RCB Points In IPL 2025: ದೇಶದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿರುವ ತಂಡವಾದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಈಗಾಗಲೇ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೇಚ್ಚು 16 ಅಂಕಗಳನ್ನು ಗಳಿಸಿಕೊಂಡು ಪ್ಲೇ ಆಫ್ ಹಾದಿಯಲ್ಲಿ ಇದೆ ಎಂದು ಹೇಳಬಹುದು. ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರೋಚಕ ಜಯ ಸಾಧಿಸುವುದರ ಮೂಲಕ RCN ಪ್ಲೇ ಆಫ್ ಹಾದಿಯಲ್ಲಿ ಇನ್ನಷ್ಟು ಸರಳ ಮಾಡಿಕೊಂಡಿದೆ. ಹೌದು, ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ RCB ಎರಡು ರನ್ನುಗಳ ಜಯ ಸಾಧಿಸಿದೆ. RCB 16 ಅಂಕಗಳನ್ನು ಗಳಿಸಿಕೊಂಡಿದ್ದರೂ ಕೂಡ ಪ್ಲೇ ಆಫ್ ತಲುಪುವುದು ಇನ್ನೂ ಕೂಡ ಕಷ್ಟವಾಗಿದೆ ಎಂದು ಹೇಳಬಹುದು. ಪ್ಲೇ ಆಫ್ ತಲುಪಲು ಎಲ್ಲಾ ತಂಡಗಳು ಹರಸಾಹಸವನ್ನು ಪಡುತ್ತಿರುವ ಸಮಯದಲ್ಲಿ RCB ಕೂಡ ಪ್ಲೇ ಆಫ್ ಹಾದಿಯಲ್ಲಿ ಇದ್ದು ಮುಂದಿನ ಪಂದ್ಯಗಳು ನಿರ್ಣಾಯಕ ಪಂದ್ಯಗಳು ಆಗಿದೆ.
ಪ್ಲೇ ಆಫ್ ತಲುಪಲು ಮುಂದಿನ ಪಂದ್ಯ ಗೆಲ್ಲುವುದು ಅಗತ್ಯ
ಹೌದು, ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಳ್ಳಲು ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅತೀ ಅಗತ್ಯವಾಗಿದೆ. ಸದ್ಯ RCB ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿ ಇದ್ದರೂ ಕೂಡ ಮುಂದಿನ ಪಂದ್ಯಗಳನ್ನು ಗೆಲ್ಲುವುದು ಅತೀ ಅಗತ್ಯವಾಗಿದೆ. RCB ತಂಡಕ್ಕೆ ಇನ್ನೂ ಕೂಡ ಮೂರೂ ಪಂದ್ಯಗಳು ಇದ್ದು ಮೂರೂ ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳನ್ನು RCB ವಿನ್ ಆಗಬೇಕು. ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನ ಖಚಿತಪಡಿಸಿಕೊಳ್ಳಲು RCB ಮುಂದಿನ ಮೂರೂ ಪಂದ್ಯದಲ್ಲಿ ಎರಡು ಪಂದ್ಯ ಗೆದ್ದು 20 ಅಂಕ ಗಳಿಸಿಕೊಳ್ಳಬೇಕು.
RCB ಫೈನಲ್ ತಲುಪುವುದು ಖಚಿತ
RCB ಈ ಬಾರಿಯ IPL ನಲ್ಲಿ ಬಹಳ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ ಮತ್ತು RCB ನೀಡುತ್ತಿರುವ ಪ್ರದರ್ಶನ ಕಂಡ ಈ ಬಾರಿ RCB ಕಪ್ ಗೆಲ್ಲುವುದು ಖಚಿತ ಎಂದು ಕೂಡ ಹೇಳಲಾಗುತ್ತಿದೆ. ಅದೇ ರೀತಿಯಲ್ಲಿ RCB ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಎರಡು ಸ್ಥಾನದಲ್ಲಿ ಒಂದು ಸ್ಥಾನ ಖಚಿತಪಡಿಸಿಕೊಂಡರೆ ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ಸೋತರು ಯಾವುದೇ ಸಮಸ್ಯೆ ಇರುವುದಿಲ್ಲ. ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ಸೋತ ತಂಡ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ನಡುವೆ ಇನ್ನೊಂದು ಕ್ವಾಲಿಫೈರ್ ಪಂದ್ಯ ಆಡಲಿದೆ.
ಈಡೇರುತ್ತ ಕೋಟ್ಯಾಂತರ ಅಭಿಮಾನಿಗಳ ಕನಸು
RCB ಅಭಿಮಾನಿಗಳು ಕಳೆದ 18 ವರ್ಷದಿಂದ IPL ಕಪ್ ಗೆಲ್ಲಲು ಕಾದು ಕುಳಿತ್ತಿದ್ದಾರೆ. ಈ ಬಾರಿಯ RCB ಪ್ರದರ್ಶನವನ್ನು ಕಂಡರೆ ಈ ಬಾರಿ RCB IPL ಕಪ್ ಗೆಲ್ಲುವುದು ಖಚಿತ ಅನ್ನುವುದು ಸಾಕಷ್ಟು ಜನರ ಅಭಿಪ್ರಾಯ ಕೂಡ ಆಗಿದೆ. ಈ ಬಾರಿ ಕಪ್ ಗೆದ್ದರೆ ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಲಿದೆ ಎಂದು ಹೇಳಬಹುದು. ಸದ್ಯ RCB 16 ಅಂಕ ಗಳಿಸಿಕೊಂಡರು ಕೂಡ ಇನ್ನು ಪ್ಲೇ ಆಫ್ ಪ್ರವೇಶ ಖಚಿತವಾಗಿಲ್ಲ. ಗುಜರಾತ್ ಮತ್ತು ಮುಂಬೈ ತಂಡ ಮುಂದಿನ ಎಲ್ಲಾ ಪಂದ್ಯದಲ್ಲಿ ಗೆದ್ದರೆ RCB ಮೂರನೇ ಸ್ಥಾನಕ್ಕೆ ಬರಲಿದೆ.