RCB Today Match: ಇಂದು RCB ಮತ್ತು ಚನ್ನೈ IPL ಪಂದ್ಯ ನಡೆಯಲಿದ್ದು ಈ ಪಂದ್ಯಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ RCB ಪ್ಲೇ ಆಫ್ ತಲುಪುವುದು ಬಹುತೇಕ ಖಚಿತವಾಗಿದೆ ಮತ್ತು ಚನ್ನೈ ತಂಡ ಈಗಾಗಲೇ IPL 2025 ರಿಂದ ಹೊರಬಿದ್ದಿದೆ ಎಂದು ಹೇಳಬಹುದು. ಈ ನಡುವೆ ಇಂದು ಬೆಂಗಳೂರಿನಲ್ಲಿ RCB ಮತ್ತು ಚನ್ನೈ ಪಂದ್ಯ ನಡೆಯುತ್ತಿದ್ದು ಈ ಪಂದ್ಯ ಮಳೆಬಂದು ರದ್ದಾಗುವ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ. RCB ಮತ್ತು ಚನ್ನೈ ನಡುವಿನ ಪಂದ್ಯ ಮಳೆಬಂದು ರದ್ದಾದರೆ RCB ಪ್ಲೇ ಆಫ್ ತಲುಪುವುದು ಕಷ್ಟಪವಾಗುತ್ತ ಮತ್ತು ಪಂದ್ಯ ರದ್ದಾದರೆ ಏನೇನು ಸಮಸ್ಯೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತವರಿನಲ್ಲಿ ನಡೆಯುತ್ತಿದೆ RCB ಪಂದ್ಯ
ಹೌದು RCB ಮತ್ತು ಚನ್ನೈ ನಡುವಿನ ಪಂದ್ಯ ತವರಿನಲ್ಲಿ ನಡೆಯುತ್ತಿದ್ದು ಇಂದಿನ ಫೆವರೇಟ್ ತಂಡ RCB ಎಂದು ಹೇಳಬಹುದು. ಈ ನಡುವೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಬಹುದು. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು ಇಂದು ಕೂಡ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. RCB ತಂಡ ಈಗಾಗಲೇ ಪಾಯಿಂಟ್ಸ್ ಟಬೇಲ್ ನಲ್ಲಿ ಮೇಲಕ್ಕೆ ಇದ್ದು ಇಂದಿನ ಪಂದ್ಯ ಗೆದ್ದರೆ RCB ಪಾಯಿಂಟ್ ಟೇಬಲ್ ನಲ್ಲಿ ಮೊದಲ ಎರಡು ಸ್ಥಾನದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲಿದೆ.
ಮಳೆ ಬಂದು ಪಂದ್ಯ ರದ್ದಾದರೆ ಏನು ಗತಿ
ಹೌದು, ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು ಒಂದುವೇಳೆ ಇಂದು ಕೂಡ ಮಳೆ ಬಂದರೆ ಪಂದ್ಯ ರದ್ದಾಗಲಿದೆ ಎಂದು ಹೇಳಬಹುದು. ಇನ್ನು ಅಂಕಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿ ಇರುವ RCB ಎರಡನೆಯ ಸ್ಥಾನಕ್ಕೆ ಬರಬೇಕಾದರೆ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಈಗಾಗಲೇ 10 ಪಂದ್ಯಗಳಲ್ಲಿ RCB 14 ಅಂಕಗಳನ್ನು ಗಳಿಸಿಕೊಂಡಿದೆ. ಇಂದು ಪಂದ್ಯ ರದ್ದಾದರೆ ಎರಡು ತಂಡಕ್ಕೆ ತಲಾ ಒಂದು ಅಂಕ ಕೊಡಲಾಗಿದೆ. ಇಂದು RCB ಗೆ ಒಂದು ಅಂಕ ಕೊಟ್ಟರೆ RCB ಒಟ್ಟು ಅಂಕ 15 ಅಂಕ ಆಗಲಿದೆ.
ಸದ್ಯದ ಪರಿಸ್ಥಿತಿ ಕಂಡರೆ RCB ಪಾಲಿ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಕನಿಷ್ಠ 20 ಅಂಕ ಗಳಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. RCB ಗೆ ಇನ್ನು ಮೂರೂ ಪಂದ್ಯಗಳು ಇದ್ದು ಆ ಪಂದ್ಯಗಳನ್ನು ಗೆದ್ದರೆ RCB ತಂಡದ ಒಟ್ಟು ಅಂಕ 21 ಆಗಲಿದ್ದು RCB ಸುಲಭವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ. RCB ಇನ್ನುಳಿದ ಪಂದ್ಯದಲ್ಲಿ ಗೆಲ್ಲುವುದು ಅತೀ ಅಗತ್ಯವಾಗಿದೆ ಮತ್ತು ಸೋತರೆ RCB ಪ್ಲೇ ಆಫ್ ಹಾದಿ ಸ್ವಲ್ಪ ಕಠಿಣವಾಗಲಿದೆ ಎಂದು ಹೇಳಬಹುದು. ಇಂದಿನ ಪಂದ್ಯದಲ್ಲಿ RCB ಫೆವರೇಟ್ ತಂಡ ಆಗಿದ್ದು ಬೆಂಗಳೂರಿನಲ್ಲಿ ಇಂದು ಮೊದಲು ಬ್ಯಾಟಿಂಗ್ ಮಾಡಿದ ತಂಡ ವಿನ್ ಆಗುವ ಸಾಧ್ಯತೆ ಹೆಚ್ಚಿದೆ.