Shubman Gill And Abhishek Sharma: ನಿನ್ನೆ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆದ ರೋಚಕ ಪಂದ್ಯದಲ್ಲಿ ಗುಜರಾತ್ ತಂಡ ಭರ್ಜರಿ ಗೆಲುವುದು ಸಾಧಿಸಿದೆ ಎಂದು ಹೇಳಬಹುದು. ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡದ ಗಿಲ್ ಮತ್ತು ಬಟ್ಲರ್ ಅವರ ಅಮೋಘ ಆಟದ ಮೂಲಕ ದೊಡ್ಡ ಮೊತ್ತ ಕಲೆಹಾಕಿತ್ತು. ಇನ್ನು ಗುಜರಾತ್ ನೀಡಿದ್ದ ಮೊತ್ತವನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ಕೂಡ ಆರಂಭದಲ್ಲಿ ಉತ್ತವಾಗಿ ಆತ ಆಡಿದರೂ ಕೂಡ ಕೊನೆಯಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಗುಜರಾತ್ ಪ್ಲೇ ಆಫ್ ಪ್ರವೇಶ ಹಾದಿಯನ್ನು ಇನ್ನಷ್ಟು ಸುಲಭ ಮಾಡಿಕೊಂಡಿದೆ ಎಂದು ಹೇಳಬಹುದು.
ಅಭಿಷೇಕ್ ಶರ್ಮಾಗೆ ಕಾಲಿನಿಂದ ಒದ್ದ ಗಿಲ್
ಹೌದು, ನಿನ್ನೆ ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮ (Abhishek Sharma) ಅವರಿಗೆ ಗಿಲ್ (Shubman Gill) ಅವರು ಕಾಲಿನಿಂದ ಒಡ್ಡಿದ್ದು ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದೆ. ಪಂದ್ಯದದಲ್ಲಿ ಮದ್ಯದಲ್ಲಿ ಡ್ರಿಂಕ್ ಬ್ರೇಕ್ ನೀಡಲಾಗಿತ್ತು ಮತ್ತು ಆಸಮಯದಲ್ಲಿ ಅಭಿಷೇಕ್ ಶರ್ಮ ಅವರು ಮೈದಾನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಗಿಲ್ ಅವರು ಅಭಿಷೇಕ್ ಶರ್ಮ ಅವರಿಗೆ ಕಾಲಿನಿಂದ ಒದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯಲ್ಲಿ ಅರ್ಥವನ್ನು ಪಡೆದುಕೊಂಡಿದೆ.
ಗಿಲ್ ಕಾಲಿನಿಂದ ಒಡ್ಡಿದ್ದು ಏಕೆ ಗೊತ್ತಾ
ಪಂದ್ಯದ ವಿಶ್ರಾಂತಿ ಸಮಯದಲ್ಲಿ ಗಿಲ್ ಅವರು ಅಭಿಷೇಕ್ ಶರ್ಮ ಅವರಿಗೆ ಕಾಲಿನಿಂದ ಒದ್ದಿದ್ದಾರೆ. ಪಂದ್ಯದಲ್ಲಿ ಸಮಯದಲ್ಲಿ ಹೆಚ್ಚು ಸಮಯ ವಿಶ್ರಾಂತಿ ಪಡೆದರೆ ದಂಡ ಹಾಕಲಾಗುತ್ತದೆ. ಈ ಕಾರಣಕ್ಕೆ ಗಿಲ್ ಅವರು ಅಭಿಷೇಕ್ ಶರ್ಮ ಅವರ ಬಳಿ ತಮಾಷೆ ಮಾದುದ್ದ ರೆಸ್ಟ್ ಮಾಡಿದ್ದು ಸಾಕು ಬೇಗ ಎದ್ದೇಳು ಎಂದು ಕಾಲಿನಿಂದ ತಮಾಷೆಗೆ ಒದ್ದಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ ಮತ್ತು ಜನರು ಇದಕ್ಕೆ ನಾನಾ ರೀತಿಯಲ್ಲಿ ಅರ್ಥ ಕಲ್ಪಿಸಿಕೊಂಡು ಮಾತನಾಡುತ್ತಿದ್ದಾರೆ.
Subman Gill and Abhishek Sharma Funny moments #Abhishek#GTvsSRH #Gill pic.twitter.com/dcahauyeO6
— The KALKI 🗡️ (@TheKalkispeaks) May 2, 2025