Saving Accounts Deposit Limits: ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಬ್ಯಾಂಕುಗಳಲ್ಲಿ ಖಾತೆ ಹೊಂದಿರುತ್ತಾರೆ. ಈನಡುವೆ ಬ್ಯಾಂಕುಗಳ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ,. ಬ್ಯಾಂಕಿನಲ್ಲಿ ಎಷ್ಟು ಹಣ ಇಡಬೇಕು, ವಹಿವಾಟು ಯಾವ ರೀತಿಯಲ್ಲಿ ಮಾಡಬೇಕು ಅನ್ನುವುದಕ್ಕೂ ಸಂಬಂಧಪಟ್ಟಂತೆ ಕೆಲವು ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಇದರ ನಡುವೆ ಈಗ ಭಾರತೀತ ರಿಸರ್ವ್ ಬ್ಯಾಂಕ್ ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ ಹಣ ಇಡುವುದಕ್ಕೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿಗೆ ತಂದಿದೆ ಮತ್ತು ಹೊಸ ನಿಯಮದ ಅಡಿಯಲ್ಲಿ 5 ಲಕ್ಷಕ್ಕಿಂತ ಅಧಿಕ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟವರಿಗೆ RBI ಬೇಸರದ ಸುದ್ದಿ ನೀಡಿದೆ ಎಂದು ಹೇಳಬಹುದು. ಹಾಗಾದರೆ 5 ಲಕ್ಷಕ್ಕಿಂತ ಅಧಿಕ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟವರಿಗೆ RBI ನೀಡಿರುವ ಬೇಸರದ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕ್ ಖಾತೆಯಲ್ಲಿ ಹ ಇಡುವುದಕ್ಕೆ ಮಿತಿ
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಖಾತೆಯಲ್ಲಿ ಹಣ ಇಡುವುದಕ್ಕೆ ಸಂಬಂಧಿಸಿದಂತೆ ಮಿತಿಯನ್ನು ಕೂಡ ನಿಗದಿ ಮಾಡಿದೆ. ಬ್ಯಾಂಕ್ ದಿವಾಳಿತನ ಮತ್ತು ಬ್ಯಾಂಕುಗಳಲ್ಲಿ ಎಷ್ಟು ಹಣವನ್ನು ಇಟ್ಟರೆ ಮಾತ್ರ ಬ್ಯಾಂಕ್ ಅದಕ್ಕೆ ಸುರಕ್ಷತೆ ನೀಡಲಿದೆ ಅನ್ನುವುದಕ್ಕೆ ಸಂಬಂಧಿಸಿದಂತೆ RBI ನಿಯಮ ಹೊರಡಿಸುವುದರ ಮೂಲಕ ಬ್ಯಾಂಕುಗಳಲ್ಲಿ ಐದು ಲಕ್ಷಕ್ಕಿಂತ ಅಧಿಕ ಹಣ ಇಟ್ಟವರಿಗೆ ಈಗ RBI ಬೇಸರದ ಸುದ್ದಿ ನೀಡಿದೆ ಎಂದು ಹೇಳಬಹುದು. ಬ್ಯಾಂಕುಗಳು ದಿವಾಳಿಯಾದರೆ ನಿಮಗೆ ಎಷ್ಟು ಹಣ ವಾಪಾಸ್ ಸಿಗಲಿದೆ ಅನ್ನುವುದರ ಬಗ್ಗೆ RBI ನಿಯಮ ಹೊರಡಿಸಿದೆ.
ಬ್ಯಾಂಕುಗಳು ದಿವಾಳಿಯಾದರೆ ಎಷ್ಟು ಹಣ ವಾಪಾಸ್ ಸಿಗಲಿದೆ
RBI ನಿಯಮದ ಪ್ರಕಾರ ಮತ್ತು ಕೇಂದ್ರ ಸರ್ಕಾರದ ನಿಯಮದ ಪ್ರಕಾರ, ನೀವು ಹಣ ಇತ್ತ ಬ್ಯಾಂಕುಗಳು ದಿನವಾಳಿಯಾದ ನೀವು ಐದು ಲಕ್ಷ ರೂಪಾಯಿಯನ್ನು ವಾಪಾಸ್ ಪಡೆದುಕೊಳ್ಳಬಹುದು. 2020 ರ ಬಜೆಟ್ ಸಮಯದಲ್ಲಿ ಕೇಂದ್ರದ ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಬ್ಯಾಂಕ್ ರಕ್ಷಣಾ ಮೊತ್ತವನ್ನು ಒಂದು ಲಕ್ಷದಿಂದ ಐದು ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಇನ್ನುಮುಂದೆ ನೀವು ಹಣ ಬ್ಯಾಂಕುಗಳು ದಿನವಾಳಿಯಾದರೆ ನೀವು ಐದು ಲಕ್ಷ ರೂಪಾಯಿಯನ್ನು ಮಾತ್ರ ಪಡೆಯಬಹುದು ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ನೀವು ಬ್ಯಾಂಕುಗಳಲ್ಲಿ ಠೇವಣಿ ರೂಪದಲ್ಲಿ ಇಟ್ಟಿದ್ದರೆ ಆ ಹಣಕ್ಕೆ ಯಾವುದೇ ರಕ್ಷಣೆ ಇಲ್ಲದೆ ಕೇಂದ್ರ ಸರ್ಕಾರ ಮತ್ತು RBI ಆದೇಶ ಹೊರಡಿಸಿದೆ.
ಬ್ಯಾಂಕುಗಳು ಯಾವ ದಿವಾಳಿಯಾಗುತ್ತದೆ
ಬ್ಯಾಂಕಿನ ಶೇರ್ ಕುಸಿತಕಂಡ ಸಮಯದಲ್ಲಿ ಮತ್ತು ಬ್ಯಾಂಕ್ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ ಸಮಯದಲ್ಲಿ ದುವಾಳಿತನ ಅನುಭವಿಸುತ್ತದೆ. ಈ ಕಾರಣಗಳಿಂದ ಹಣವನ್ನು ಇಡುವವರು ಆದಷ್ಟು ಸರ್ಕಾರೀ ಬ್ಯಾಂಕುಗಳಲ್ಲಿ ಹಣವನ್ನು ಇಡುವುದು ಬಹಳ ಉತ್ತಮ. SBI, ಕೆನರಾ ಬ್ಯಾಂಕ್ HDFC ಬ್ಯಾಂಕ್, ICICI ಬ್ಯಾಂಕುಗಳು ಹಣವನ್ನು ಹೂಡಿಕೆ ಮಾಡಲು ಉತ್ತಮ ಬ್ಯಾಂಕ್ ಎಂದು ಹೇಳಬಹುದು. ಬ್ಯಾಂಕುಗಳು ದಿವಾಳಿಯಾದರೆ ನೀವು ಇತ್ತ ಹಣ ಕೂಡ ದಿವಾಳಿ ಎಂದು ಹೇಳಬಹುದು.