BPL Ration Card New Rules: ದೇಶದಲ್ಲಿ ಕರೋನ ಸೋಂಕು ಕಾಣಿಸಿಕೊಂಡ ನಂತರೆ ಕೇಂದ್ರ ಮತ್ತು ರಾಜ್ಯ ಸರ್ಕಾರ BPL ರೇಷನ್ ಕಾರ್ಡ್ ಇದ್ದವರಿಗೆ ಉಚಿತ ರೇಷನ್ ದಾನ್ಯಗಳನ್ನು ವಿತರಣೆ ಮಾಡುತ್ತಾ ಬಂದಿದೆ. ಅದೇ ರೀತಿಯಲ್ಲಿ ದೇಶದಲ್ಲಿ ಅನೇಕರು ಇನ್ನೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಉಚಿತ ರೇಷನ್ ದಾನ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು. ಈನಡುವೆ ಈಗ ಕೇಂದ್ರ ಸರ್ಕಾರ BPL ರೇಷನ್ ಕಾರ್ಡ್ ಮತ್ತು ಉಚಿತ ಪಡಿತರ ದಾನ್ಯಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಇನ್ನುಮುಂದೆ ಇಂತವರು ಉಚಿತ ಪಡಿತರ ದಾನ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಉಚಿತ ಪಡಿತರ ದಾನ್ಯಗಳಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಹೊಸ ನಿಯಮ ಏನು ಮತ್ತು ಯಾರು ಯಾರು ಉಚಿತ ಪಡಿತರ ದಾನ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದಲ್ಲಿ 80 ಜನರು ಉಚಿತ ಪಡಿತರ ದಾನ್ಯ ಪಡೆಯುತ್ತಿದ್ದಾರೆ
ಹೌದು, ಕೇಂದ್ರ ಸರ್ಕಾರ ಬಿಡುಗಡೆ ಮಾಹಿತಿಯ ಪ್ರಕಾರ ದೇಶದಲ್ಲಿ ಸುಮಾರು 80 ಕೋಟಿ ಜನರು ಉಚಿತ ಪಡಿತರ ದಾನ್ಯ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇದರಲ್ಲಿ ಕೆಲವರು ಅನರ್ಹರು ಇದ್ದು ಅಂತವರ ಹೆಸರುಗಳನ್ನು ಈಗ ಡಿಲೀಟ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಬಡವರಿಗೆ ಸಿಗುವ ಪಡಿತರ ದಾನ್ಯಗಳನ್ನು ಅನರ್ಹರು ಕೂಡ ಪಡೆದುಕೊಳ್ಳುತ್ತಿದ್ದಾರೆ, ಈ ಕಾರಣಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೆಲವು ಅರ್ಹತಾ ಮಾನದಂಡ ಬಿಡುಗಡೆ ಮಾಡಿದೆ.
ಉಚಿತ ಪಡಿತರ ದಾನ್ಯ ಪಡೆಯಲು ಅರ್ಹತಾ ಮಾನದಂಡಗಳು
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇನ್ನುಮುಂದೆ ಉಚಿತ ಪಡಿತರ ದಾನ್ಯಗಳನ್ನು ಪಡೆಯಲು ಅರ್ಹತಾ ಮಾನದಂಡಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
* ನಿಮ್ಮ ಮನೆಯಲ್ಲಿ ಕೆಲವು ಅಗತ್ಯ ವಸ್ತುಗಳು ಅಥವಾ ಸೌಲಭ್ಯಗಳು ಇದ್ದರೆ ನೀವು BPL ರೇಷನ್ ಕಾರ್ಡುಗಳ ಅಡಿಯಲ್ಲಿ ಉಚಿತ ಪಡಿತರ ದಾನ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ.
* ಮನೆಯಲ್ಲಿ ಫ್ರಿಡ್ಜ್, ಎಚ್ ಅಥವಾ ಇತರೆ ಐಷಾರಾಮಿ ಬೆಲೆಬಾಳುವ ದಿನಬಳಕೆಯ ವಸ್ತುಗಳು ಇದ್ದರೂ ಕೂಡ ಅವರ BPL ರೇಷನ್ ಕಾರ್ಡ್ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿರುವುದಿಲ್ಲ.
* ಹಳ್ಳಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆ ಅಥವಾ ಅದಕ್ಕಿಂತ ಹೆಚ್ಚು ಭೂಮಿ ಇದ್ದವರು BPL ರೇಷನ್ ಕಾರ್ಡಿನ ಅಡಿಯಲ್ಲಿ ಉಚಿತ ಪಡಿತರ ದಾನ್ಯ ಪಡೆಯಲು ಅರ್ಹತೆ ಪಡೆದಿರುವುದಿಲ್ಲ.
* ನಗರ ಪ್ರದೇಶದಲ್ಲಿ 3 ಎಕರೆ ಅಥವಾ ಅದಕ್ಕಿಂತ ಹೆಚ್ಚು ಭೂಮಿ ಇದ್ದವರು BPL ರೇಷನ್ ಕಾರ್ಡ್ ಅಡಿಯಲ್ಲಿ ಉಚಿತ ಪಡಿತರ ದಾನ್ಯ ಪಡೆಯಲು ಅರ್ಹತೆ ಪಡೆದಿರುವುದಿಲ್ಲ.
* ಸರ್ಕಾರದಿಂದ ಲೈಸೆನ್ಸ್ ಪಡೆದುಕೊಂಡ ಆಯುಧಗಳು ಮನೆಯಲ್ಲಿ ಇದ್ದರೂ ಕೂಡ ಉಚಿತ ಪಡಿತರಕ್ಕೆ ಅರ್ಹತೆ ಇರುವುದಿಲ್ಲ.
* ಆದಾಯ ತೆರಿಗೆ ಅಥವಾ GST ಪಾವತಿ ಮಾಡುವವರು ಉಚಿತ ಪಡಿತರ ಪಡೆಯಲು ಅರ್ಹತೆ ಪಡೆದಿರುವುದಿಲ್ಲ.
ದಂಡದ ಜೊತೆ ಜೈಲು ಶಿಕ್ಷೆ ಅನುಭವಿಸಬೇಕು
ಸಕಾರದ ಮಾನದಂಡದ ನಂತರ ಕೂಡ ಸರ್ಕಾರಕ್ಕೆ ವಂಚನೆ ಮಾಡಿ BPL ರೇಷನ್ ಕಾರ್ಡ್ ಪಡೆದುಕೊಂಡು ಸರ್ಕಾರದಿಂದ ಬಡವರಿಗೆ ಸಿಗಬೇಕಾದ ಉಚಿತ ಪಡಿತರ ದಾನ್ಯ ಪದ್ದುಕೊಂಡರೆ ಅವರ ಮೇಲೆ ದೂರು ದಾಖಲಿಸಿ ಅವರಿಗೆ ಸೂಕ್ತ ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ ಮತ್ತು ಅದೇ ರೀತಿಯಲ್ಲಿ ಜೈಲು ಕೂಡ ವಿಧಿಸಲು ಆದೇಶ ಹೊರಡಿಸಲಾಗಿದೆ.