ ಇಲಾಖೆಗೆ ವಂಚನೆ ಮಾಡಲು ಕೂಡ ಸಾಧ್ಯವಿಲ್ಲ. NPCI ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2 ಲಕ್ಷ ರೂಪಾಯಿಯನ್ನು ಮಾತ್ರ ವರ್ಗಾವಣೆ ಮಾಡಬಹುದು. ಕೇಂದ್ರದ ಆದೇಶದ ಪ್ರಕಾರ, ಮುಂದಿನ ದಿನಗಳಲ್ಲಿ ಇದರ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Leave a Comment