Barrier Free Toll System In India:ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ Nitin Gadkari ಅವರು ಟೋಲ್ ಗೇಟ್ ನಲ್ಲಿ ವಾಹನಗಳು ಕಾಯುವ ಸಮಯ ಕಡಿಮೆ ಮಾಡುವ ಉದ್ದೇಶದಿಂದ ದೇಶಾದ್ಯಂತ ಹೊಸ ಟೋಲ್ ನಿಯಮ ಜಾರಿಗೆ ತಂದಿದ್ದಾರೆ. 2026 ರ ಅಂತ್ಯದ ಒಳಗೆ ದೇಶಾದ್ಯಂತ ಈ ಹೊಸ ಟೋಲ್ ಸೇವೆ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ ಈಗ Barrier electronic toll collection system ಜಾರಿಗೆ ತಂದಿದ್ದು ಇನ್ನುಮುಂದೆ ವಾಹನ ಸವಾರರು ಟೋಲ್ ಗೇಟ್ ನಲ್ಲಿ ನಿಲ್ಲುವ ಅಗತ್ಯ ಇರುವುದಿಲ್ಲ. ಹಾಗಾದರೆ ಏನಿದು barrier electronic toll collection system ಮತ್ತು ಇದು ಹೇಗೆ ಕಾರ್ಯ ನಿರ್ವಹಿಸುತ್ತೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ Nitin Gadkari ಅವರು ಡಿಸೆಂಬರ್ 4 2025 ರಲ್ಲಿ ಲೋಕಸಭೆಯಲ್ಲಿ ಬ್ಯಾರಿಯರ್ ಫ್ರೀ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ (barrier electronic toll collection system) ಅನ್ನು ಜಾರಿಗೆ ತರುವಂತೆ ಘೋಷಣೆ ಮಾಡಿದ್ದಾರೆ. ಹೊಸ ವ್ಯವಸ್ಥೆಯನ್ನುನ್ ಈಗಾಗಲೇ 10 ಸ್ಥಳಗಳಲ್ಲಿ ಜಾರಿಗೆ ತರಲಾಗಿದ್ದು, ಇನ್ನು ಒಂದು ವರ್ಷದೊಳಗೆ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸಮಯ ಮತ್ತು ಇಂಧನದ ಉಳಿತಾಯ ಆಗುತ್ತದೆ.
ಹೊಸ ಟೋಲ್ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಈ ಹೊಸ MLFF (Multi-Lane-Free-Flow) ವ್ಯವಸ್ಥೆಯಲ್ಲಿ AI ಆಧಾರಿತ Automatic number-plate recognition (ANPR) ಕ್ಯಾಮೆರಾಗಳು ಮತ್ತು ಹೈ ಸ್ಪೀಡ್ RFID ರೀಡರ್ ಗಳನ್ನು ಅಳವಡಿಸಲಾಗಿದೆ. FASTag RFID ಟ್ಯಾಗ್ ಮೂಲಕ ಆಟೋಮ್ಯಾಟಿಕ್ ಡಿಡಕ್ಷನ್ (Automatic Deduction) ಮಾಡುತ್ತದೆ. ಟೋಲ್ ಗೇಟ್ ನಲ್ಲಿ ವಾಹನದ ಮೇಲಿನ ಟ್ಯಾಗ್ ಸ್ಕ್ಯಾನ್ ಆಗಿ, ಬ್ಯಾಂಕ್ ಅಕೌಂಟ್ ನಿಂದ ಹಣ ಕಡಿತವಾಗುತ್ತದೆ. ವಾಹನಗಳು 80 ಕಿಲೋಮೀಟರ್ ವೇಗದಲ್ಲಿ ಸಹ ಟೋಲ್ ದಾಟಬಹುದು. ಟೋಲ್ ಗೇಟ್ ನಲ್ಲಿ ಯಾವುದೇ ಗೇಟ್ ಇರುವುದಿಲ್ಲ ಮತ್ತು ವಾಹನ ಸವಾರರು ಟೋಲ್ ಗೇಟ್ ನಲ್ಲಿ ವಾಹನ ನಿಲ್ಲಿಸುವ ಅಗತ್ಯ ಇಲ್ಲ.
ಹೊಸ ಟೋಲ್ ವ್ಯವಸ್ಥೆ ಈಗಾಗಲೇ ಪ್ರಗತಿಯಲ್ಲಿದೆ
ಈಗಾಗಲೇ ಗುಜರಾತ್ ನ ಚೋರ್ಯಾಸಿ ಟೋಲ್ ಪ್ಲಾಜಾ ಸೇರಿದಂತೆ ಕೆಲವು ಕಡೆಗಳಲ್ಲಿ ಪೈಲಟ್ ಪ್ರಾಜೆಕ್ಟ್ ಗಳು ಆರಂಭವಾಗಿವೆ. 2025-26 ರಲ್ಲಿ ಸುಮಾರು 25 ಟೋಲ್ ಪ್ಲಾಜಾ ಗಳಲ್ಲಿ ಈ ವ್ಯವಸ್ಥೆ ಜಾರಿಗೊಳ್ಳಲಿದೆ. ದೇಶದಲ್ಲಿ ಸುಮಾರು 1,050 ಟೋಲ್ ಪ್ಲಾಜಾ ಗಳಿವೆ, ಇವೆಲ್ಲವೂ 2026 ಕ್ಕೆ ಬ್ಯಾರಿಯರ್ ಫ್ರೀ ಆಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ Nitin Gadkari ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಟೂಲ್ ವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಗಳು
ಪ್ರಸ್ತುತವಾಗಿ ಜಾರಿಯಲ್ಲಿರುವ ಟೋಲ್ ನಿಯಮಗಳು ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದೆ. ಈಗಾಗಲೇ ಜಾರಿಯಲ್ಲಿರುವ ಟೋಲ್ ವ್ಯವಸ್ಥೆಯಿಂದ ಆಗುತ್ತಿರುವ ಸಮಯಗಳು ಈ ಕೆಳಗಿನಂತಿದೆ.
ಟ್ರಾಫಿಕ್ ಜಾಮ್
ಸರದಿ ಸಾಲುಗಳು
ಇಂಧನ ವ್ಯರ್ತ
ಸಮಯ ವ್ಯರ್ಥ
ಹೊಸ ಟೋಲ್ ಸಿಸ್ಟಮ್ ನಿಂದ ಆಗುವ ಲಾಭಗಳು
ಟ್ರಾಫಿಕ್ ಜಾಮ್ ಕಡಿಮೆ ಆಗುತ್ತದೆ.
ಪ್ರಯಾಣಿಕರ ಸಮಯ ಉಳಿತಾಯ ಆಗುತ್ತದೆ.
ಇಂಗಾಲದ ಹೊರಸೂಸುವಿಕೆ 15 ರಿಂದ 20% ಕಡಿಮೆ ಆಗುತ್ತದೆ.
ವಾರ್ಷಿಕವಾಗಿ 1,500 ಕೋಟಿ ರೂಪಾಯಿ ಮೌಲ್ಯದ ಇಂಧನ ಉಳಿತಾಯ
ಸರ್ಕಾರಕ್ಕೆ ಹೆಚ್ಚುವರಿ 6,000 ಕೋಟಿ ರೂಪಾಯಿ ಆದಾಯ ಬರಲಿದೆ
ಸುಗಮ ಮತ್ತು ವೇಗ ಸಂಚಾರ ಅನುಭವ ದೊರೆಯಲಿದೆ
ಟೋಲ್ ಕಳ್ಳತನಕ್ಕೂ ಕಡಿವಾಣ
ಒಟ್ಟಾರೆಯಾಗಿ ಈ ಟೂಲ್ ಸಿಸ್ಟಮ್ ಆರ್ಥಿಕ ಮತ್ತು ಪರಿಸರ ಸ್ನೇಹಿ ಆಗಿ ಕಾರ್ಯವನ್ನು ಮಾಡುತ್ತದೆ.
ಹಾಗಾದರೆ Fastag ರದ್ದಾಗುತ್ತಾ?
barrier electronic toll collection system ಜಾರಿಗೆ ಬಂದನಂತರ Fastag ರದ್ದಾಗುತ್ತಾ ಅನ್ನುವ ಪ್ರಶ್ನೆ ಕೆಲವರಲ್ಲಿ ಮೂಡಿದೆ. ಜನರ ಈ ಪ್ರಶ್ನೆಗೆ ಉತ್ತರ ಕೊಟ್ಟಿರ ಕೇಂದ್ರ ಸರ್ಕಾರ, Fastag ರದ್ದಾಗುವುದಿಲ್ಲ ಮತ್ತು Fastag ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟನೆ ಕೊಟ್ಟಿದೆ. ಈ ಮಲ್ಟಿ-ಲೇನ್ ಫ್ರೀ ಫ್ಲೋ (MLFF) ವ್ಯವಸ್ಥೆಯಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಇನ್ನೂ ಬಳಸಲಾಗುತ್ತದೆ. ಹೈ ಸ್ಪೀಡ್ RFID ರೀಡರ್‌ಗಳು ಫಾಸ್ಟ್‌ಟ್ಯಾಗ್ ಅನ್ನು ಓದಿ ಟೋಲ್ ಕಡಿತ ಮಾಡಲಿವೆ. ಜೊತೆಗೆ ANPR ಕ್ಯಾಮೆರಾಗಳು ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಬ್ಯಾಕಪ್ ಆಗಿ ಕೆಲಸ ಮಾಡಲಿವೆ. ನೇರವಾಗಿ ಬ್ಯಾಂಕ್ ಖಾತೆಯಿಂದ ಹಣ ಕಟ್ ಮಾಡಲಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.
Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged.
📩 Contact: [email protected]